Friday, September 25, 2015

INFORMATION - NEW UDUPI DISTRICT POLICE WEBSITE

ದಿನಾಂಕ 23/09/2015ರಿಂದ ಉಡುಪಿ ಜಿಲ್ಲಾ ಪೊಲೀಸ್‌ನ ನೂತನ ವೆಬ್ ಸೈಟನ್ನು ಪ್ರಾರಂಭಿಸಲಾಗಿದ್ದು, ಇನ್ನು ಮಂದೆ ಅಪರಾಧ ವರದಿಗಳು ಹಾಗೂ ಜಿಲ್ಲಾ ಪೊಲೀಸ್‌ನ  ಇನ್ನಿತರೇ ವಿಷಯಗಳು ಈ ವೆಬ್ ಸೈಟ್ ನಲ್ಲಿ ಸಿಗುತ್ತದೆ.

Wednesday, September 23, 2015

Daily Crime Reported As On 23/09/2015 At 07:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 21/09/2015 ರಂದು ರಾತ್ರಿ 8:10 ಗಂಟೆಗೆ ಕುಂದಾಪುರ ತಾಲೂಕು, ಹೆಮ್ಮಾಡಿ ಗ್ರಾಮದ ಜ್ಯುವೆಲ್‌‌ ಪಾರ್ಕ ಬಳಿಯ WFK ಫಿಶರಿಸ್‌ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಯಾವುದೋ ನೊಂದಣಿ  ನಂಬ್ರ ತಿಳಿದು ಬಾರದ ವಾಹನವನ್ನು ಅದರ ಚಾಲಕ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಾಸೀಮ್ ಜಬಲಿಯವರು ಕುಂದಾಪುರ ಕಡೆಯಿಂದ  ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-47-K-0457 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದು ವಾಹನ ನಿಲ್ಲಿಸದೇ ಹೋಗಿದ್ದು, ಬೈಕ್‌ ಸವಾರ ವಾಸೀಮ್ ಜಬಲಿ ಹಾಗೂ ಬೈಕಿನ ಸಹ ಸವಾರ ಮುಸಾದಿಕ್ ರವರ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗಿದ್ದು ಗಾಯಾಳು ಮುಸಾದಿಕ್ ರವರು ಬಳಿಕ ಮಂಗಳೂರು ತೇಜೆಸ್ವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2015 ಕಲಂ 279,338 ಐಪಿಸಿ & 134 (ಏ) (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ
  • ಶಂಕರನಾರಾಯಣ: ದಿನಾಂಕ 22/09/2015 ರಂದು 14:15 ಗಂಟೆಗೆ ಪಿರ್ಯಾದಿದಾರರಾದ ಕೆ.ಶ್ರೀನಿವಾಸ ಸೋಮಯಾಜಿ, ತಂದೆ: ಹೆಚ್‌ಕೆ ಕೃಷ್ಣ ಮೂರ್ತಿ, ವಾಸ: ನಂ 255 10 ನೇ ಕ್ರಾಸ್ ಸರಸ್ವತಿ ನಗರ, ವಿಜಯನಗರ ಬೆಂಗಳೂರು-40 ಇವರು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರನಾರಾಯಣ ಎಂಬಲ್ಲಿ  ಇರುವಾಗ ಅವರ ಮೊಬೈಲ್ ಗೆ ಸರಿತಾ ಎಂಬುವವರು ಪೋನ್ ಮಾಡಿ ಎಟಿಎಮ್ ಕಾರ್ಡನ ನಂಬ್ರ ಕೇಳಿದ್ದು ಈ ಸಮಯ ಎಟಿಎಮ್‌ ನಂಬ್ರ ನೀಡಲು ನಿರಾಕರಿಸಿದಾಗ ಎಟಿಎಮ್ ಕಾರ್ಡ ಸಮಯ ಮೀರಿದೆ ಎಂದು ಹೇಳಿದಾಗ ಎಟಿಎಮ್ ನಂಬ್ರ ನೀಡಿದ್ದು ಆ ಬಳಿಕ ಕೆ.ಶ್ರೀನಿವಾಸ ರವರ ಮೊಬೈಲ್‌ ನಂಬ್ರಕ್ಕೆ ಹಣ ಡ್ರಾ ಆದ ಬಗ್ಗೆ ಮೆಸೇಜ್ ಬಂದಿದ್ದು ನಂತರ ನೋಡಲಾಗಿ ಅವರ ಖಾತೆಯಿಂದ ಒಟ್ಟು 36,000/- ರೂಪಾಯಿ ಡ್ರಾ ಮಾಡಿರುತ್ತಾರೆ.  ಎಟಿಎಮ್ ಕಾರ್ಡನ ಸಮಯ ಮೀರಿದೆ ಎಂದು ಹೇಳಿ ಎಟಿಎಮ್ ಕಾರ್ಡ ನಂಬ್ರ ಪಡೆದು ಹಣ ಡ್ರಾ ಮಾಡಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186/2015 ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಇತರೇ ಪ್ರಕರಣಗಳು
  • ಕಾಪು: ದಿನಾಂಕ 21/09/2015 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರಾದ ರಾಜುಂದಿರ್ ಕೌರ್ (27), ಗಂಡ: ಗುರುಜಿತ್ ಸಿಂಗ್, ವಾಸ: ಮಜಾವರ್ ಕಾಲೋನಿ, ಮಜಾವರ್ ಅಪಾರ್ಟ್‌ಮೆಂಟ್ ಕೋಟೆ ರೋಡ್, ಮಲ್ಲಾರು ಗ್ರಾಮ ಇವರ ಮನೆ ಎದುರಿನಲ್ಲಿ ನಿಂತುಕೊಂಡಿರುವಾಗ ಆರೋಪಿ ಸಲೀಂ ಎಂಬುವವನು ರಾಜುಂದಿರ್ ಕೌರ್ ರವರಿಗೆ ಹೊಡೆಯಲು ಬಂದಿದ್ದು ರಾಜುಂದಿರ್ ಕೌರ್ ರವರು ಸಲೀಂನಿಂದ ತಪ್ಪಿಸಿಕೊಂಡು ತಮ್ಮ ಮನೆಯೊಳಗೆ ಹೋದಾಗ ಸಲೀಂ ಎಂಬುವವರು ರಾಜುಂದಿರ್ ಕೌರ್ ರವರನ್ನು ಹಿಂಬಾಲಿಸಿಕೊಂಡು ಮನೆಗೆ ಅಕ್ರಮ ಪ್ರವೇಶ ಮಾಡಿ ರಾಜುಂದಿರ್ ಕೌರ್ ವರೊಂದಿಗೆ ದೂಡಾಡಿಕೊಂಡು, ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಬೆಲ್ಟಿನಿಂದ ಹೊಡೆದು ದೈಹಿಕ ಹಿಂಸೆ ನೀಡಿರುತ್ತಾನೆ. ಪುನ: ಹೊಡೆಯಲು ಬಂದಾಗ ರಾಜುಂದಿರ್ ಕೌರ್ ರವರು ಆರೋಪಿಯನ್ನು ಮನೆಯಿಂದ ಹೊರಗಡೆ ದೂಡಿಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 166/2015 ಕಲಂ 448, 354, 323, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶ್ರೀಮತಿ ನಾಹೀದ್ ಅಂಜುಂ (26), ಗಂಡ: ಸೈಯದ್ ಸಲೀಂ, ವಾಸ: ಬಿ-6, ಮುಜಾವರ್ ಅಪಾರ್ಟ್‌ಮೆಂಟ್ಸ್ ಮುಜಾವರ್ ಕಾಲೋನಿ, ಮಲ್ಲಾರು ಗ್ರಾಮ ಇವರ ಗಂಡ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಂದರ್ಭದಲ್ಲಿ ಜೂನ್‌ 18 ರಿಂದ ಜುಲೈ 17 ರ ನಡುವಿನ ಅವಧಿಯಲ್ಲಿ ನಾಹೀದ್ ಅಂಜುಂ ರವರ ಅಪಾರ್ಟಮೆಂಟ್‌ನಲ್ಲಿ ಬಾಡಿಗೆಗೆ ವಾಸವಿರುವ ಸೋನು @ ಗುರುಜೀತ್‌ ಸಿಂಗ್‌ ಎಂಬಾತನು ಯಾರಿಂದಲೋ ನಾಹೀದ್ ಅಂಜುಂ ರವರ ಮೊಬೈಲ್‌ ನಂಬ್ರವನ್ನು ಪಡೆದುಕೊಂಡು ಪದೇ ಪದೇ ಕರೆಗಳನ್ನು ಮಾಡುತ್ತಿದ್ದು, ಅಲ್ಲದೆ ಹಿಂಬಾಲಿಸಿ ಮೊಬೈಲ್‌ ಸಂಭಾಷಣೆ ಮಾಡಬೇಕಾಗಿ ಒತ್ತಾಯಿಸುತ್ತಿದ್ದು ಇಲ್ಲದೇ ಇದ್ದಲ್ಲಿ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸುತ್ತಿದ್ದು, ಈ ವಿಚಾರ ಆತನ ಹೆಂಡತಿಗೆ ಮತ್ತು ನಾಹೀದ್ ಅಂಜುಂ ರವರ ಗಂಡನಿಗೆ ತಿಳಿಸಿದಾಗ ಅವರ ಗಂಡ ಊರಿಗೆ ಬಂದಿದ್ದು, ಈ ಸಂದರ್ಭದಲ್ಲಿ ಸೋನುವನ್ನು ನಾಹೀದ್ ಅಂಜುಂ ರವರ ಗಂಡ ವಿಚಾರಿಸುತ್ತಾರೆ ಎಂಬ ಭಯದಿಂದ ಆತನ ಹೆಂಡತಿ ರಾಜ್‌ವೀಂದರ್‌ ಕೌರ್‌ ದಿನಾಂಕ 21/09/2015 ರಂದು ಸಾಯಂಕಾಲ 6:00 ಗಂಟೆಗೆ ನಾಹೀದ್ ಅಂಜುಂ ರವರಿಗೆ ಮತ್ತು ಅವರ ಗಂಡನಿಗೆ ಅಪಾರ್ಟಮೆಂಟ್‌ನಲ್ಲಿ ಅವಾಚ್ಯವಾಗಿ ಬೈದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 167/2015 ಕಲಂ: 354(ಡಿ), 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.        

Tuesday, September 22, 2015

Daily Crime Reported As On 22/09/2015 At 19:30 Hrs

  • ಉಡುಪಿ ಜಿಲ್ಲೆಯಲ್ಲಿ ದಿನಾಂಕ 22/09/2015 ರಂದು ಸಂಜೆ 17:00 ಗಂಟೆಯಿಂದ ರಾತ್ರಿ 19:30 ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.

Daily Crime Reported As On 22/09/2015 At 17:00 Hrs

ಅಪಘಾತ ಪ್ರಕರಣಗಳು
  • ಶಿರ್ವಾ:  ದಿನಾಂಕ 20/09/15 ರಂದು ರಾತ್ರಿ 09:50 ಗಂಟೆಗೆ ಶಂಕರಪುರ ಬಬ್ಬು ಸ್ವಾಮಿ ದೇವಸ್ಥಾನದ ಬಳಿ ಆರೋಪಿ ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ಡಬ್ಲೂ 7102 ನೇದನ್ನು ಶಂಕರಪುರ ಕಡೆಯಿಂದ  ಸುಭಾಸ್ ನಗರ ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು  ಪಿರ್ಯಾದಿದಾರರಾದ ಕಾರ್ತಿಕ್ ಶೆಟ್ಟಿ (21), ತಂದೆ: ಶೇಖರ ಶೆಟ್ಟಿ, ವಾಸ: ಮಂಡೇಡಿ ಪಡು ಮೇಲ್ ಮನೆ ಇನ್ನಂಜೆ ಗ್ರಾಮ ಉಡುಪಿ ತಾಲೂಕು ಇವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ20 ಯು 9006ನೇ ಮೋಟಾರು ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಕಾರ್ತಿಕ್ ಶೆಟ್ಟಿ ಯವರ ಎಡ ಕಾಲಿನ  ಮೊಣಗಂಟಿನ ಕೆಳಗೆ ಹಾಗೂ ಪಾದದ ಹೆಬ್ಬೆರೆಳಿನ ಬಳಿ ತರಚಿದ ಗಾಯ ಹಾಗೂ ಆರೋಪಿ ಮೋಟಾರು ಸೈಕಲ್ ಸವಾರನಿಗೆ ತಲೆಗೆ ಹಾಗೂ ಕಾಲಿಗೆ ತೀವ್ರ ತರದ ಗಾಯವಾಗಿರುತ್ತದೆ. ಅಫಘಾತದ ಪರಿಣಾಮ ಎರಡು ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2015 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ: 21/09/2015 ರಂದು 21:30 ಗಂಟೆಗೆ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಕಲೈಕಾರ್ ಮಠದ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ಸಮಯ ಡಿ ಜೆ ಸೌಂಡ್ ಬಾಕ್ಸ್ ಗೆ ವಿದ್ಯುತ್ ಸಂಪರ್ಕ ಮಾಡಲು ಜನರೇಟರ್ ಲೋಡ್ ಮಾಡಿ ಸಾಗಿಸುತ್ತಿದ್ದ ಕೆಎ 20 ಸಿ 8659 ನೇ ನಂಬ್ರದ ಸೂಪರ್ ಏಸ್ ಟಾಟಾ ಟೆಂಪೋ ಚಾಲಕನು ತನ್ನ ಟೆಂಪೋವನ್ನು ಗಂಗೊಳ್ಳಿ ಅಂಬಿಕಾ ದೇವಸ್ಥಾನದ ಎದುರು ರಸ್ತೆಯಲ್ಲಿ,  ಬಾವಿಕಟ್ಟೆಯಿಂದ ಬಂದರು ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿ ಟೆಂಪೋದ ಚಕ್ರವು ಮೆರವಣಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೌರೀಶ್ ಖಾರ್ವಿ ಎಂಬುವವರ ಬಲಕಾಲಿನ ಪಾದದ ಮೇಲೆ ಹರಿದುದ್ದರಿಂದ ಬಲಕಾಲು ಪಾದ ಹಾಗೂ ಬಲಕಾಲಿನ ಪಾದದ ಗಂಟಿಗೆ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 117/2015 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 22/09/2015 ರಂದು ಮಧ್ಯಾಹ್ನ 12:15 ಗಂಟೆಗೆ  ಕಾರ್ಕಳ ತಾಲೂಕು  ನಿಟ್ಟೆ ಗ್ರಾಮದ ಸಾಗರ ಅರ್ಕೇಡ್ ಕಟ್ಟಡದ ಎದುರಿನ ರಾಜ್ಯ ಹೆದ್ದಾರಿಯಲ್ಲಿ   ಪಿರ್ಯಾದಿದಾರರಾದ ಕೆ ದೀಪಕ್ ಕಾಮತ್  (37), ತಂದೆ: ದಿ ಪದ್ಮನಾಭ ಕಾಮತ್, ಕಾಮತ್ ಬಿಲ್ಡಿಂಗ್ ಕಾಂಜರಕಟ್ಟೆ, ಸಾಂತೂರು, ಇನ್ನಾ ಗ್ರಾಮ, ಉಡುಪಿ ಜಿಲ್ಲೆ ಇವರು ಮೋಟಾರ್ ಸೈಕಲಿನಲ್ಲಿ ಸವಾರಿ ಮಾಡುತ್ತಾ ಹೋಗುತ್ತಿರುವಾಗ KA 20 B 8095 ನೇಯ 407 ಗೂಡ್ಸ್ ವಾಹನವನ್ನು ಅದರ ಚಾಲಕ ಕಾರ್ಕಳ ಕಡೆಯಿಂದ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಎದುರುಗಡೆಯಿಂದ ಬೆಳ್ಮಣ್  ಕಡೆಯಿಂದ ಕಾರ್ಕಳ ಕಡೆಗೆ  ಬರುತ್ತಿರುವ ಇನ್ನೊವಾ ಕಾರು ನಂಬ್ರ  KA 18 M 7354 ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರನ್ನು ಚಲಾಯಿಸುತ್ತಿದ್ದ ಕೆ ದೀಪಕ್ ಕಾಮತ್ ರವರ ಪರಿಚಯಸ್ಥರಾದ ಜಯರಾಜ್ ಪೈ ಯವರಿಗೆ ಬಲಕೈಗೆ ತರಚಿದ ಗಾಯ  ಮತ್ತು ಕಿಬ್ಬೊಟ್ಟೆಗೆ ಗುದ್ದಿದ ನೋವು ಉಂಟಾಗಿರುತ್ತದೆ.ಆರೋಪಿ 407 ಗೂಡ್ಸ್ ವಾಹನ ನಂಬ್ರ KA 20 B 8095 ನೇಯದರ ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು ನಿಟ್ಟೆ  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಗಂಡಸು ಕಾಣೆ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀಮತಿ ಮಮತಾ (35), ಗಂಡ: ದಯಾನಂದ ನಾಯ್ಕ, ವಾಸ: ಕೇರಾಫ್ ಗಣೇಶ, ನಿತ್ಯಾನಂದ ನಿಲಯ, ಹಿರಿಯಡ್ಕ ಪೋಸ್ಟ್, ಬೊಮ್ಮಾರಬೆಟ್ಟು ಗ್ರಾಮ ಇವರ ಗಂಡ ದಯಾನಂದ ನಾಯ್ಕ (39)ಎಂಬುವವರು ದಿನಾಂಕ 19/09/15 ರಂದು ಬೆಳಿಗ್ಗೆ 07:00 ಗಂಟೆಗೆ ಬೊಮ್ಮಾರಬೆಟ್ಟು  ಗ್ರಾಮದ ಹಿರಿಯಡ್ಕದ ತನ್ನ ಮನೆಯಿಂದ ತನ್ನ ಟೆಂಪೋವನ್ನು ಚಲಾಯಿಸಿಕೊಂಡು ಹೋಗಿ ಹಿರಿಯಡ್ಕ ಗಣೇಶ ಕಲಾಮಂದಿರದ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋದವರು ಇದುವರೆಗೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2015 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Daily Crime Reported As On 22/09/2015 At 07:00 Hrs

ಕಳವು ಪ್ರಕರಣ
  • ಮಲ್ಪೆ: ಪಿರ್ಯಾದಿ ಸುಧಾಕರ ತಿಂಗಳಾಯ ಇವರು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ:12/09/2015 ರಂದು ಬೆಳಿಗ್ಗೆ 4.30 ಗಂಟೆಗೆ ತಮ್ಮ ಬಾಬ್ತು ಕೆಎ-20ಇಬಿ-9156 ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನ್ನು  ಮಲ್ಪೆ ಬಂದರಿನ ಒಳಗೆ ಪಡುದಕ್ಕೆಯ ಪರ್ಸಿನ್ ಬಲೆ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟು ಸಮುದ್ರದಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ತೆರಳಿದ್ದು ಕೆಲಸ ಮುಗಿಸಿ ವಾಪಸ್ಸು ಅದೇ ದಿನ ಸಾಯಂಕಾಲ 7.00 ಗಂಟೆಯೊಷ್ಟೊತ್ತಿಗೆ ಬಂದು ನೋಡಿದಾಗ ಸದ್ರಿ ಬೈಕ್ ಇಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ  ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಎಲ್ಲಾ ಕಡೆ ವಿಚಾರಿಸಿದಲ್ಲಿ ಇದುವರೆಗೂ ಪತ್ತೆಯಾಗಿರುವುದಿಲ್ಲ ಕಳುವಾದ ಬೈಕಿನ ಅಂದಾಜು ಮೌಲ್ಯ ಸುಮಾರು 22.000/- ರೂ ಆಗಬಹುದು. ಈ ಬಗ್ಗೆ ಮಲ್ಪೆ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 137/2015  ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ: ದಿನಾಂಕ: 21/09/2015 ರಂದು  17.30 ಗಂಟೆ ಮತ್ತು  18.15 ಗಂಟೆಯ  ಮದ್ಯಾವಧಿಯಲ್ಲಿ 41 ನೇ  ಶೀರೂರು ಗ್ರಾಮದ ಶ್ರೀ ಮಹಾಲಸಾ ನಾರಾಯಣೀ ದೇವಿ ಕ್ಷೇತ್ರಕ್ಕೆ ಭಕ್ತಾಧಿಗಳಂತೆ ಬಂದು ದೇವಸ್ಥಾನದ ಗರ್ಭಗುಡಿಯ ಎದುರಿನ ಭಜನಾ ಹಾಲ್‌ನಲ್ಲಿ   ಕುಳಿತಿದ್ದ ಸುಮಾರು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಆರ್ಚಕರು ಹೂ ಕೊಯ್ಯಲು ಹೋದ ಸಮಯದಲ್ಲಿ ಗರ್ಭಗುಡಿಯ ಈಶ್ಯಾನ ದಿಕ್ಕಿನ ಬಾಗಿಲಿನ ಬೀಗವನ್ನು ಯಾವುದೋ ಸಲಕರಣೆಯಿಂದ ಮುರಿದು ಗರ್ಭ ಗುಡಿಗೆ ಪ್ರವೇಶಿಸಿ ದೇವರ ಚಿನ್ನದ ಕಿರೀಟ-1,  ಚಿನ್ನದ ಕರಿಮಣಿ ಸರ -1 ಹಾಗೂ 3 ಚಿನ್ನದ ಸರಗಳನ್ನು ಕಳವು ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದು, ಕಳವಾದ ಬಂಗಾರದ ಒಡವೆಗಳ ಒಟ್ಟು ತೂಕ ಸುಮಾರು 250  ಗ್ರಾಂ ಆಗಿದ್ದು, ಮೌಲ್ಯ ಸುಮಾರು 4 ಲಕ್ಷದ 75 ಸಾವಿರ ರೂಪಾಯಿ ಆಗಬಹುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 94/2015 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಹೆಬ್ರಿ: ಪಿರ್ಯಾದಿ ಸುದೇಶ್ ನಾಯ್ಕ್ ಇವರು ದಿನಾಂಕ 20-09-2015 ರಂದು ತನ್ನ ಸಂಬಂಧಿಕರೊಂದಿಗೆ ಕೆ.ಎ.20.7445 ನೇ ಟಾಟಾ 407 ಪ್ಯಾಸೆಂಜರ್‌ ವಾಹನದಲ್ಲಿ ಆಗುಂಬೆ ಮುಖೇನ ಹೆಬ್ರಿಯ ಕಡೆಗೆ ಬರುತ್ತಿರುವಾಗ್ಯೆ ಸಮಯ ಸುಮಾರು ಸಂಜೆ 5:00 ಗಂಟೆಗೆ ನಾಡ್ಪಾಲು ಗ್ರಾಮದ, ಸೋಮೇಶ್ವರದ 4 ನೇ ತಿರುವಿನಲ್ಲಿ ಸದ್ರಿ ವಾಹನವನ್ನು ಅದರ ಚಾಲಕನಾದ ರಮೇಶ ನಾಯ್ಕ್‌ ರವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬದಿಯಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿ ಪ್ರಯಾಣಸುತ್ತಿದ್ದ ಗೀತಾ, ಸುಮತಿ ಮತ್ತು ರಾಧಾಕೃಷ್ಣ ನಾಯ್ಕ್ ರವರು ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಲ್ಲದೇ ವಾಹನದಲ್ಲಿದ್ದ ಇತರರಿಗೂ ಗಾಯವಾಗಿದ್ದು, ಅವರುಗಳು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 83/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 20/09/2015 ರಂದು 17:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾಬೆಟ್ಟು ಶ್ರೀ ವೇಣು ಗೋಪಾಲ ದೇವಸ್ಥಾನದ ಬಳಿ ಹಾದು ಹೋಗುವ ಪುಲ್ಕೇರಿ-ಜೋಡುರಸ್ತೆ ರಾಜ್ಯ ಹೆದ್ದಾರಿಯಲ್ಲಿ ಮಾರುತಿ ಓಮ್ನಿ ಕಾರು ನಂಬ್ರ KA20MA2405 ನೇಯದರ ಚಾಲಕ ತನ್ನ ಬಾಬ್ತು ಕಾರನ್ನು ನಕ್ರೆ ಜಂಕ್ಷನ್ ಕಡೆಯಿಂದ, ಆನೆಕೆರೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಬಾಲಕ ಆದಿತ್ಯ ಎಂಬಾತನಿಗೆ ಢಿಕ್ಕಿ ಹೊಡೆದ ಪರಿಣಾಮ ಆದಿತ್ಯನ ಸೊಂಟಕ್ಕೆ, ಎಡಕೈಗೆ ಹಾಗೂ ತಲೆಯ ಹಿಂಭಾಗಕ್ಕೆ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 130/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.