ಅಪಘಾತ ಪ್ರಕರಣ:
- ಮಲ್ಪೆ: ದಿನಾಂಕ 26/04/2011 ರಂದು ಸಮಯ ಸುಮಾರು 10:00 ಗಂಟೆAiÀÄ ಸಮಯದಲ್ಲಿ ಪಿರ್ಯದಿ ಜಗನಾಥ ಕೋಟ್ಯಾನ್ ಪ್ರಾಯ: (47) ತಂದೆ: ದಿವಂಗತ ಕೃಷ್ಣ ಸುವರ್ಣ ವಾಸ: ಪಡ್ಲನೆರ್ಗಿ ಕೊಡವುರು ಗ್ರಾಮ ಉಡುಪಿ ರವರು ತನ್ನ ಕೆಎ 20 ಎ 7951ನೇ ವಿಕ್ರಮ್ 450 ರಿಕ್ಷಾದಲ್ಲಿ ಕಲ್ಮಾಡಿ ಬ್ರಿಡ್ಜ್ ನ ಐಸ್ ಪ್ಲಾಂಟ್ ಗೆ ಬರುವರೇ ವಾಹನವನ್ನು ಚಲಾಯಿಸಿಕೊಂಡು ಕೊಡವೂರು ಗ್ರಾಮದ ಮಲ್ಪೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರು ಬರುತ್ತಿರುವಾಗ ಕೆಎ 20 ಬಿ 8525ನೇ ನಂಬ್ರದ ಟೆಂಪೋ ಚಾಲಕನು ತನ್ನ ಬಾಬ್ತು ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಬಾಬ್ತು ಕೆಎ 20 ಎ 7951ನೇ ವಿಕ್ರಮ್ 450 ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ರಿಕ್ಷಾ ಜಖುಂಗೊಂಡು ಬಂದು ತನ್ನ ಬಾಬ್ತು ಕೆಎ 20 ಎ 7951ನೇ ವಿಕ್ರಮ್ 450 ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ರಿಕ್ಷಾ ಜಖುಂಗೊಂಡು ತನ್ನ ಬಲಕೈಗೆ, ಬಲಕಣ್ಣಿನ ಪಕ್ಕಗೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯ ಉಂಟಾಗಿರುತ್ತದೆ ಈ ಸಂಬಂದ ಜಗನಾಥ ಕೋಟ್ಯಾನ್ ರವರು ಮಲ್ಪೆ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 54/2011 ಕಲಂ 279, 338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ:
- ಶಂಕರನಾರಾಯಣ: ಫಿರ್ಯಾಧಿ ನಾರಾಯಣ ಬೆಳಾರಿ, (50) ತಂದೆ: ದಿ: ಶಂಕರ ಬೆಳಾರಿ,ವಾಸ:ಹೆಂಗವಳ್ಳಿ ಶಾಲೆ ಬಳಿ,ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರ ಮಗಳಾದ ಅಮಿತಾ (22) ಎಂಬವರು ಗೇರು ಬೀಜ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಅವಳಿಗೆ ದಿನಾಂಕ 09/05/2011 ರಂದು ನರಸಿಂಹ ಎಂಬವರೊಂದಿಗೆ ಮದುವೆ ನಿಶ್ಚಯವಾಗಿದ್ದು ಸದ್ರಿ ಅಮಿತಾಳು ದಿನಾಂಕ 23/04/2011 ರಂದು ಬೆಳಿಗ್ಗೆ 11:00 ಗಂಟೆಗೆ ಅಮಾವಾಸ್ಯೆಬೈಲಿಗೆ ಬಟ್ಟೆಗಳನ್ನು ಇಸ್ತ್ರೀ ಹಾಕಿಕೊಂಡು ಬರುತ್ತೇನೆಂದು ಹೋದವಳು ಈತನಕವೂ ಮನೆಗೆ ಬಾರದೇ ಇದ್ದುದರಿಂದ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಸಿಗದೇ ಇದ್ದು, ಅವಳಿಗೆ ಮದುವೆ ನಿಶ್ಚಯವಾದ ನರಸಿಂಹನಿಗೆ ದೂರವಾಣಿ ಮುಖಾಂತರ ತನಗೆ ಮದುವೆಯಾಗಿದೆ ಎಂಬುದಾಗಿ ತಿಳಿಸಿದ್ದು, ಅಲ್ಲದೇ ಫಿರ್ಯಾಧಿದಾರರ ಮಗಳಾದ ಅನಿತಾಳಿಗೂ ದೂರವಾಣಿ ಮಾಡಿ ‘’ನನಗೆ ಮದುವೆಯಾಗಿದೆ ಎಂದು ನಮ್ಮ ಮನೆಯ'ವರಿಗೆ ತಿಳಿಸು’’ ಎಂಬುದಾಗಿ ತಿಳಿಸಿದ್ದು, ಕಾಣೆಯಾದ ಅಮಿತಾ ಯಾರ ಜೊತೆ ಇದ್ದಾಳೆ ಎಂದು ತಿಳಿದಿರುವುದಿಲ್ಲ. ಈ ಸಂಬಂದ ನಾರಾಯಣ ಬೆಳಾರಿ ರವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 35/2011 ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
- ದಿನಾಂಕ 26/04/2011 ರಂದು 19:00 ಗಂಟೆಯ ಸಮಯ ಫಿರ್ಯಾಧಿ ನಟರಾಜ ಮಡಿವಾಳ (47)ತಂದೆ ಅಣ್ಣಯ್ಯ ಮಡಿವಾಳ ವಾಸ ಬೂತನಾಡಿ ಚಕ್ರಮೈದಾನ ಹಳ್ಳಿಹೊಳೆ ಗ್ರಾಮ ಇವರು ಹಳ್ಳಿಹೊಳೆ ಗ್ರಾಮದ ಚಕ್ರಮೈದಾನದಲ್ಲಿರುವ ಆನಂದಮರಾಠೆ ಎಂಬುವವರ ಅಂಗಡಿಗೆ ಅವರಿಗೆ ಬರಬೇಕಾದ ಹಣವನ್ನು ಕೇಳಲು ಹೋದಾಗ ಆನಂದ ಮರಾಠೆಯವರು ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸೋಡಾಬಾಟಲಿಯಿಂದ ತಲೆಗೆ ಮತ್ತು ಬಲಬುಜಕ್ಕೆ ಹೊಡೆದಿದ್ದು ನೆಲದ ಮೇಲೆ ಬಿದ್ದ ಫಿರ್ಯದಿದಾರರಿಗೆ ತುಳಿದಿರುತ್ತಾರೆ. ಈ ಸಂಬಂದ ನಟರಾಜ ಮಡಿವಾಳರವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 36/11 ಕಲಂ 504,324,323 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಂಕರನಾರಾಯಣ:ದಿನಾಂಕ:26-04-2011 ರಂದು ಫಿರ್ಯಾದಿದಾರರಾದ ಆನಂದ ಮರಾಠೆಯವರು ಹಳ್ಳಿಹೊಳೆ ಗ್ರಾಮದ ಚಕ್ರಮೈದಾನದಲ್ಲಿರುವ ತನ್ನ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಸಮಯ 19-15 ಗಂಟೆಗೆ ಅವರ ಪರಿಚಯದ ನಟರಾಜ್ ಮಡಿವಾಳ ಎಂಬುವರು ಅಕ್ರಮ ಪ್ರವೇಶ ಮಾಡಿ, ಹಣವನ್ನು ಕೇಳಿದ್ದು ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಕೈಯಿಂದ ಕೆನ್ನೆಗೆ ಹೊಡೆದು, ಕಾಲಿನಿಂದ ತುಳಿದು ಅಂಗಡಿಯಲ್ಲಿದ್ದ ಸೋಡಾ ಬಾಟಲಿಯನ್ನು ತೆಗೆದು ತಿವಿಯಲು ಬಂದಾಗ ಬಾಟಲಿಯು ಫಿರ್ಯಾದಿದಾರರ ಕಾಲಿನ ಪಾದಕ್ಕೆ ತಾಗಿ ರಕ್ತಗಾಯವಾಗಿದ್ದು,, ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಸಿ ನಂತರ ಅಂಗಡಿಯ ಶೋಕೆಸಿನ ಗ್ಲಾಸಿಗೆ ರಸ್ತೆ ಬದಿಯಲ್ಲಿನ ಕಲ್ಲನ್ನು ಎಸೆದು ಹುಡಿಮಾಡಿರುತ್ತಾರೆ. ಈ ಸಂಬಂದ ನಟರಾಜ ಮಡಿವಾಳರವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾಧ ಕ್ರಮಾಂಕ 37/11 ಕಲಂ 448,323,324 506,427 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪತಿಯಿಂದ ಪತ್ನಿಗೆ ಕಿರುಕುಳ:
- ಬ್ರಹ್ಮಾವರ:ತೀಥಹಳ್ಳಿ ಪೊಲೀಸು ಠಾಣೆಯಿಂದ ವರ್ಗಾವಣೆಯಾಗಿ ಬಂದ ಅಪರಾಧ ಕ್ರಮಾಂಕ 98/11 ರಲ್ಲಿ ಪ್ರಕರಣದ ಆರೋಪಿ ಸತೀಶರವರು ಪಿರ್ಯಾದಿ ಶ್ರೀಮತಿ ಜ್ಯೋತಿ ಗಂಡ: ಸತೀಶ ವಾಸ: ಕುರ್ಪಾಡಿ,ಸಾವಂತರ ಮನೆ ಹೊಸೂರು ಇವರನ್ನು ದಿನಾಂಕ 24/06/10 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶಿವ ಪಾರ್ವತಿ ಕೃಪದಲ್ಲಿ ಹಿರಿಯರ ಸಮಕ್ಷಮ ಮದುವೆಯಾಗಿದ್ದು ಮದುವೆಯ ತರುವಾಯ ಉಡುಪಿಯ ಹೊಸೂರು ಗ್ರಾಮದ ಕುರ್ಪಾಡಿ ಸಾವಂತರ ಮನೆ ಎಂಬಲ್ಲಿ ಆರೋಪಿ ಶ್ರೀಮತಿಯೊಂದಿಗೆ ಸೇರಿ ಕುಡಿದುಕೊಂಡು ಬಂದು ಕೈಯಿಂದ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾಗಿದೆ. ಈ ಸಂಬಂದ ಶ್ರೀಮತಿ ಜ್ಯೋತಿ ರವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು ಬ್ರಹ್ಮಾವರ ಠಾಣಾಧಿಕಾರಿರವರು ಠಾಣಾ ಅ.ಕ್ರ 83/11 ಕಲಂ 498(ಎ), ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ:
- ಉಡುಪಿನಗರ:ದಿನಾಂಕ:27-04-11ರಂದು 13:०० ಗಂಟೆಗೆ ಉಡುಪಿ ತಾಲೂಕಿನ ಸರ್ವಿಸ್ ಬಸ್ಸು ನಿಲ್ದಾಣದ ಬಳಿ ಇರುವ ಕಮಲ್ ಬಿಲ್ಡಿಂಗ್‌ನ್ನಲ್ಲಿರುವ ಅರುಣ ರೇಡಿಯೊ ಇಲೆಕ್ಟ್ರನಿಕ್ಸ್ ಎಂಬ ಅಂಗಡಿಗೆ ಪಿರ್ಯಾದಿ ಎಚ್।ಸೈಯ್ಯದ್ ಇಮ್ರಾನ್ ,,,,, ಬೆಂಗಳೂರು ಇವರು ಹೋಗಿ ಪರಿಶೀಲಿಸಿದಾಗ, ಆಪಾದಿತರು ಪಿರ್ಯಾದಿದಾರರ ಕಂಪೆನಿಯ ಮಾಲಕತ್ವಕ್ಕೆ ಸೇರಿದ ಪಟಿಯಾಲ ಹೌಸ್,, ಕಾಫಿ ರೈಟ್ ಕಾಯಿದೆ 1957ನ್ನು ಉಲ್ಲಂಘನೆ ಮಾಡಿ ವ್ಯವಹಾರ ಮಾಡುತ್ತಿರುವುದಾಗಿದೆ. ಈ ಸಂಬಂದ ಹೆಚ್.ಸಯದ್ ರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಉಡುಪಿ ನಗರ ಠಾಣಾಧಿಕಾರಿರವರು ಠಾಣಾ 153/11 ಕಲಂ 58ಎ,68ಎ ಕಾಫಿ ರೈಟ್ ಕಾಯಿದೆ 1957ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment