- ಮಲ್ಪೆ: ದಿನಾಂಕ 17/04/2011 ರಂದು ರಾತ್ರಿ ಸಮಯ ಕನ್ನರ್ಪಾಡಿ ಕಡೇಕಾರು ಗ್ರಾಮ ಎಂಬಲ್ಲಿಂದ ಸುಮಾರು 22,995/- ರೂಪಾಯಿ ಬೆಲೆ ಬಾಳುವ ಕೇಬಲ್ ವಯರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ ಈ ಬಗ್ಗೆ ವಾಕರೆ, ಬಿನ್ ಕಶಪ್ಪ, ವಾಸ: ಎಸ್।ಡಿ.ಇ. ಅಜ್ಜರಕಾಡು, ನಾಯರ್ಕೆರೆ ಮೈನ್ ರೋಡ್, ಅಜ್ಜರಕಾಡು, ಉಡುಪಿರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2011 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕೊಂಕಣ ರೈಲ್ವೆ: ದಿನಾಂಕ 23/04/2011 ರಂದು ರಾತ್ರಿ 11:10ಕ್ಕೆ ಪೂರ್ಣ ಎಕ್ಸ್‌ಪ್ರೆಸ್ ಟ್ರೈನ್ ನಂ 11097 ರಲ್ಲಿ ಎಸ್9 ಬೋಗಿನಲ್ಲಿ ಸೀಟ್ ನಂ 1, 2, 3 ರಲ್ಲಿ ಸುಶೀಲ ವಿಜಯ ದೇವಾಡಿಗ (36) ಗಂಡ: ವಿಜಯ ದೇವಾಡಿಗ, ವಾಸ: ಬೂರದ ಹಕ್ಲಮನೆ, ಕಟ್ಟಿನ ಮಕ್ಕಿ, ಹರ್ಕೂರು ಗ್ರಾಮ, ಕುಂದಾಪುರ ತಾಲೂಕು ಎಂಬವರು ಪೂನಾದಿಂದ ತನ್ನ ತಾಯಿ ಮನೆಯಾದ ಕುಂದಾಪುರಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಬೆಳೆಸಿದ್ದು, ದಿನಾಂಕ 24/04/2011 ರಂದು ರೈಲು ಭಟ್ಕಳ ಸ್ಟೇಷನ್ ತಲುಪಿದ ನಂತರ ಆ ಬೋಗಿಯಲ್ಲಿದ್ದ 7-8 ಹುಡುಗರು ಸುಶೀಲ ವಿಜಯ ದೇವಾಡಿಗರವರಿಗೆ ಇಳಿಸಲು ಸಹಕರಿಸುವಂತೆ ನಟಿಸಿ ಸೂಟ್‌ಕೇಸನ್ನು ಪಡೆದು ರೈಲಿನ ಶೌಚಾಲಯದ ಹತ್ತಿರ ಹೋಗಿ ತೆಗೆದುಕೊಂಡು ಹೋಗಿ ಅಲ್ಲಿ ಸೂಟ್‌ಕೇಸನ್ನು ಸುತ್ತುವರಿದು ನಿಂತು ಸುಶೀಲ ವಿಜಯ ದೇವಾಡಿಗರನ್ನು ಹಾಗೂ ಆಕೆಯ ಮಗಳನ್ನು ಅಲ್ಲಿಗೆ ಬರದಂತೆ ಹೇಳಿದ್ದು ಕುಂದಾಪುರ ರೈಲ್ವೆ ಸ್ಟೇಷನ್ ತಲುಪಿದಾಗ ಸೂಟ್‌ಕೇಸನ್ನು ಅಲ್ಲಿಯೇ ಬಿಟ್ಟು ತೆಗೆದು ಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ। ಸುಶೀಲ ವಿಜಯ ದೇವಾಡಿಗರವರು ಇಳಿದು ಸೂಟ್‌ಕೇಸನ್ನು ನೋಡಿದಾಗ ಅದರ ಒಂದು ಬದಿಯ ಲಾಕನ್ನು ಬಲತ್ಕಾರವಾಗಿ ಮುರಿದಿರುವುದು ಕಂಡು ಬಂತು. ಸೂಟ್‌ಕೇಸನ್ನು ತೆರೆದು ನೋಡಿದಾಗ ಅದರ ಒಳಗೆ ಇಟ್ಟಿದ್ದ ಕರಿಮಣಿ ಸರ-ಸುಮಾರು 6 ಪವನ್, ಲಕ್ಷ್ಮೀಯ ದೊಡ್ಡ ಪೆಂಡೆಂಟ್ ಇರುವ 4 ಪವನಿನ ಗುಂಡುಮಣಿ ಸರ-1, ಸುಮಾರು 1 ಪವನ್ ತೂಕದ ಬಂಗಾರ ಪ್ಲೈನ್ ಚೈನ್-1, 3 ಗ್ರಾಂ ತೂಕದ ಒಂದು ಉಂಗುರ, ಬಿಳಿ ಹರಳಿರುವ ಮಾಟಿ, ಲೋಲಕ್ ಇರುವ ಬೆಂಡೋಲೆ ಒಂದು ಜೊತೆ ಹಾಗೂ ನಗದು 10,000/- ರೂಪಾಯಿ ಕಳವಾಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1,50,000/- ರೂ. ಆಗಿರುತ್ತದೆ. ಭಟ್ಕಳ ರೈಲ್ವೆ ನಿಲ್ದಾಣದಿಂದ ಕುಂದಾಪುರ ರೈಲ್ವೆ ನಿಲ್ದಾಣದ ನಡುವೆ ಸಂಜೆ 4:30 ರಿಂದ 5:30 ಗಂಟೆಯ ನಡುವೆ ಬೋಗಿಯಲ್ಲಿದ್ದ 7-8 ಜನ ಗುಂಪಿನ ಯುವಕರು ಈ ಒಡವೆಗಳನ್ನು ಕಳವು ಮಾಡಿರಬಹುದಾಗಿದೆ ಎಂಬುದಾಗಿ ಸುಶೀಲ ವಿಜಯ ದೇವಾಡಿಗರವರು ನೀಡಿದ ದೂರಿನಂತೆ ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2011 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕಾರ್ಕಳ: ದಿನಾಂಕ: 29/04/2011 ರಂದು ಶ್ರೀ ಸೂರಪ್ಪ ಶಟ್ಟಿ (75) ಬಿನ್ ದಿವಂಗತ ಅಪ್ಪು ಶೆಟ್ಟಿ ವಾಸ: ಗುಂಡ್ಯಡ್ಕ ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು ಎಂಬವರು ತನ್ನ ಸೊಸೆಯ ಮಗಳ ಮೆಹಂದಿ ಕಾರ್ಯಕ್ರಮಕ್ಕೆ ಮುನಿಯಾಲಿಗೆ ಹೋಗಿದ್ದು ಮೆಹಂದಿ ಕಾರ್ಯಕ್ರಮ ಮುಗಿಸಿ ಬೆಳಿಗ್ಗೆ ಮುನಿಯಾಲಿನಿಂದ ಬಸ್ಸಿನಲ್ಲಿ ವಾಪಾಸು ಕಾರ್ಕಳಕ್ಕೆ ಹೊರಟು ಬಂದು ಕಾಬೆಟ್ಟು ಜಂಕ್ಷನ್‌ನ ಬಳಿ ಬಸ್ಸಿನಿಂದ ಇಳಿದು ಗುಂಡ್ಯಡ್ಕ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ್ಕಳ ಬಸ್ಸು ನಿಲ್ದಾಣದ ಕಡೆಯಿಂದ ಜೋಡುರಸ್ತೆ ಕಡೆಗೆ ಕೆಎ-20 ಆರ್-6412 ನೇ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಮೈ ಕೈಗೆ ತರಚಿದ ಗಾಯವಾಗಿದ್ದು, ಬಲ ಕಾಲಿನ ಮೂಳೆ ಮುರಿತವುಂಟಾಗಿರುತ್ತದೆ ಎಂಬುದಾಗಿ ಸೂರಪ್ಪ ಶಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2011 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕಾರ್ಕಳ: ದಿನಾಂಕ: 28।04.2011 ರಂದು ರಾತ್ರಿ 20:00 ಗಂಟೆಗೆ ಕಾರ್ಕಳ ತಾಲೂಕು, ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಎಂಬಲ್ಲಿ ಆಟೋ ರಿಕ್ಷಾ ನಂಬ್ರ ಕೆ.ಎ.20-9154 ನೇದರ ಚಾಲಕ ರವಿ ಶೆಟ್ಟಿ ಎಂಬಾತನು ಸದ್ರಿ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್ ಸವಾರಿ ಮಾಡುತ್ತಿದ್ದ ರತ್ನಾಕರ ಎಂಬವರಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಾಯಾಳು ರತ್ನಾಕರರವರಿಗೆ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಲಾಗಿರುತ್ತದೆ. ಎಂಬುದಾಗಿ ಗಾಯಾಳುವಿನ ಅಣ್ಣ ದಾಮೋದರ ಆಚಾರ್ಯ (48) ಬಿನ್ ದಿವಂಗತ ನಾರಾಯಣ ಆಚಾರ್ಯ, ವಾಸ: ಅರದಾಳ ಮನೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಎಂಬವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2011 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕಾರ್ಕಳ: ದಿನಾಂಕ 29.04.2011 ರಂದು ಸಂಜೆ 4:00 ಗಂಟೆ ಸಮಯಕ್ಕೆ ಪಿರ್ಯಾಧಿ ನೀಲಯ್ಯ ಬಿನ್ ಚಕ್ಕಿ ವಾಸ:ಬೋರುಗುಡ್ಡೆ, ಅಂಬಿಗಾ ನಿವಾಸ, ಎಲಿಯೂರು ಅಂಚೆ, ನೆಲ್ಲಿಕಾರು ಗ್ರಾಮ, ಮಂಗಳೂರು ತಾಲೂಕು, ಎಂಬವರ ಅಕ್ಕನ ಮಗ ಶುಭಕರ (23) ಎಂಬಾತನು ಕಾರ್ಕಳ ತಾಲೂಕು, ದುರ್ಗಾ ಗ್ರಾಮದ ಮಲೆ ಹಿತ್ಲು, ಎಂಬಲ್ಲಿನ ವಿರೂಪಾಕ್ಷ ಮರಾಠ ಎಂಬವರ ಹಳೆಯ ಮನೆಯ ಕೆಲಸ ಮಾಡಿ ಮನೆಯ ಬಳಿ ಇರುವ ಮೀಯಾರು ಹೊಳೆಗೆ ಸ್ನಾನಕ್ಕೆ ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ನೀಲಯ್ಯ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2011 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.