- ಉಡುಪಿ: ದಿನಾಂಕ 27-04-11ರಂದು ರಹೀಂಖಾನ್(37), ತಂದೆ: ವಿ.ಕೆ ಮೊಹಮ್ಮದ್, ವಾಸ: ಮೆಸ್ಕಾಂ ಕ್ವಾಟ್ರಾಸ್ ನಂ. ಇಬಿವದಭಾನ್ದೀಶ್ವರ್, ಮಲ್ಪೆ, ಉಡುಪಿ ಎಂಬವರು ತಮ್ಮ ಮೋಟಾರ್ ಸೈಕಲ್ನ್ನು ಸವಾರಿ ಮಾಡಿಕೊಂಡು ಮಲ್ಪೆಯಿಂದ ಉಡುಪಿಕಡೆಗೆ ಬರುತ್ತಿರುವಾಗ್ಗೆ ಪಂದುಬೆಟ್ಟು ಬಳಿ ಬೆ.07:45ಗಂಟೆಗೆ ತಲುಪುವಾಗ್ಗೆ ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ರಿಕ್ಷಾ ಚಾಲಕನುಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಎದುರಿನಿಂದ ಹೋಗುತ್ತಿದ್ದ ಇನ್ನೊಂದು ವಾಹನವನ್ನು ಒವರ್ಟೇಕ್ಮಾಡುವ ಭರದಲ್ಲಿ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಅವರ ಬಲ ಬದಿಯ ಭುಜಕ್ಕೆಜಖಂ ಉಂಟಾಗಿದ್ದು, ಬಲಬದಿಯ ಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ. ರಿಕ್ಷಾ ಚಾಲಕ ಮತ್ತು ಇತರರು ಚಿಕಿತ್ಸೆಯ ಬಗ್ಗೆ ಉಡುಪಿಹೈ-ಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾಗಿದೆ ಎಂಬುದಾಗಿ ರಹೀಂಖಾನ್ ರವರು ನೀಡಿದ ದೂರಿನಂತೆ ಉಡುಪಿನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 151/2011 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ।
- ಉಡುಪಿ: ದಿನಾಂಕ 27-04-11ರಂದು ಶಿವಕುಮಾರ್(41), ತಂದೆ: ಷಣ್ಮುಗಂ ಚೆಟ್ಟಿಯಾರ್, ವಾಸ: ಮಧ್ವನಗರ, ಹರಿಪ್ರಸಾದ್ಹೊಟೇಲ್ ಹಿಂಬಾಗ,ಆದಿಉಡುಪಿ, ಕೊಡವೂರು, ಉಡುಪಿ ಎಂಬವರು ಪಳನಿ ಸ್ವಾಮಿರವರ ಯಮಹಾ ವೈಬಿಆರ್ ನೇದರಲ್ಲಿಹಿಂಬದಿ ಸವಾರರಾಗಿ ಕುಳಿತುಕೊಂಡು, ಪಳನಿ ಸ್ವಾಮಿರವರು ಬೈಕನ್ನು ಸವಾರಿ ಮಾಡಿಕೊಂಡು ರಾ.ಹೆ 17ರಿಂದಾಗಿ ಬ್ರಹ್ಮಾವರಕಡೆಗೆ ಹೋಗುತ್ತಿರುವಾಗ್ಗೆ ಬೆ.08:45ಗಂಟೆಗೆ ನಿಟ್ಟೂರು ಪೂಜಾ ಮಾರ್ಬಲ್ಸ್ ಬಳಿ ತಲುಪುವಾಗ್ಗೆ ಅವರ ಹಿಂದಿನಿಂದ ಆಲ್ಟೋಕಾರಿನ ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡುಬಂದು ಮೋಟಾರ್ ಸೈಕಲ್ನ್ನು ಒವರ್ಟೇಕ್ ಮಾಡಿ, ನಿರ್ಲಕ್ಷ್ಯತನದಿಂದ ಒಮ್ಮಲೆ ಎಡರಸ್ತೆಗೆ ತಿರುಗಿಸಿದನು, ಪರಿಣಾಮ ಬೈಕ್ಗೆಕಾರು ಢಿಕ್ಕಿ ಹೊಡೆದಿದ್ದು, ಬೈಕ್ನ್ನಲಿದ್ದ ಇಬ್ಬರು ರಸ್ತೆಗೆ ಬಿದ್ದು, ಬೈಕ್ ಸವಾರಿ ಮಾಡುತ್ತಿದ್ದ ಪಳನಿಸ್ವಾಮಿರವರಿಗೆ ಬಲಭುಜಕ್ಕೆತೀವ್ರವಾದ ರಕ್ತಗಾಯವಾಗಿ, ದೇಹದ ಉಳಿದ ಭಾಗಗಳಿಗೆ ತರಚಿದ ಗಾಯವಾಗಿರುತ್ತದೆ. ಶಿವಕುಮಾರ್ ರವರ ಬಲಕಾಲಿನಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಅಪಘಾತವೆಸಗಿದ ಕಾರು ಚಾಲಕ ಮತ್ತು ಶಿವಕುಮಾರ್ ಪಳನಿ ಸ್ವಾಮಿಯನ್ನುಚಿಕಿತ್ಸೆಯ ಬಗ್ಗೆ ಉಡುಪಿ ಹೈ+-ಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದಾಗಿದೆ ಈ ಬಗ್ಗೆಶಿವಕುಮಾರ್ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/2011 ಕಲಂ279,338ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹೆಬ್ರಿ : ದಿನಾಂಕ: 25.04.11 ರಂದು ಮದ್ಯಾಹ್ನ 2-30 ಗಂಟೆಗೆ ಎಸ್.ಕೆ ಜಯಂತಿ ಭಟ್(42), ಗಂಡ: ಎಸ್.ಕೃಷ್ಣಮೂರ್ತಿ ಭಟ್, ಮರ್ಚ್ಂಟ್, ಮಂಡಗದ್ದೆ ಅಂಚೆ, ತೀರ್ಥಹಳ್ಳಿ ತಾಲೂಕು ಎಂಬವರು ತನ್ನ ತವರು ಮನೆಯಾದ ಉಡುಪಿಗೆ ಅಕ್ಕನ ಮಗಳ ಮದುವೆ ಸಲುವಾಗಿ ಕಪ್ಪು ಬಣ್ಣದ ಬ್ಯಾಗ್ನಲ್ಲಿ ಚಿನ್ನಾಭರಣ ಹಾಗೂ ನಗದನ್ನು ಇರಿಸಿಕೊಂಡು ತನ್ನ ಮನೆಯಾದ ಮಂಡಗದ್ದೆಯಿಂದ ಶ್ರೀ ಕೃಷ್ಣ ಮಿನಿ ಬಸ್ಸಿನಲ್ಲಿ ಹೊರಟು ಬಸ್ಸಿನಲ್ಲಿ ತುಂಬಾ ಪ್ರಯಾಣಿಕರು ಇದ್ದ ಕಾರಣ ಬಸ್ಸಿನ ನಿರ್ವಾಹಕನು ತನ್ನ ಕೈಯಲ್ಲಿದ್ದ ಕಪ್ಪು ಬಣ್ಣದ ಬ್ಯಾಗನ್ನು ಕೇಳಿ ತೆಗೆದುಕೊಂಡು ಚಾಲಕನ ಸೀಟಿನ ಹಿಂಭಾಗದಲ್ಲಿ ಇರಿಸಿದ್ದು ನಂತರ ಬಸ್ಸು ಸಮಯ ಸುಮಾರು ಸಂಜೆ 5-40 ಗಂಟೆಗೆ ಉಡುಪಿ ತಲುಪಿದಾಗ ಪಿರ್ಯಾದಿದಾರರು ತನ್ನ ಬ್ಯಾಗ್ ಕಾಣೆಯಾದ ಬಗ್ಗೆ ನಿರ್ವಾಹಕನಲ್ಲಿ ವಿಚಾರಿಸಿದಾಗ ಸಮಯ ಸುಮಾರು ಸಂಜೆ 4-40 ಗಂಟೆಗೆ ಹೆಬ್ರಿ ಬಸ್ಸು ನಿಲ್ದಾಣದಲ್ಲಿ ಯಾರೋ 7 ಜನ ಲಂಭಾಣಿ ಮಾತನಾಡುವವರು ಬಸ್ಸಿನಿಂದ ಇಳಿದಿದ್ದು ಅವರುಗಳ ಪೈಕಿ ಒಬ್ಬಾತನ ಕೈಯಲ್ಲಿ ಬ್ಯಾಗ್ ಇರುವುದಾಗಿ ತಿಳಿಸಿದ್ದು ಅವರುಗಳು ತಮ್ಮ ಬ್ಯಾಗನ್ನು ಅವರ ಬ್ಯಾಗ್ ಎಂದು ತಿಳಿದು ತೆಗೆದುಕೊಂಡು ಹೋಗಿರಬಹುದೆಂದು ತಿಳಿದು ಅವರುಗಳು ವಾಪಾಸು ಬ್ಯಾಗ್ನ್ನು ಕೊಡದ ಕಾರಣ ಅವರು ಕಳವು ಮಾಡುವ ಉದ್ದೇಶದಿಂದ ಬಸ್ಸಿನಲ್ಲಿಟ್ಟಿದ್ದ ಕಪ್ಪು ಬಣ್ಣದ ಬ್ಯಾಗ್ನಲ್ಲಿ ಇಟ್ಟಿದ್ದ ಸುಮಾರು 193 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು ರೂ 2,000/- ಹಾಗೂ ಬಟ್ಟೆ ಬರೆಗಳನ್ನು ಬ್ಯಾಗ್ ಸಮೇತ ಕಳವು ಮಾಡಿರುವುದಾಗಿದೆ. ಇದರ ಅಂದಾಜು ಮೌಲ್ಯ ಸುಮಾರು ರೂ 4 ಲಕ್ಷ ಆಗಬಹುದಾಗಿದೆ ಎಂಬುದಾಗಿ ಎಸ್.ಕೆ ಜಯಂತಿ ಭಟ್‌ರವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 17/2011 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment