Daily Crime Reported on 30/04/2011 at 07:00 Hrs
ಕುತ್ತಿಗೆಯಿಂದ ಸರ ಎಳೆದು ಪರಾರಿ - ಪಡುಬಿದ್ರಿ: ದಿನಾಂಕ 29।04.2011 ರಂದು 14.10 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಜಯಂತಿ ಪ್ರಾಯ 41 ವರ್ಷ ಗಂಡ: ದಿ: ಟಿ.ಸಿ ಪ್ರೇಮರಾಜನ್ ವಾಸ: ಬ್ರಹ್ಮಾರಿ ಕೆಲ್ಲಾರು , ನಂದಿಕೂರು ಗ್ರಾಮ, ಉಡುಪಿ ತಾಲೂಕು ಎಂಬವರು ನಂದಿಕೂರು ಗ್ರಾಮದ ಕೆಲ್ಲಾರು ನರಸಿಂಹ ಅಯಿಲ್ ಮಿಲ್ ಬಳಿಯ ಮಣ್ಣು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಓರ್ವ ಸುಮಾರು 30 ರಿಂದ 35 ಪ್ರಾಯದ ಅಪರಿಚಿತ ವ್ಯಕ್ತಿ ಜಯಂತಿ ರವರ ತಲೆಗೆ ಗೊಬ್ಬರ ಸೊಪ್ಪಿನ ದೊಣ್ಣೆಯಿಂದ ಹೊಡೆದು ಬಲ ಕೈಗೆ ಚೂರಿಯಿಂದ ಗೀರಿ ಗಾಯಗೊಳಿಸಿ ಕುತ್ತಿಗೆಯಲ್ಲಿದ್ದ ಸುಮಾರು 40,000/- ಮೌಲ್ಯದ ಚಿನ್ನದ ಲಾಂಗ್ ಸರವನ್ನು ಬಲತ್ಕಾರವಾಗಿ ಸೆಳೆದುಕೊಂಡು ಪರಾರಿಯಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಜಯಂತಿರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2011 ಕಲಂ 394 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು- ಹೆಬ್ರಿ: ದಿನಾಂಕ: 29।04.11 ರಂದು ಬೆಳಿಗ್ಗೆ ರಘುನಂದನ.ಬಿ.ಎಸ್(36), ಬಿನ್ ದಿವಂಗತ ಬಿ.ಶಂಕರನಾರಾಯಣ ರಾವ್, ವಾಸ: ಬ್ರಹ್ಮನ ಕೋಡು, ನಾರ್ವೆ ಪೋಸ್ಟ್, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ, ಎಂಬವರು ಕುಂದಾಪುರದ ಸಿದ್ದಾಪುರದಿಂದ ಕೊಪ್ಪ ತಾಲೂಕಿನ ಬ್ರಹ್ಮನ ಕೋಡಿಗೆ ಹೋಗಲು ಕೆಎ.17.ಎಂಎ.9900 ನೇ ಪೋರ್ಡ್ ಐಕಾನ್ ಕಾರಿನಲ್ಲಿ ಹೊರಟು ಹೆಬ್ರಿ –ಆಗುಂಬೆ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ 07-20 ಗಂಟೆಗೆ ಕಾರ್ಕಳ ತಾಲೂಕು ನಾಡ್ಪಾಲು ಗ್ರಾಮದ ಆಗುಂಬೆ 2ನೇ ತಿರುವಿನ ಬಳಿ ತಿರುಗುವಾಗ ಎದುರಿನಿಂದ ಆಗುಂಬೆ ಕಡೆಯಿಂದ ಹೆಬ್ರಿ ಕಡೆಗೆ ಆರೋಪಿತ ನವೀನ ಹವಾಲ್ದಾರ ಎಂಬವರು ತನ್ನ ಕೆಎ.20.ಪಿ.1368ನೇ ಪೋರ್ಡ್ ಪಿಯೇಸ್ಟಾ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ರಘುನಂದನ.ಬಿ.ಎಸ್ ರವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ ಅಲ್ಲದೇ ಆರೋಪಿತನ ಕಾರಿನ ಮುಂಭಾಗವು ಸಹ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ ಎಂಬುದಾಗಿ ರಘುನಂದನ.ಬಿ.ಎಸ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2011 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಂಕರನಾರಾಯಣ: ದಿನಾಂಕ 29/04/2011 ರಂದು 16:30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ ಸಿದ್ದಾಪುರ ಕಡೆಯಿಂದ ಅಂಪಾರು ಕಡೆಗೆ ಹನುಮಾನ್ ಕಂಪೆನಿಯ ನಂಬ್ರ ಕೆ।ಎ 20 ಬಿ 7561 ನೇ ಬಸ್ಸನ್ನು ಅದರ ಚಾಲಕ ರಾಜೇಂದ್ರ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಸಾಗುತ್ತಿದ್ದ ಕೆ.ಎ20/6652 ನೇ ಅಂಬಾಸಿಡರ್ ಕಾರಿಗೆ ರಬಸದಿಂದ ಡಿಕ್ಕಿ ಹೋಡೆದ ಪರಿಣಾಮ ಅಂಬಾಸಿಡರ್ ಕಾರಿನಲ್ಲಿದ್ದ ಶೇಖ್‌ಮೀರಾ ಸಾಹೇಬರ ತಲೆಗೆ ಮೈಗೆ ತೀವೃ ಗಾಯವಾಗಿದ್ದು ಅಲ್ಲದೇ .ಸದ್ರಿ ಕಾರಿನಲ್ಲಿದ್ದ ಮೂರು ಜನ ಹೆಂಗಸರು ಹಾಗೂ ಒಬ್ಬರು ಗಂಡಸು ಗಾಯಗೊಂಡಿದ್ದು, ಸದ್ರಿಯವರುಗಳನ್ನು 108 ಅಂಬುಲೆನ್ಸ್‌ನಲ್ಲಿ ಕುಂದಾಪುರ ಆಸ್ಪತ್ರೆಗೆ ಸಾಗಿಸಿದ್ದು .ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೀಸಿದಾಗ ಶೇಖ್‌ಮೀರಾ ಸಾಹೇಬರು ಹಾಗೂ ಉಳಿದಿಬ್ಬರಾದ ಶ್ರೀಮತಿ ತುಂಗಾ (35) ಹಾಗೂ ಗುಲಾಬಿ (36) ರವರು ಮೃತ ಪಟ್ಟಿರುವುದಾಗಿಯೂ ತೀವೃ ಗಾಯಗೊಂಡ ಹಾಲಪ್ಪ ಮತ್ತು ಶೈಲಾರವರನ್ನು ನಂತರ ಚಿನ್ಮಯಿ ಆಸ್ಪತ್ರೆ ಕುಂದಾಪುರಕ್ಕೆ ಚಿಕಿತ್ಸೆಗೆ ಕರದೊಯ್ದು ನಂತರ ಅಲ್ಲಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಅಫೀಜ್ (24) ಬಿನ್ ಮಹಮ್ಮದ್ ವಾಸ: ಜವೂರಾ ಮಂಜಿಲ್ ಜನ್ಸಾಲೆ, ಸಿದ್ಧಾಪುರ ಗ್ರಾಮ, ಕುಂದಾಪುರ ತಾಲೂಕು ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2011 ಕಲಂ ಕಲಂ:279, 338 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಬೈಂದೂರು: ದಿನಾಂಕ 28/04/2011 ರಂದು ಸಮಯ 19:45 ಘಂಟೆಗೆ ರಾಮ ಪೂಜಾರಿ (35) ಬಿನ್ ಅಣ್ಣಪ್ಪ ಪೂಜಾರಿ ವಾಸ ಚ್ವೌಳಿಗುಡ್ಡೆ ಹೆರಂಜಾಲು ಗ್ರಾಮ ಕುಂದಾಪುರ ತಾಲೂಕು ಎಂಬವರು ಸೈಕಲ್‌ನಲ್ಲಿ ಕಂಬದಕೋಣಿಯಿಂದ ಹೆರಂಜಾಲು ಗ್ರಾಮದ ಚ್ವೌಳಿಗುಡ್ಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಚ್ವೌಳಿಗುಡ್ಡೆ ಎಂಬಲ್ಲಿ ಅವರ ಸೈಕಲ್‌ಗೆ ಯಾವುದೋ ಒಂದು ಅಪರಿಚಿತ ವಾಹನ ಚಾಲಕ ತನ್ನ ಬಾಬ್ತು ವಾಹನವನ್ನು ಕಾಲ್ತೋಡು ಕಡೆಯಿಂದ ಕಂಬದಕೋಣೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸೈಕಲ್ ಸಮೇತ ಕೆಳಗೆ ಬಿದ್ದುದರಿಂದ ಅವರ ಹಣೆಗೆ ಮತ್ತು ಬಲ ಕಾಲಿನ ಮೊಣ ಗಂಟಿನ ಕೆಳಗೆ ಗಾಯವಾಗಿದ್ದು ರಾತ್ರಿಯಾದುದರಿಂದ ಅಪಘಾತವೆಸಗಿದ ವಾಹನ ಹಾಗೂ ನಂಬ್ರ ನೋಡಲು ಆಗಿರುವುದಿಲ್ಲ, ಡಿಕ್ಕಿ ಹೊಡೆದ ವಾಹನವನ್ನು ಆರೋಪಿಯು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುವುದಾಗಿದೆ, ಈ ಅಪಘಾತಕ್ಕೆ ಅಪರಿಚಿತ ವಾಹನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ರಾಮ ಪೂಜಾರಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2011 ಕಲಂ; ಕಲಂ; 279, 337 ಐ।ಪಿ.ಸಿ ಜೊತೆಗೆ 134 (ಎ) ಮತ್ತು (ಬಿ ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು - ಬೈಂದೂರು: ದಿನಾಂಕ 28/04/2011 ರಂದು 17:30 ಘಂಟೆಗೆ ಕುಂದಾಪುರ ತಾಲೂಕು ಬಿಜೂರು ಗ್ರಾಮದ ಬೈಟು ಮನೆ ಎಂಬಲ್ಲಿ ಪಿರ್ಯಾದಿ ಮಂಜು ದೇವಾಡಿಗ (42) ಬಿನ್ ದಿವಂಗತ ಗೋವಿಂದ ದೇವಾಡಿಗ ಎಂಬವರು ತೋಟದ ತೆಂಗಿನ ಮರಗಳಿಗೆ ನೀರು ಹಾಕುತ್ತಿರುವ ಸಮಯ ಆರೋಪಿಗಳಾದ 1। ಶ್ರೀಮತಿ. ಜಾನಕಿ ಗಂಡ ಶೇಷ ದೇವಾಡಿಗ 2. ನಾಗಮ್ಮ ದೇವಾಡಿಗ ಗಂಡ ರಾಮ ದೇವಾಡಿಗ, 3. ಕಾವೇರಿ ದೇವಾಡಿಗ ಗಂಡ ಜಟ್ಟ ದೇವಾಡಿಗ ಎಂಬವರು ಸಮಾನ ಉದ್ದೇಶದಿಂದ ಬಂದು ನೀನು ಅಂಗಳಕ್ಕೆ ಯಾಕೆ ನೀರು ಹಾಕುತ್ತಿ ಎಂದು ಆಕ್ಷೇಪಿಸಿ, ಅವಾಚ್ಯ ಶಬ್ದಗಳಿಂದ ಬೈದು, ಆರೋಪಿತರು ಅವರ ಕೈಯಲ್ಲಿದ್ದ ಮರದ ದೊಣ್ಣೆಗಳಿಂದ ಮಂಜು ದೇವಾಡಿಗ ರವರ ಎಡ ಕೈ, ಕೊಲು ಕೈಗೆ, ತಲೆಯ ಎಡ ಭಾಗಕ್ಕೆ ಮತ್ತು ಬಲ ಭುಜಕ್ಕೆ ಹೊಡೆದು ಹಲ್ಲೆ ನಡೆಸಿರುವುದಾಗಿದೆ. ಈ ಕೃತ್ಯಕ್ಕೆ ಪಿರ್ಯಾದಿದಾರರು ಮತ್ತು ಆರೋಪಿತರ ನಡುವೆ ಇದ್ದ ಜಾಗದ ತಕರಾರೇ ಕಾರಣವಾಗಿರುತ್ತದೆ. ಎಂಬುದಾಗಿ ಆರೋಪಿಸಿ ಮಂಜು ದೇವಾಡಿಗ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2011 ಕಲಂ 504,324, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಬೈಂದೂರು: ದಿನಾಂಕ 28/04/2011 ರಂದು 17:30 ಘಂಟೆಗೆ ಕುಂದಾಪುರ ತಾಲೂಕು ಬಿಜೂರು ಗ್ರಾಮದ ಬೈಟು ಮನೆ ಎಂಬಲ್ಲಿ ಪಿರ್ಯಾದಿ ಶ್ರೀಮತಿ ಜಾನಕಿ ದೇವಾಡಿಗ (40) ಗಂಡ ರಾಜು ದೇವಾಡಿಗ ಎಂಬವರ ಮನೆಯ ಅಂಗಳಕ್ಕೆ ಆರೋಪಿ ಮಂಜು ದೇವಾಡಿಗ ಪ್ರಾಯ 42 ವರ್ಷ ತಂದೆ; ದಿ। ಗೋವಿಂದ ದೇವಾಡಿಗ ವಾಸ; ಬೈಟು ಮನೆ ಬಿಜೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ಅಕ್ರಮ ಪ್ರವೇಶ ಮಾಡಿ ನೀನು ನನ್ನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಯಾಕೆ ? ಎಂದು ಹೇಳಿ ಮನೆಯಿಂದ ಒಂದು ಕಬ್ಬಿಣದ ರಾಡ್‌ನ್ನು ತಂದು ಅವರ ತಲೆಗೆ ಮೈ ಕೈಗೆ ಹಲ್ಲೆ ನಡೆಸಿದಾಗ ಬಿಡಿಸಲು ಬಂದ ಅವರ ಸಂಬಂದಿಗಳಾದ ನಾಗಮ್ಮ, ಕಾವೇರಿ ಎಂಬವರಿಗೂ ಕಬ್ಬಿಣದ ರಾಡ್‌ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದು ಈ ಹಲ್ಲೆಯಿಂದ ಶ್ರೀಮತಿ ಜಾನಕಿ ದೇವಾಡಿಗ ರವರ ತಲೆಯ ಎಡ ಭಾಗಕ್ಕೆ ರಕ್ತ ಗಾಯ ಎಡ ಭುಜಕ್ಕೆ ಒಳ ಜಖಂ, ಹಾಗೂ ನಾಗಮ್ಮ ಎಂಬವರ ತಲೆಯ ಎಡ ಭಾಗಕ್ಕೆ ಗಾಯ ಮತ್ತು ಎಡ ಕೈಗೆ ತರಚಿದ ಗಾಯವಾಗಿದ್ದು ಕಾವೇರಿ ಎಂಬವರ ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಈ ಕೃತ್ಯಕ್ಕೆ ಪಿರ್ಯಾದಿದಾರರು ಆರೋಪಿಯ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದೇ ಕಾರಣವಾಗಿರುತ್ತದೆ. ಎಂಬುದಾಗಿ ಆರೋಪಿಸಿ ಶ್ರೀಮತಿ ಜಾನಕಿ ದೇವಾಡಿಗ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2011 ಕಲಂ; 447, 323, 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹಿರಿಯಡ್ಕ: ದಿನಾಂಕ 29/04/2011 ರಂದು 12:00 ಗಂಟೆಗೆ ಉಷಾ (30) ಗಂಡ ಹರೀಶ್, ವಾಸ: ಬಾಂದಪಲ್ಕೆ ಮನೆ, ಪಂಚನಬೆಟ್ಟು ಎಂಬವರು ಬೊಮ್ಮರಬೆಟ್ಟು ಗ್ರಾಮದ ಸಾಣೆಕಲ್ಲು ನಿವಾಸಿ ಆರೋಪಿ ಡಾ. ಪಿ.ಜಿ. ಕೃಷ್ಣ ಮೂರ್ತಿ ಎಂಬಾತನ ಮನೆಗೆ ತೆರಳಿ ಆತನ ಹೆಸರಿನಲ್ಲಿ ಬಂದ ನೋಂದಾಯಿತ ಅಂಚೆಯನ್ನು ಸ್ವೀಕರಿಸುವಂತೆ ಆರೋಪಿಯಲ್ಲಿ ವಿನಂತಿಸಿಕೊಂಡಾಗ, ಆರೋಪಿಯು ನೀನು ಯಾರು, ಯಾಕೆ ಇಲ್ಲಿಗೆ ಬಂದಿದ್ದೀ ಎಂಬುವುದಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು, ನ್ಯಾಯ ಸಮ್ಮತವಾದ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದು, ನೋಂದಾಯಿತ ಅಂಚೆಯನ್ನು ಸ್ವೀಕರಿಸಲು ನಿರಾಕರಿಸಿದ್ದನ್ನು ಕಂಡು, ಅವರು ವಾಪಾಸು ಹೊರಟು ಬರುವಾಗ, ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು, ಕೈಯಿಂದ ದೂಡಿದ ಸಮಯ ಅವರ ಚೂಡಿದಾರದ ಟಾಪಿನ ಬಲಕೈಯ್ಯ ತೋಳು ಹರಿದುಹೋಗಿರುತ್ತದೆ ಎಂಬುದಾಗಿ ಆರೋಪಿಸಿ ಉಷಾರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2011 ಕಲಂ 504, 353, 341, 354, ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment