Friday, April 29, 2011

Daily Crime Reported on 29/04/2011 07:00 Hrs

ಅಪಘಾತ ಪ್ರಕರಣಗಳು

  • ಕಾರ್ಕಳ :ದಿನಾಂಕ: 28.04.2011 ರಂದು ಬೆಳಿಗ್ಗೆ 09:30 ಗಂಟೆಗೆ ರಾಜೇಶ್ ಶೆಟ್ಟಿ (42 ವರ್ಷ) ತಂದೆ: ಶಿವರಾರ್ಮ ಶೆಟ್ಟಿ, ವಾಸ: ಶ್ರೀನಿದಿ, ಕೆಮ್ಮಣ್ಣು, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕುರರು ತನ್ನ ಅಂಬಾಸಿಡರ್ ಕಾರು ನಂಬ್ರ ಸಿ.ಟಿ.ಎಕ್ಸ್ 3394 ನೇದರಲ್ಲಿ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಾ ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ, ಬೇಬಿನಾಲ್ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಅಂದರೆ ಬೆಳ್ಮಣ್ ಕಡೆಯಿಂದ ಮುಂಡ್ಕೂರು ಕಡೆಗೆ ಕೆ.ಎ.20.ಬಿ.0412 ನೇ ಬಸ್ಸನ್ನು ಅದರ ಚಾಲಕ ಪುಷ್ಪರಾಜ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈ ಮೂಳೆ ಮುರಿತವುಂಟಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಎಂಬುದಾಗಿ ರಾಜೇಶ್ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 30/2011 ಕಲಂ: 279,338 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾಪು :ದಿನಾಂಕ 28-04-2011 ರಂದು 16:00 ಗಂಟೆಗೆ ಉಳಿಯಾರಗೋಳಿ ಗ್ರಾಮದ ಕೊತ್ತಲ್ ಕಟ್ಟೆ ಬಳಿ ,ರಾ.ಹೆ-17 ರಲ್ಲಿ ಆರೋಪಿ ಕೆಎ-19-ಸಿ -5805 ನೇ ಝೇಲೋ ಕಾರಿನ ಚಾಲಕ ಆಶ್ವಿನಿರವರು ಕಾರನ್ನು ಉಡುಪಿ ಕಡೆಯಿಂದ ಕಾಪು ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮುಂದುಗಡೆ ಹೋಗುತ್ತಿದ್ದ ಕೆಎ-20-ಬಿ-7936 ನೇ ಟಾಟಾ .ಸಿ. ಎಕ್ಸ್ ಮಿನಿ ಟೆಂಪೋವನ್ನು ಓವರ್ ಟೆಕ್ ಮಾಡುತ್ತಿದಾಗ ಮಿನಿ ಟೆಂಪೋದ ಮುಂದಿನ ಬಲ ಬದಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿ ನಿಲ್ಲಿಸಿರುತ್ತಾನೆ. ಮಿನಿ ಟೆಂಪೋದ ಎದುರಿನ ಬಲ ಬದಿ ಹಾಗೂ ಕಾರಿನ ಎಡ ಬಾಗದ ಡೋರ್ ಜಂಕಮ್ ಗೊಂಡಿರುತ್ತದೆ ಎಂಬುದಾಗಿ ಗಣೇಶ್.ಎಂ (28 ವರ್ಷ), ತಂದೆ- ಮಂಜಪ್ಪ ಕೆ, ವಾಸ: ಹಾರತಾಳ ಅಂಚೆ, ಹೊಸನಗರ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 76/2011 ಕಲಂ: 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಜೀವ ಬೆದರಿಕೆ ಪ್ರಕರಣಗಳು
  • ಗಂಗೊಳ್ಳಿ :ದಿನಾಂಕ: 27/04/2011ರಂದು ರಾತ್ರಿ ಸಮಯ ಸುಮಾರು 20:15 ಗಂಟೆಗೆ ಶ್ರೀಮತಿ ಸುಶೀಲ ಪೂಜಾರಿ(37 ವರ್ಷ) ಗಂಡ:ಮಹಾಬಲ ಪೂಜಾರಿ, ವಾಸ: ಹೊಸಮನೆ, ಕೊಡಪಾಡಿ, ಗುಜ್ಜಾಡಿ ಗ್ರಾಮ ಕುಂದಾಪುರ ತಾಲೂಕುರರು ಅವರ ಅಂಗಡಿಯಿಂದ ಮನೆಗೆ ಬಂದು ಊಟ ಮಾಡಿ ಮಲಗಿಕೊಂಡಿರುವಾಗ ರಾತ್ರಿ ಸಮಯ ಸುಮಾರು 21:15 ಗಂಟೆಗೆ ಅವರ ಮನೆಯ ಎದುರಿನ ಮಹಾಬಲ ಪೂಜಾರಿಯವರು ಫಿರ್ಯಾದಿದಾರರ ಮನೆಯ ಬಳಿ ಅಕ್ರಮ ಪ್ರವೇಶ ಮಾಡಿ ಬಾಗಿಲನ್ನು ಬಡಿದಾಗ ಫಿರ್ಯಾದಿದಾರರು ಅವರ ಮನೆಯ ಕಿಟಕಿ ಬಾಗಿಲಿನಲ್ಲಿ ನೋಡಿ ಬಾಗಿಲನ್ನು ತೆರೆದು ಹೊರಗೆ ಬಂದಾಗ ಮಹಾಬಲ ಪೂಜಾರಿಯು ಫಿರ್ಯಾದಿದಾರರನ್ನು ಉದ್ದೇಶಿಸಿ ನೀನು ನಮ್ಮ ಜಾಗದಲ್ಲಿ ಅಡಿಕೆ ಸಸಿಗಳನ್ನು ತುಂಡು ಮಾಡಿದ್ದೀಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಕೈಯಿಂದ ಫಿರ್ಯಾದಿದಾರರ ಜುಟ್ಟನ್ನು ಹಿಡಿದು ತಲೆಯನ್ನು ಬಗ್ಗಿಸಿ ಕೈಯಿಂದ ಹೊಡೆದು ಹೋಗಿರುತ್ತಾನೆ ಎಂಬುದಾಗಿ ಸುಶೀಲ ಪೂಜಾರಿ ರವರು ನೀಡಿದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2011 ಕಲಂ: 323,447,504,506,354 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ :ದಿನಾಂಕ:27/04/2011ರಂದು ರಾತ್ರಿ 21:15 ಗಂಟೆಗೆ ಕುಪ್ಪು ಪೂಜಾರ್ತಿ(56 ವರ್ಷ) ಗಂಡ: ದಿ. ಬಾಬು ಪೂಜಾರಿ, ವಾಸ:ಮಾಚಿಮನೆ, ಕೊಡಪಾಡಿ. ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕುರರ ಹಿಂದಿನ ಮನೆಯ ಸುಶೀಲ ಪೂಜಾರ್ತಿ ಮತ್ತು ಅವಳ ಅಣ್ಣ ಮಹಾಲಿಂಗ ಫಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಗಿಡಗಳನ್ನು ಕೋಲಿನಿಂದ ಬಡಿದು ಗಿಡಗಳನ್ನು ತುಂಡುಮಾಡಿದ್ದು ಆಗ ಫಿರ್ಯಾದಿದಾರರು ಅಲ್ಲಿಗೆ ಬಂದು ನಮ್ಮ ಜಾಗದ ಗಿಡಗಳನ್ನು ಯಾಕೆ ಕಡಿಯುತ್ತೀಯಾ ಎಂದು ಕೇಳಿದಾಗ ಮಹಾಲಿಂಗನು ಫಿರ್ಯಾದಿದಾರರ ರವಿಕೆಯನ್ನು ಹಿಡಿದೆಳೆದು ಕೈಗಳಿಂದ ಹೊಡೆದು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿ ಎಂಬುದಾಗಿ ಕುಪ್ಪು ಪೂಜಾರ್ತಿ ರವರು ನೀಡಿದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2011 ಕಲಂ: 323,447,504,506,354 ಜೊತೆಗೆ 34 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ :ಶ್ರೀಮತಿ ಭವಾನಿ(24 ವರ್ಷ), ಗಂಡ: ಪಾಂಡು ನಾಯ್ಕ, ವಾಸ: ಮಾತ್ಕಲ್ಲುಜೆಡ್ಡು ಕುಚ್ಚೂರು ಗ್ರಾಮ, ಕಾರ್ಕಳ ತಾಲೂಕುರ ಗಂಡ ಪಾಂಡು ನಾಯ್ಕ (32) ಎಂಬವರು ವಿಪರೀತ ಮಧ್ಯಸೇವನೆ ಮಾಡುವ ಚಟವುಳ್ಳವರಾಗಿದ್ದು ಪ್ರತಿದಿನ ಮಧ್ಯಸೇವನೆ ಮಾಡಿ ಮನೆಗೆ ಬಂದು ಪಿರ್ಯಾದಿದಾರರಿಗೆ ಹಾಗೂ ಮಕ್ಕಳಿಗೆ ಹೊಡೆಯುತ್ತಿದ್ದರು ಅಂತೆಯೇ ದಿನಾಂಕ: 27-04-2011 ರಂದು ಸಂಜೆ 07:30 ಗಂಟೆಗೆ ವಿಪರೀತ ಮಧ್ಯಸೇವನೆ ಮಾಡಿ ಮನೆಗೆ ಬಂದಿರುವುದನ್ನು ಕಂಡು ಪಿರ್ಯಾದಿದಾರರು ಹೆದರಿ ತನ್ನ ಮಕ್ಕಳೊಂದಿಗೆ ತನ್ನ ಅಕ್ಕಮನೆಯಾದ ಸೊಳ್ಳೆಕಟ್ಟೆಗೆ ಹೋಗಿದ್ದು ಈ ದಿನ ದಿನಾಂಕ: 28-04-2011 ರಂದು ಮದ್ಯಾಹ್ನ 12:00 ಗಂಟೆಗೆ ವಾಪಾಸು ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ಮಾತ್ಕಲ್ಲುಜೆಡ್ಡುವಿನ ತನ್ನ ಮನೆಗೆ ಬಂದಾಗ ಪಿರ್ಯಾದಿದಾರರ ಗಂಡ ಪಾಂಡು ನಾಯ್ಕ ರವರು ಮನೆಯ ಬಳಿ ಕವುಚಿ ಬಿದ್ದು ಮೃತಪಟ್ಟಿರುತ್ತಾರೆ. ಮೃತ ಪಾಂಡು ನಾಯ್ಕ ರವರು ವಿಪರೀತ ಮದ್ಯ ಸೇವನೆ ಮಾಡಿದ ಪರಿಣಾಮ ಮನೆಯ ಬಳಿ ಹಾಕಿದ ಕಲ್ಲಿನ ದಂಡಗೆ ಅವರ ಕಾಲು ತಾಗಿ ಏಳಲು ಅಗದೇ ಅಲ್ಲೇ ಮೃತಪಟ್ಟಿರ ಬಹುದು ಅಥವಾ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಶ್ರೀಮತಿ ಭವಾನಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ 10/2011 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: