ಅಪಘಾತ ಪ್ರಕರಣ
- ಹೆಬ್ರಿ: ದಿನಾಂಕ: 29।04।11 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಸತೀಶ ಮೊಗವೀರ (28), ತಂದೆ: ದಿ.ನಾಗರಾಜ ಮೊಗವೀರ, ವಾಸ: ಜಿಲ್ಲರ್‌ಬೆಟ್ಟು ಮನೆ, ಮಹಾಗಣಪತಿ ದೇವಸ್ಥಾನದ ಹತ್ತಿರ, ಹಟ್ಟಿಯಂಗಡಿ ಗ್ರಾಮ, ಕುಂದಾಪುರ ರವರು ತನ್ನ ಬಾಬ್ತು ಕೆಎ.20.ಜೆ.2427 ನೇ ಮೋಟಾರ್ ಸೈಕಲ್‌ನಲ್ಲಿ ಕುಚ್ಚೂರು ರಸ್ತೆಯಲ್ಲಿ ಹೋಗುತ್ತಿದ್ದು ಅವರು ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ರಾಗಿಹಕ್ಲು ಎಂಬಲ್ಲಿ ತಲುಪುವಾಗ ಅವರ ಎದುರುಗಡೆಯಿಂದ ಅಂದರೆ ಕುಚ್ಚೂರು ಕಡೆಯಿಂದ ಹೆಬ್ರಿ ಕಡೆಗೆ ಕೆಎ.20.ಎ.8994ನೇ ಮಾರುತಿ ಓಮ್ನಿ ಕಾರು ಚಾಲಕ ರಾಜೀವ ಕುಲಾಲ್ ಎಂಬವರು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಫಿರ್ಯಾದಿ ಸತೀಶ ಮೊಗವೀರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಅಕ್ರ: 19/11, ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಉಡುಪಿ: ದಿನಾಂಕ: 29/04/2011 ರಂದು ಬೆಳಿಗ್ಗೆ 11:55 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಎಜಾಜ್ ಅಹಮ್ಮದ್ (22) ತಂದೆ: ಮಹಮ್ಮದ್ ಇಕ್ಬಾಲ್ ಶೇಕ್ ವಾಸ:ಸುಹೈಲ್ ಮಂಜಿಲ್ ಬೈಲಜಿಡ್ಡ, ಉದ್ಯಾವರ ಉಡುಪಿ ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 20 ಡಬ್ಲ್ಯೂ 2696 ನ್ನು ಚಲಾಯಿಸಿಕೊಂಡು ಡಯಾನ ವೃತ್ತ ಕಡೆಯಿಂದ ಉಡುಪಿ ಬಸ್ ನಿಲ್ದಾಣದ ಕಡೆಗೆ ಹೋಗುವರೇ ಕೆ।ಎಂ ರಸ್ತೆಯಲ್ಲಿ ಚರ್ಚ್ ನ ಮುಂಭಾಗ ಹೋಗುತ್ತಿರುವಾಗ ಪಿರ್ಯಾದುದಾರರ ಹಿಂದಿನಿಂದ ಕೆಎ 20 ಬಿ 1068 ದುರ್ಗಾಂಬಾ ಬಸ್ಸು ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಎಜಾಜ್ ಅಹಮ್ಮದ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಮಗುಚಿ ಬಿದ್ದಿದ್ದು, ಅವರ ಬಲಕಾಲಿನ ಮೊಣಗಂಟಿಗೆ ತರಚಿದ ರಕ್ತ ಗಾಯ ಉಂಟಾಗಿದ್ದು, ಅಲ್ಲದೇ ಕಾಲಿನ ಒಳಗಡೆ ನೋವು ಉಂಟಾಗಿರುತ್ತದೆ । ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ: 156/2011 ಕಲಂ: 279, 337ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹಲ್ಲೆ ಪ್ರಕರಣ - ಉಡುಪಿ: ದಿನಾಂಕ 28/04/2011 ರಂದು ಮದ್ಯಾಹ್ನ ಸುಮಾರು 04:15 ರ ಸಮಯಕ್ಕೆ ಫಿರ್ಯಾದಿ ಗುರುರಾಜ ಉಪಾಧ್ಯ (63) ತಂದೆ: ರಾಮಕೃಷ್ಣ ಉಪಾಧ್ಯ ವಾಸ:ಉಪಾಧ್ಯ ನಿವಾಸ ಕುಂಜಿಬೆಟ್ಟು ಉಡುಪಿ ಅವರು ತನ್ನ ಮನೆಗೆ ಸಾರ್ವಜನಿಕ ದಾರಿಯಾದ ಗೋಪಾಲ ಉಪಾಧ್ಯನ ಮನೆಯ ಎದುರುಗಡೆಯಿಂದ ಬರುತ್ತಿದ್ದಾಗ ಗೋಪಾಲ ಉಪಾಧ್ಯ ಎಂಬವರು ಪಿರ್ಯಾದುದಾರರ ವಾಹನವನ್ನು ತಡೆದು ನಿಲ್ಲಿಸಿ, ಗೋಪಾಲ ಉಪಾಧ್ಯ ಮತ್ತು ಅವನ ಹೆಂಡತಿ ಫಿರ್ಯಾದಿ ಗುರುರಾಜ ಉಪಾಧ್ಯರವರ ಮೇಲೆ ಹಲ್ಲೆ ಮಾಡಿ, ಅವರ ವಾಹನವನ್ನು ದೂಡಿ ಹಾಕಿ ಕಾಲಿನಿಂದ ತುಳಿದು, ಬೇವರ್ಸಿ, ಬೋಳಿಮಗ ನಿನಗೆ ಮತ್ತು ನಿನ್ನ ಮನೆಯವರಿಗೆ ತುಂಬಾ ಅಹಂಕಾರ ಬಂದಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಾ ತಡೆಯಲು ಬಂದ ಪಿರ್ಯಾದುದಾರರ ಮಕ್ಕಳಿಗೆ ಮತ್ತು ಹೆಂಡತಿಗೆ ಕೋಲಿನಿಂದ ಹಲ್ಲೆಗೆ ಮುಂದಾಗಿದ್ದು ಹಲ್ಲೆಯಿಂದ ಫಿರ್ಯಾದಿ ಗುರುರಾಜ ಉಪಾಧ್ಯರವರ ಮುಖಕ್ಕೆ, ಸೊಂಟಕ್ಕೆ ಮತ್ತು ಕೈಕಾಲಿಗೆ ತೀವೃ ತರಹದ ರಕ್ತಗಾಯ ಉಂಟಾಗಿದ್ದು , ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನಂತೆ ಉಡುಪಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 154/2011 ಕಲಂ: 341, 323, 324, 504,506 R/W 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ಉಡುಪಿ: ದಿನಾಂಕ 28-04-11ರಂದು ಗೋಪಾಲ ಉಪಾಧ್ಯ (46) ತಂದೆ: ಬಿ ಆರ್ ರಾಮಕೃಷ್ಣ ಉಪಾಧ್ಯ ವಾಸ: ಉಪಾಧ್ಯಾಯ ಕಂಪೌಂಡ್ ಗಣೇಶ್ ಸ್ಟಾಪ್ ಹತ್ತಿರ ಬುಡ್ನಾರು ಕುಂಜಿಬೆಟ್ಟು,ಉಡುಪಿ ಮನೆಯಲ್ಲಿರುವಾಗ್ಗೆ ಅವರ ಮನೆಯ ಎದುರಿನ ಕಾಲುದಾರಿಯ ಕಲ್ಲುಗಳನ್ನು ತೆಗೆಯುತ್ತಿದ್ದ ಶಬ್ದ ಕೇಳಿ ಸುಮಾರು 16:15ಗಂಟೆಯ ಸಮಯಕ್ಕೆ ಹೊರಗೆ ಬಂದು ನೋಡಿದಾಗ ಆಪಾದಿತ ಶ್ರೀನಿವಾಸ ಉಪಧ್ಯಾಯನು ಪಿರ್ಯಾದಿದಾರರ ಕಾಲುದಾರಿಯ ಬಳಿಯ ತೆಂಗಿನ ಕಟ್ಟೆಯ ಕಲ್ಲುಗಳನ್ನು ತೆಗೆದು ಬಾವಿಗೆ ಹಾಕುತ್ತಿದ್ದು, ಪಿರ್ಯಾದಿ ಗೋಪಾಲ ಉಪಾಧ್ಯ ಬಂದು ತಡೆಯುತ್ತಿದ್ದಾಗ, ಇನ್ನೊಬ್ಬ ಆಪಾದಿತ ಗುರುರಾಜ ಉಪಾಧ್ಯಾಯ ಪಿರ್ಯಾದಿದಾರರನ್ನು ಉದ್ದೇಶಿಸಿ ಬೋಳಿಮಗನೇ, ಸೂಳೆ ಮಗನೆ ನೀನು ಎಲ್ಲಿಂದ ಬಂದು ಇಲ್ಲಿ ರಾಜ್ಯಭಾರ ಮಾಡುತ್ತಿ, ನಮ್ಮ ರಸ್ತೆಯನ್ನು ಅಕ್ರಮ ಮಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಪಾದಿತ ಶ್ರೀನಿವಾಸ ಉಪಾಧ್ಯಾಯನು ಪಿರ್ಯಾದಿ ಗೋಪಾಲ ಉಪಾಧ್ಯರವರಿಗೆ ಕೊತ್ತಳಿಗೆಯಿಂದ ಕೈಗೆ, ಬೆನ್ನಿಗೆ, ಹೊಡೆದಿರುತ್ತಾರೆ। ಪಿರ್ಯಾದಿದಾರರನ್ನು ತಪ್ಪಿಸಲು ಬಂದ ಪಿರ್ಯಾದಿದಾರರ ಹೆಂಡತಿ ಗೀತಾ ಉಪಾಧ್ಯಾಯರಿಗೂ ಹೊಡೆಯಲು ಬಂದಿದ್ದು, ನಿಮ್ಮಿಬ್ಬರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ. ಪಿರ್ಯಾದಿದಾರರು ಈ ಹಲ್ಲೆಯಿಂದ ಗಾಯಗೊಂಡು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಹಲ್ಲೆಯಸಮಯ ಪಿರ್ಯಾದಿದಾರರ ಚಿನ್ನದ ಸರ ಮತ್ತು ಸ್ಟಟಿಕದ ಮಾಲೆ ಬಿದ್ದು ಹೋಗಿರುತ್ತದೆ. ಪಿರ್ಯಾದಿ ಗೋಪಾಲ ಉಪಾಧ್ಯ ಮತ್ತು ಗುರುರಾಜ ಉಪಾಧ್ಯಾಯ ಹಾಗೂ ಶ್ರೀನಿವಾಸ ಉಪಧ್ಯಾಯ ಮನೆಯ ಎದುರಿನ ಕಾಲುದಾರಿಯ ಬಗ್ಗೆ ತಕರಾರು ಇದ್ದು, ಇದೇ ವಿಚಾರದಲ್ಲಿ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದಾಗಿರುತ್ತದೆ .ಈ ಬಗ್ಗೆ ಗೋಪಾಲ ಉಪಾಧ್ಯರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಅದರಂತೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 155/2011 ಕಲಂ: 323 324 504 506 34 ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment