ಉಡುಪಿ ಜಿಲ್ಲೆಗೆ ಎರಡು ಹೊಸ ಇಂಟರ್ಸೆಪ್ಟರ್ ಸೇವೆ
ಈಗಾಗಲೇ ಜಿಲ್ಲೆಯಲ್ಲಿರುವ ಒಂದು ಇಂಟರ್ಸೆಪ್ಟರ್ ವಾಹನದ ಜೊತೆಗೆ ಈಗ ಜಿಲ್ಲೆಗೆ ಹಂಚಿಕೆಯಾದ ಹೊಸ 2 ಇಂಟರ್ಸೆಪ್ಟರ್ (ಟಾಟಾ ವಿಂಗರ್) ವಾಹನಗಳಲ್ಲಿ ಈ ಕೆಳಗೆ ಕಾಣಿಸಿರುವ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಆಲ್ಕೋಹಾಲ್ ಸೇವಿಸಿ ವಾಹನ ಚಲಾಯಿಸುವುದು, ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ವಾಹನ ಚಾಲಾಯಿಸುವುದನ್ನು ಪತ್ತೆ ಹಚ್ಚಿ, ಸ್ಥಳದಲ್ಲಿಯೇ ದಂಡ ವಸೂಲು ಮಾಡಲು ಸದರಿ ಉಪಕರಣಗಳನ್ನು ಉಪಯೋಗಿಸಲಾಗುತ್ತದೆ. ಸಾರ್ವಜನಿಕರಿಗೆ ಸಂದರ್ಭಕ್ಕನುಸಾರವಾಗಿ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಕೂಡ ನೀಡಬಹುದಾಗಿದೆ.
1. speed laser gun with camera and mounting
2. Dot matrix printer with Alco meter
3. On Board Color Printer
4. Public Address systems with Siren
5. Roof Top Surveillance
6. 250 GB DVR Ptz Camera
7. on Board Laptop
8. On Board 1 KVA UPS with Batteries
9. Remote printing station
10. Roof light bar
11. IR Flash to record evidence in night time
ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ವಹಿಸಲು ಹಾಗೂ ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಿ ಈ ಮೂಲಕ ಸಾರ್ವಜನಿಕರ ಒಳಿತಿಗಾಗಿ ಹಾಗೂ ಸುರಕ್ಷಿತ ಸಂಚಾರ ನಿರ್ವಹಣೆಗಾಗಿ ಇಂಟರ್ಸೆಪ್ಟರ್ ವಾಹನಗಳ ಸೇವೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮವು ಈ ದಿನ ಬೆಳಿಗ್ಗೆ 11:00 ಗಂಟೆಗೆ ಮಾನ್ಯ ಶ್ರೀ ರಮೇಶ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿರವರು ಉದ್ಘಾಟಿಸಿ ಮಾನ್ಯ ಶ್ರೀ ಎಮ್.ವಿ ವೆಂಕಟೇಶಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿರವರು ವಾಹನದ ಪ್ರಭಾರ ಅಧಿಕಾರರವರಿಗೆ ಕೀಯನ್ನು ಹಸ್ತಾಂತರಿಸಿದರು. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು, ಉಡುಪಿ ವೃತ್ತನಿರೀಕ್ಷಕರು, ಸಹಾಯಕ ಆಡಳಿತ ಅಧಿಕಾರಿ ಜಿಲ್ಲಾ ಪೊಲೀಸ್ ಕಛೇರಿ ,ಆರಕ್ಷಕ ನಿರೀಕ್ಷಕರು ಡಿಎಆರ್ ಉಡುಪಿ ಹಾಗೂ ಸಿಬ್ಬಂದಿವರ್ಗದವರು ಈ ಕಾರ್ಯಕ್ರಮಲ್ಲಿ ಉಪ ಸ್ಥಿತರಿರುತ್ತಾರೆ.
No comments:
Post a Comment