Wednesday, April 27, 2011

Daily Crimes Reported as on 27/08/2011 at 07:00 hrs

ಅಪಘಾತ ಪ್ರಕರಣಗಳು




  • ಉಡುಪಿ: ದಿನಾಂಕ 26-04-11ರಂದು ಜರ್ನಾಧನ(39), ತಂದೆ: ರಾಮಕೃಷ್ಣ ಭಟ್‌, ವಾಸ: ಓಕುಡೆ ಟವರ್ಸ್‌‌, ಕಡಿಯಾಳಿ, ಉಡುಪಿ ಎಂಬವರು ತಮ್ಮ ಕಾರನ್ನು ಸವಾರಿ ಮಾಡಿಕೊಂಡು ತನ್ನ ಮನೆಯಿಂದ ಕಚೇರಿಗೆ ಕಡೆಗೆ ಬರುತ್ತಿರುವಾಗ್ಗೆ ಚಿಟ್ಪಾಡಿ ಹನುಮಾನ್‌‌ ಗ್ಯಾರೇಜ್‌ ಬಳಿ ಬೆಳಿಗ್ಗೆ 09:15ಗಂಟೆಗೆ ತಲುಪಿದಾಗ್ಗೆ ಅವರ ಎದುರಿನಿಂದ ಯು.ಟಿ.ಸಿ ಕಂಪೆನಿಯ ಬಸ್ಸು ನೇದರ ಚಾಲಕನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದನು. ಪರಿಣಾಮ ಕಾರಿನ ಬಲಭಾಗದ ಹಿಂದಿನ ಬಾಗಿಲಿನ ಬಳಿ ಜಖಂ ಉಂಟಾಗಿದ್ದು, ಅಂದಾಜು ರೂ 12000/-ನಷ್ಟ ಉಂಟಾಗಿರುತ್ತದೆ. ಈ ಅಪಘಾತದಿಂದ ಯಾವುದೇ ಅಪಾಯ ಉಂಟಾಗಿರುವುದಿಲ್ಲ ಎಂಬುದಾಗಿ ರಮೇಶ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2011 ಕಲಂ 279, ಐ.ಪಿ.ಸಿ ಮತ್ತು 134 ಐ.ಎಂ.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಬ್ರಹ್ಮಾವರ : ದಿನಾಂಕ 26/04/2011 ರಂದು 12.00 ಗಂಟೆಗೆ ಉಪ್ಪೂರು ಗ್ರಾಮದ ಹೇರಾಯಿಬೆಟ್ಟು ಎಂಬಲ್ಲಿ ರಾ.ಹೆ 17ರಲ್ಲಿ ಆರೋಪಿ ತನ್ನ ಇನ್ಸುಲೇಟರ್‌‌‌ ಲಾರಿಯನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಅತೀ ಬಲಕ್ಕೆ ಬಂದು ರಘುರಾಮ್‌ ತಂದೆ:ಮೋಹನ್‌‌ ಪೂಜಾರಿ ವಾಸ:ಬೇಳಂಜೆ ಬಡಾಬೆಟ್ಟು ಮನೆ(ಹೆಬ್ರಿ) ಬೆಳಂಜೆ ಗ್ರಾಮ, ಕಾರ್ಕಳ ತಾಲೂಕು ಎಂಬವರು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬಸ್ಸುಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಧಾಕರ ಎಂಬವರಿಗೆ ಬಲಕೈ ಮೂಳೆ ಮುರಿದ ಗಾಯವಾಗಿರುತ್ತದೆ. ಗಾಯಾಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ರಘುರಾಮ್‌ ಎಂಬವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 82/2011 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಕೊಲ್ಲೂರು: ದಿನಾಂಕ 22.04.2011 ರಂದು 17:30 ಗಂಟೆಯ ಸಮಯ ಜಡ್ಕಲ್ ಗ್ರಾಮದ ಹಾಲ್ಕಲ್ ಬ್ರಿಡ್ಜ್ ತಿರುವಿನ ಬಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಮೋಟಾರು ಸೈಕಲ್ ಸವಾರ ಮಂಜುನಾಥ ಶೆಟ್ಟಿ ಎಂಬುವರು ತನ್ನ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ 407 ವಾಹನವನ್ನು ನೋಡಿ ಗಲಿಬಿಲಿಗೊಂಡ ಪರಿಣಾಮ ಬೈಕ್ ಸವಾರನ ಹತೋಟಿ ತಪ್ಪಿ ತೀರಾ ಎಡಬದಿಗೆ ಚಲಿಸಿ ಸ್ಕಿಡಾಗಿ ಬಿದ್ದು, ಬೈಕ್‌ನ ಹಿಂದುಗಡೆ ಕುಳಿತಿದ್ದ ಚಂದ್ರ ಶೆಟ್ಟಿ ತಂದೆ :ದಿ ಮುತ್ತಯ್ಯ ಶೆಟ್ಟಿ,ವಾಸ ಮಾವಿನ ಮನೆ, ಗೋಳಿಹೊಳೆಗ್ರಾಮ ಎಂಬವರ ಎಡಕಾಲು ಬೈಕಿನ ಅಡಿಯಲ್ಲಿ ಸಿಕ್ಕಿ ಎಡಕಾಲಿನ ಮಣಿಗಂಟಿನ ಸ್ವಲ್ಪ ಮೇಲ್ಭಾಗದಲ್ಲಿ ಮೂಳೆ ಮುರಿತದ ರಕ್ತಗಾಯ ಉಂಟಾಗಿರುತ್ತದೆ ಈ ಬಗ್ಗೆ ಚಂದ್ರ ಶೆಟ್ಟಿ ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2011 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


  • ಕಾಪು: ದಿನಾಂಕ. 25.04.2011 ರಂದು 22:30 ಗಂಟೆಗೆ ಉದ್ಯಾವರ ಗ್ರಾಮದ ಹಾಲಿಮಾ ಸಬ್ಜು ಹಾಲ್ ಬಳಿ ರಾ.ಹೆ 17 ರಲ್ಲಿ ಪಡುಬಿದ್ರಿ ಕಡೆಯಿಂದ ಉಡುಪಿಯ ಕಡೆಗೆ ಕಾರನ್ನು ಶ್ರೀಮತಿ ಉಷಾ ಶೆಟ್ಟಿ, (64 ವರ್ಷ) ತಂದೆ:-ಚಂದ್ರಶೇಖರ ಶೆಟ್ಟಿ, ವಾಸ-ಉಜ್ವಲ್, ಶ್ರೀ ವೀರಭದ್ರ ದೇವಸ್ಥಾನ ಹಿಂಬದಿ, ಕನ್ನರ್ಪಾಡಿ ಎಂಬವರ ತಂಗಿ ಮಗನಾದ ಕೀರ್ತಿರವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಲಾರಿಯನ್ನು ಓವರ್ ಟೆಕ್ ಮಾಡಿ ಮುಂದಕ್ಕೆ ಚಲಾಯಿಸಿದಾಗ ಅದೇ ಸಮಯ ಎದುರುಗಡೆಯಲ್ಲಿ ಓವರ್ ಟೆಕ್ ಮಾಡಿಕೊಂಡು ಬರುತ್ತಿರುವ ಲಾರಿಯನ್ನು ನೋಡಿ ತನ್ನ ಎಡ ಬದಿಯಿಂದ ಡಾಮಾರು ರಸ್ತೆಯ ತೀರಾ ಬಲಬದಿಗೆ ಒಮ್ಮೇಲೆ ಚಲಾಯಿಸಿದಾಗ ಚಾಲಕನ ಚಾಲನೆಯ ಹತ್ತೋಟಿ ತಪ್ಪಿ ಕಾರು ಡಾಮಾರು ರಸ್ತೆಯಲ್ಲಿ ಪಾಲ್ಟಿಯಾಗಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಶ್ರೀಮತಿ ಉಷಾ ಶೆಟ್ಟಿ ಎಂಬವರ ಬಲ ಹಾಗೂ ಎಡ ಹಣೆಯ ಬಳಿ ಗಾಯವಾಗಿ, ಬಲದವಡೆ ಬಳಿ, ಬಲಕೈ ಬೆರಳಿಗೆ ಗಾಯವಾಗಿ ಸೊಂಟದ ಎಡಭಾಗದಲ್ಲಿ ಮೂಳೆ ಮುರಿತವಾಯಿತು. ಹಾಗೂ ಅವರ ಗಂಡ ಚಂದ್ರ ಶೇಖರ ಶೆಟ್ಟಿರವರಿಗೆ ಕುತ್ತಿಗೆ ಬಳಿ ಮೂಳೆ ಮುರಿತವಾಯಿತು ಹಾಗೂ ಮುಖಕ್ಕೆ ತರಚಿದ ಗಾಯವಾಗಿತ್ತು, ಚಾಲಕ ಕೀರ್ತಿಗೆ ಎಡಕೈ ತಟ್ಟು ಮೂಳೆ ಮುರಿತವಾಗಿ ಎದೆಯ ಬಲಭಾಗದಲ್ಲಿ ಗುದ್ದಿದ ಒಳ ನೋವಾಗಿದ್ದು, ಉಡುಪಿ ಹೈ-ಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಶ್ರೀಮತಿ ಉಷಾ ಶೆಟ್ಟಿರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2011 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೊಲೆ ಪ್ರಕರಣ




  • ಶಂಕರನಾರಾಯಣ : ದಿನಾಂಕ 25/04/2011 ರಂದು ಸಂಜೆ 06:30 ಗಂಟೆಗೆ ಶ್ರೀಮತಿ ರತ್ನಾವತಿ (50) ಗಂಡ ನಾರಾಯಣ ಶೆಟ್ಟಿ ವಾಸ: ಶ್ರೀ ರಾಮದರ್ಶನ್ ಅಬ್ಬಿಮಕ್ಕಿ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಎಂಬವರ ಗಂಡ ನಾರಾಯಣ ಶೆಟ್ಟಿ (55) (ಮೃತ) ರವರು ವಿಪರೀತ ಶರಾಬು ಕುಡಿದು ಪೇಟೆಯಿಂದ ಮನೆಯಾದ ಸಿದ್ಧಾಪುರ ಗ್ರಾಮದ ಅಬ್ಬಿಮಕ್ಕಿ ಗೆ ಬಂದು ತನಗೂ ಹಾಗೂ ಹೆಣ್ಣುಮಕ್ಕಳಿಗೂ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗೆ ಹಾಕಿದ್ದು ನಂತರ ಕೈಯಲ್ಲಿ ಚೂರಿ ಹಿಡಿದು ಬೈಯುತ್ತಾ ಕುಳಿತುಕೊಂಡಿದ್ದು ರಾತ್ರಿ 08:30 ಗಂಟೆಗೆ ಮಗ ಸಂತೋಷ ಎಂಬವನು ಮನೆಗೆ ಬಂದು ತಂದೆಯಲ್ಲಿ- ತಾಯಿ ಹಾಗೂ ತಂಗಿಯಂದಿರು ಎಲ್ಲಿ? ಎಂದು ಕೇಳಿದ್ದಕ್ಕೆ ನಾರಾಯಣ ಶೆಟ್ಟಿಯು ಕೋಪಗೊಂಡು ತನ್ನ ಕೈಯಲ್ಲಿದ್ದ ಚೂರಿಯಿಂದ ಮಗ ಸಂತೋಷನ ಕೈಕಾಲುಗಳಿಗೆ ತಿವಿದು ರಕ್ತಗಾಯ ಮಾಡಿದ್ದು ಆಗ ಅವರೊಳಗೆ ಹೊಡೆದಾಟವಾಗಿ ಸಂತೋಷನು ತಂದೆಯ ಕೆನ್ನೆಗೆ ,ಎದೆಗೆ ಬೆನ್ನಿಗೆ ಕೈಯಿಂದ ಹೊಡೆದು ದೂಡಿ ಹಾಕಿದ್ದು ನಂತರ ಪುನ: ಸಂತೋಷನಿಗೆ ಗಂಡ ತಿವಿಯಲು ಬಂದಾಗ ಕೋಪಗೊಂಡು ನೀನು ಬದುಕಿದರೆ ಮನೆಯವರಿಗೆಲ್ಲಾ ತೊಂದರೆ ಇದ್ದು ನೀನು ಸಾಯಲೇ ಬೇಕು ಎಂದು ಸಂತೋಷನು ಬಲವಾಗಿ ಕೆನ್ನೆಗೆ ಹೊಡೆದು ಅಂಗಳದಲ್ಲಿ ದೂಡಿ ಹಾಕಿ ನೆಲಕ್ಕೆ ಜಜ್ಜಿದ್ದು ರಾತ್ರಿ 10:00 ಗಂಟೆಯಾದರೂ ಏಳದಿದ್ದನ್ನು ನೋಡಿ ಫಿರ್ಯಾಧಿದಾರರು ಅವರನ್ನು ಎಬ್ಬಿಸಿದಾಗ ನಾರಾಯಣ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ಎಂಬುದಾಗಿ ಶ್ರೀಮತಿ ರತ್ನಾವತಿರವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 33/2011 ಕಲಂ 302 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಶಂಕರನಾರಾಯಣ; ಸಂತೋಷ (25) ತಂದೆ:ನಾರಾಯಣ ಶೆಟ್ಟಿ ವಾಸ: ಶ್ರೀ ರಾಮದರ್ಶನ್ ಅಬ್ಬಿಮಕ್ಕಿ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಎಂಬವರು ದಿನಾಂಕ 25/04/2011 ರಂದು ಎಂದಿನಂತೆ ವ್ಯಾಪಾರ ಮುಗಿಸಿ ಸಂಜೆ 08:30 ಗಂಟೆಗೆ ತನ್ನ ಮನೆಯಾದ ಸಿದ್ಧಾಪುರ ಗ್ರಾಮದ ಅಬ್ಬಿಮಕ್ಕಿಗೆ ಬಂದಾಗ ತಂದೆ ನಾರಾಯಣ ಶೆಟ್ಟಿಯವರು ವಿಪರೀತ ಮದ್ಯಪಾನ ಮಾಡಿ ಕೈಯಲ್ಲಿ ಒಂದು ಚೂರಿಯನ್ನು ಹಿಡಿದು ಮನೆಯವರಿಗೆ ಬೈಯ್ಯುತ್ತಿದ್ದು ತಾಯಿ ಹಾಗೂ ತಂಗಿಯಂದಿರು ಮನೆಯಲ್ಲಿ ಕಾಣದೇ ಇದ್ದುದ್ದರಿಂದ ಈ ಬಗ್ಗೆ ತಂದೆಯವರಲ್ಲಿ ಕೇಳಿದಾಗ ಅವರು ಕೋಪಗೊಂಡು ಅವರ ಕೈಯಲ್ಲಿದ್ದ ಚೂರಿಯಿಂದ ಬಲಕೈಗೆ ಹಾಗೂ ಎಡತೊಡೆಗೆ ತಿವಿದು ರಕ್ತಗಾಯಮಾಡಿದ್ದು ನಂತರ ಹೊಡೆದಾಟವಾಗಿ ನಾರಾಯಣ ಶೆಟ್ಟಿಯವರ ಕೆನ್ನೆಗೆ ಎದೆಗೆ ಹೊಡೆದು ದೂಡಿಹಾಕಿದ್ದು ನಂತರ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ. ಎಂಬುದಾಗಿ ಸಂತೋಷರವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 34/2011 ಕಲಂ 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ಹುಡುಗಿ ಕಾಣೆ ಪ್ರಕರಣ




  • ಬೈಂದೂರು: ದಿನಾಂಕ 21/04/2011 ರಂದು ಸಂಜೆ 17:30 ಘಂಟೆಯಿಂದ 18:30 ಘಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಕೆರ್ಗಾಲು ಗ್ರಾಮದ ಮಕ್ಕಿಗದ್ದೆ ಮನೆ ಎಂಬಲ್ಲಿನ ದೇವರಾಯ ದೇವಾಡಿಗ(27ವರ್ಷ)ತಂದೆ: ನಾರಾಯಣ ದೇವಾಡಿಗ ವಾಸ: ಮಕ್ಕಿಗದ್ದೆ ಮನೆ ಕೆರ್ಗಾಲು ಗ್ರಾಮ ಕುಂದಾಪುರ ತಾಲೂಕು ಎಂಬವರ ಕಿರಿಯ ತಂಗಿ ಕುಮಾರಿ ಗುಲಾಬಿ (23 ವರ್ಷ) ತಂದೆ: ನಾರಾಯಣ ದೇವಾಡಿಗ ಎಂಬವರು ಮನೆಯಿಂದ ಕಾಣೆಯಾಗಿದ್ದು ತಲಾಷೆಯ ಬಗ್ಗೆ ತಮ್ಮ ನರೆಕರೆಯ ಪರಿಚಯದ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದಾಗಿದೆ ಈ ಬಗ್ಗೆ ದೇವರಾಯ ದೇವಾಡಿಗರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2011 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: