Thursday, April 28, 2011

Daily Crimes Reported as on 28/04/2011 at 17:00 Hrs

ಅಪಘಾತ ಪ್ರಕರಣ:
  • ಬ್ರಹ್ಮಾವರ: ದಿನಾಂಕ 26/04/11 ರಂದು 13.30 ಗಂಟೆಗೆ ಮಟಪಾಡಿ ಗ್ರಾಮದ ಬೋಳುಗುಡ್ಡೆ ಎಂಬಲ್ಲಿ ಈ ಪ್ರಕರಣದ ಆರೋಪಿ ಸುರೇಶ ಪೂಜಾರಿಯವರು ಮೋಟಾರು ಸೈಕಲ್ ನಂಬ್ರ ಕೆಎ 20 ವಿ 6460 ನೇದನ್ನು ಮಟಪಾಡಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಆರೋಪಿಯ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೋಟಾರು ಸೈಕಲಿನ ಹಿಂದೆ ಕುಳಿತಿದ್ದ ಪಿರ್ಯಾದಿ ಉಮೇಶ ಪೂಜಾರಿ (37) ತಂದೆ: ಗುಂಡು ಪೂಜಾರಿ ವಾಸ: ಬೊಳ್ಜಿ ಕಾಲನಿ ಮಟಪಾಡಿ ಗ್ರಾಮ ಇವರಿಗೆ ಹಾಗೂ ಆರೋಪಿಗೆ ಸಾದಾ ಸ್ವರೂಪದ ಗಾಯುಂಟಾಗಿದ್ದಾಗಿದೆ. ಈ ಸಂಬಂದ ಬ್ರಹ್ಮಾವರ ಠಾಣೆಗೆ ಉಮೇಶ್‌ ಪೂಜಾರಿರವರು ಪಿರ್ಯಾದಿ ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾದ ಕ್ರಮಾಂಕ 84/11 ಕಲಂ 279,337 ಐಪಿಸಿ ರಂತೆ ಪ್ರಕರಣ ದಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಬೈಂದೂರು: ದಿನಾಂಕ 27/04/2011 ರಂದು 14:45 ಗಂಟೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿನ ರಾ.ಹೆ. 17 ರಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪಿರ್ಯಾದಿ ರವಿ (38) ತಂದೆ: ಮಂಜಪ್ಪ ವಾಸ: ಹಿರಿಯ ಪ್ರಾಥಮಿಕ ಶಾಲೆಯ ಬಳಿ ದುಬಾರ ತಟ್ಟಿ ನಗರ ಅಂಚೆ ಹೊಸನಗರ ತಾಲೂಕು ಇವರು ಚಲಾಯಿಸಿಕೊಂಡು ಬರುತ್ತಿದ್ದ ಹನುಮಾನ್‌ ಬಸ್‌ ಕೆಎ 20 ಸಿ 1072ರಲ್ಲಿನ ಪ್ರಯಾಣಿಕರನ್ನು ಮಸ್ಕಿ ಬಸ್‌‌ ನಿಲ್ದಾಣದ ಬಳಿ ಬಸ್ಸಿನಿಂದ ಇಳಿಸುವರೇ ರಸ್ತೆ ಎಡ ಬದಿಯಲ್ಲಿ ನಿಲ್ಲಸಿದಾಗ ಆರೋಪಿ ಚಂದ್ರಶೇಖರ ಶೆಟ್ಟಿ ಕೆಎ 20 ಪಿ 2821ನೇ ಮಾರುತಿ ಎ-ಸ್ಟಾರ್‌ ಕಾರು ಚಾಲಕ ತನ್ನ ಬಾಬ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನಿಲ್ಲಿಸಿದ್ದ ಬಸ್ಸಿನ ಎದುರು ಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಚಾಲಕ ಚಂದ್ರಶೇಖರ ಶೆಟ್ಟಿಯವರ ಹಣೆಗೆ ಮತ್ತು ಬಸ್ಸಿನಿಂದ ಇಳಿಯುತ್ತಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೆ ತರಚಿದ ಗಾಯವಾಗಿರುವುದಾಗಿದೆ. ಈ ಅಪಘಾತದಿಂದ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್‌‌ ಹಾಗೂ ಆರೋಪಿತರು ಚಲಾಯಿಸುತ್ತಿದ್ದ ಕಾರು ಮುಂಭಾಗ ಜಖಂ ಆಗಿರುವುದಾಗಿದೆ ಈ ಸಂಬಂದ ಬೈಂದೂರು ಠಾಣೆಗೆ ರವಿರವರು ಪಿರ್ಯಾದಿ ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾದ ಕ್ರಮಾಂಕ 91/2011 ಕಲಂ; 279,337 ಐ.ಪಿ.ಸಿ ರಂತೆ ಪ್ರಕರಣ ದಖಲಿಸಿ ತನಿಖೆ ಮುಂದುವರಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
  • ಶಿರ್ವಾ: ಪಿರ್ಯಾದಿ ಸುಂದರ ಶೆಟ್ಟಿ (70) ತಂದೆ ದಿ/ದೇಜು ಶೆಟ್ಟಿ ಗುಡ್ಡಬೆಟ್ಟು ಮನೆ ಮೂಡುಬೆಳ್ಳೆ ಬೆಳ್ಳೆ ರವರ ಹೆಂಡತಿ ಶ್ರೀಮತಿ ರತಿ ಶೆಟ್ಟಿ (65 ವರ್ಷ) ದಿನಾಂಕ 27/04/2011 ರಂದು ಮಧ್ಯಾಹ್ನ 3:30 ಗಂಟೆಗೆ ಹತ್ತಿರದ ತಮ್ಮ ಬಾವಿಯಿಂದ ನೀರನ್ನು ಸೇದುವರೇ ಹೋಗಿದ್ದು ,ಅದೇ ಸಮಯ ಬಾವಿಯ ಬಳಿಯಿಂದ ಶಬ್ದ ಕೇಳಿದ್ದು , ಕೂಡಲೇ ನಾನು ಬಾವಿಯ ಬಳಿ ಹೋದಾಗ ನನ್ನ ಹೆಂಡತಿಯು ಅಲ್ಲಿ ಇರಲಿಲ್ಲ ಬಾವಿಯ ಹಗ್ಗ ರಾಟೆಯಲ್ಲಿದ್ದು ಹಗ್ಗ ಬಾವಿಯಲ್ಲಿ ನೇತಾಡಿಕೊಂಡಿದ್ದು ,ನಾನು ಬಾವಿಯನ್ನು ನೋಡಿದಾಗ ನನ್ನ ಹೆಂಡತಿ ಬಾವಿಯ ನೀರಿನಲ್ಲಿ ಕವಾಚಿ ಬಿದ್ದು ಮೃತ ಪಟ್ಟ ಸ್ಥಿತಿಯಲ್ಲಿದ್ದು , ನೀರು ಸೇದುವ ವೇಳೆ ಆಕಸ್ಮಿಕ ವಾಗಿ ಆಯ ತಪ್ಪಿ ವಾಲಿ ಬಾವಿಯ ನೀರಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ। ಈ ಸಂಬಂದ ಸುಂದರ ಶೆಟ್ಟಿರವರು ಶಿರ್ವಾ ಠಾಣೆಗೆ ದೂರು ನೀಡಿದ್ದು ಶಿರ್ವಾ ಠಾಣಾಧಿಕಾರಿರವರು ಠಾಣಾ ಯು.ಡಿ.ಆರ್‌ ಸಂಖ್ಯೆ ನಂ. 04/2011 ಕಲಂ;174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
  • ಮಲ್ಪೆ: ದಿನಾಂಕ 28/04/11 ರಂದು ಬೆಳೀಗ್ಗೆ 05:30 ಗಂಟೆಯಿಂದ 06:40 ಗಂಟೆ ಮದ್ಯೆ ಅವಧಿಯಲ್ಲಿ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಪಕ್ಕಿಬೆಟ್ಟು ಪಡುಮನೆ ಎಂಬಲ್ಲಿ ಪಿರ್ಯಾದಿ ಪ್ರಭಾಕರ ವಿ ಕೋಟ್ಯಾನ್ (40) ತಂದೆ: ಅಣ್ಣಯ್ಯ ಪೂಜಾರಿ ವಾಸ: ಪಕ್ಕಿಬೆಟ್ಟು ಪಡುಮನೆ ಕಲ್ಯಾಣಪುರ ರವರ ತಂದೆ ಅಣ್ಣಯ್ಯ ಪೂಜಾರಿ (74) ಎಂಬವರು ಮಾನಸಿಕ ಕಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಸಂಬಂದ ಪ್ರಭಾಕರರವರು ಮಲ್ಪೆ ಠಾಣೆಗೆ ದೂರು ನೀಡಿದ್ದು ಮಲ್ಪೆ ಠಾಣಾಧಿಕಾರಿರವರು ಠಾಣಾ ಯು.ಡಿ.ಆರ್‌ ಸಂಖ್ಯೆ ನಂ. 17/2011 ಕಲಂ;174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಹಲ್ಲೆ ಪ್ರಕರಣ
  • ಹೆಬ್ರಿ: ದಿನಾಂಕ:27/04/11 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿ ಶ್ರೀಮತಿ ವಿಮಲ ಗಂಡ:ವಿಠಲ ನಾಯ್ಕ್ ವಾಸ:ಬಡ್ತನಾಬೈಲು ಕುಚ್ಚೂರು ಗ್ರಾಮ ಕಾರ್ಕಳ ತಾಲೂಕು.ಇವರು ಮನೆಯಲ್ಲಿ ಬಟ್ಟೆ ಓಗೆಯುತ್ತಿರುವಾಗ ಪಿರ್ಯಾದಿದಾರರ ಮಗಳು ಶ್ವೇತಾಳು ರಾಗಿಯನ್ನು ಚೆಲ್ಲಿದಾಗ ಪಿರ್ಯಾದುದಾರರು ತನ್ನ ಮಗಳಿಗೆ ಬೈದುದನ್ನು ಕಂಡು ಆರೋಪಿಗಳಾದ ಪಕ್ಕದ ಮನೆಯ ಪದ್ದು ಮತ್ತು ಆಕೆಯ ಮಗಳಾದ ಭಾರತಿಯವರು ಪಿರ್ಯಾದಿದಾರರು ತಮಗೆ ಬೈದರೆಂದು ಭಾವಿಸಿ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ಭಾರತಿಯು ತನ್ನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಪಿರ್ಯಾದುದಾರರ ತಲೆಯ ಎಡಭಾಗಕ್ಕೆ ಹಾಗೂ ಆರೋಪಿ ಪದ್ದು ತನ್ನ ಕೈಯಲ್ಲಿದ್ದ ಕಸದ ಪೊರಕೆಯಿಂದ ಪಿರ್ಯಾದುದಾರರ ಬಲ;ಭುಜಕ್ಕೆ ಹೊಡೆದು ನೋವುಂಟು ಮಾಡಿರುವುದಾಗಿದೆ ಈ ಸಂಬಂದ ಹೆಬ್ರಿ ಠಾಣೆಗೆ ಶ್ರೀಮತಿ ವಿಮಲರವರು ಪಿರ್ಯಾದಿ ನೀಡಿದ್ದು ಠಾಣಾಧಿಕಾರಿರವರು ಠಾಣಾ ಅಪರಾದ ಕ್ರಮಾಂಕ 18/11, ಕಲಂ: 447,504,324, ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

No comments: