Sunday, September 13, 2015

Daily Crimes Reported as On 13/09/2015 at 19:30 Hrs


ಹಲ್ಲೆ ಪ್ರಕರಣ
  • ಮಲ್ಪೆ:ಪಿರ್ಯಾದಿದಾರರಾದ ಶ್ರೀಮತಿ ಅಕ್ಷತಾ ಗಂಡ:ಹರೀಶ, ವಾಸ:ಕದಿಕೆ, ಬಡಾನಿಡಿಯೂರು ಗ್ರಾಮರವರು 11 ವರ್ಷದ ಹಿಂದೆ ಹರೀಶ ಎಂಬವರೊಂದಿಗೆ ಪ್ರೀತಿಸಿ ಮದುವೆಯಾಗಿ ಅನ್ಯೊನ್ಯತೆಯಿಂದ ಇದ್ದು, ಅವರಿಗೆ 2ನೇ ಮಗುವಾದ ನಂತರ, ಅಕ್ಷತಾರವರ ಗಂಡ ಹರೀಶನು ಅಕ್ಷತಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಪ್ರತಿ ದಿನ  ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿರುತ್ತಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಅಕ್ಷತಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿರುವುದಾಗಿದೆ. ದಿನಾಂಕ: 10/09/2015 ರಂದು ರಾತ್ರಿ ಸುಮಾರು 10:10 ಗಂಟೆಗೆ ಅಕ್ಷತಾರವರು ಹರೀಶನಿಗೆ ಕರೆ ಮಾಡಿದಾಗ, ಆತನು ಕರೆಯನ್ನು ಸ್ವೀಕರಿಸದೇ ಇದ್ದು, ನಂತರ ಅಕ್ಷತಾರವರು ಜ್ಯೋತಿಗೆ ಕರೆ ಮಾಡಿದಾಗ, ಹರೀಶ ಹಾಗೂ ಜ್ಯೋತಿ ಇಬ್ಬರೂ ಅಕ್ಷತಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಅಕ್ಷತಾರವರ ಗಂಡ ಅಕ್ಷತಾರವರಿಗೆ “ಮನೆಗೆ ಬಂದು ನಿನ್ನನ್ನು ಕೊಂದು ಬಿಸಾಡುತ್ತೇನೆ” ಎಂದು ಬೈದು, ದಿನಾಂಕ: 11/09/15 ರಂದು ಸಂಜೆ 4:00 ಗಂಟೆಗೆ ಅಕ್ಷತಾರವರನ್ನು ಕೊಲೆ ಮಾಡುವ ಉದ್ದೇಶದಿಂದ ಅಕ್ಷತಾರವರ ಮನೆಗೆ ಹರೀಶ ಹಾಗೂ ಜ್ಯೋತಿ ಪ್ರವೇಶ ಮಾಡಿದ್ದು, ಈ ಸಮಯ ಹರೀಶನು ಕುಡಿಯಲು ನೀರು ಕೇಳಿದಾಗ ಅಕ್ಷತಾರವರು ಸ್ಟೀಲ್ ಚೆಂಬಿನಿಂದ ನೀರು ತಂದು ಕೊಟ್ಟಿರುತ್ತಾರೆ. ಆಗ ಅಕ್ಷತಾರವರು ಹರೀಶನಿಗೆ “ಜ್ಯೋತಿಯ ಸಹವಾಸ ಬಿಡಿ, ಮತ್ತೆ ಯಾಕೆ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದು” ಎಂದು ಕೇಳಿದಕ್ಕೆ ಹರೀಶನು ಕೋಪಗೊಂಡು ಅಕ್ಷತಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು “ಇವತ್ತು ನಿನ್ನನ್ನು ಬಿಡುವುದಿಲ್ಲ” ಎಂದು ಹೇಳಿ, ಆತನ ಕೈಯಲ್ಲಿದ್ದ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದು, ಅಲ್ಲದೇ ಅಕ್ಷತಾರವರ ಕುತ್ತಿಗೆಯನ್ನು ಬಲವಾಗಿ ಹಿಡಿದು, ಕೊಲೆ ಮಾಡುವುದಾಗಿ ತಿಳಿಸಿರುತ್ತಾರೆ, ಅಲ್ಲದೇ ಜ್ಯೋತಿಯು ಅಕ್ಷತಾರವರಿಗೆ ಹಿಂದಿನಿಂದ ಬಂದು ಕೈಯಿಂದ  ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಅಕ್ಷತಾರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 133/2015, ಕಲಂ:498ಎ, 448, 323, 324, 307, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: