Tuesday, September 22, 2015

Daily Crime Reported As On 22/09/2015 At 07:00 Hrs

ಕಳವು ಪ್ರಕರಣ
  • ಮಲ್ಪೆ: ಪಿರ್ಯಾದಿ ಸುಧಾಕರ ತಿಂಗಳಾಯ ಇವರು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ:12/09/2015 ರಂದು ಬೆಳಿಗ್ಗೆ 4.30 ಗಂಟೆಗೆ ತಮ್ಮ ಬಾಬ್ತು ಕೆಎ-20ಇಬಿ-9156 ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನ್ನು  ಮಲ್ಪೆ ಬಂದರಿನ ಒಳಗೆ ಪಡುದಕ್ಕೆಯ ಪರ್ಸಿನ್ ಬಲೆ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟು ಸಮುದ್ರದಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ತೆರಳಿದ್ದು ಕೆಲಸ ಮುಗಿಸಿ ವಾಪಸ್ಸು ಅದೇ ದಿನ ಸಾಯಂಕಾಲ 7.00 ಗಂಟೆಯೊಷ್ಟೊತ್ತಿಗೆ ಬಂದು ನೋಡಿದಾಗ ಸದ್ರಿ ಬೈಕ್ ಇಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ  ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಎಲ್ಲಾ ಕಡೆ ವಿಚಾರಿಸಿದಲ್ಲಿ ಇದುವರೆಗೂ ಪತ್ತೆಯಾಗಿರುವುದಿಲ್ಲ ಕಳುವಾದ ಬೈಕಿನ ಅಂದಾಜು ಮೌಲ್ಯ ಸುಮಾರು 22.000/- ರೂ ಆಗಬಹುದು. ಈ ಬಗ್ಗೆ ಮಲ್ಪೆ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 137/2015  ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ: ದಿನಾಂಕ: 21/09/2015 ರಂದು  17.30 ಗಂಟೆ ಮತ್ತು  18.15 ಗಂಟೆಯ  ಮದ್ಯಾವಧಿಯಲ್ಲಿ 41 ನೇ  ಶೀರೂರು ಗ್ರಾಮದ ಶ್ರೀ ಮಹಾಲಸಾ ನಾರಾಯಣೀ ದೇವಿ ಕ್ಷೇತ್ರಕ್ಕೆ ಭಕ್ತಾಧಿಗಳಂತೆ ಬಂದು ದೇವಸ್ಥಾನದ ಗರ್ಭಗುಡಿಯ ಎದುರಿನ ಭಜನಾ ಹಾಲ್‌ನಲ್ಲಿ   ಕುಳಿತಿದ್ದ ಸುಮಾರು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಆರ್ಚಕರು ಹೂ ಕೊಯ್ಯಲು ಹೋದ ಸಮಯದಲ್ಲಿ ಗರ್ಭಗುಡಿಯ ಈಶ್ಯಾನ ದಿಕ್ಕಿನ ಬಾಗಿಲಿನ ಬೀಗವನ್ನು ಯಾವುದೋ ಸಲಕರಣೆಯಿಂದ ಮುರಿದು ಗರ್ಭ ಗುಡಿಗೆ ಪ್ರವೇಶಿಸಿ ದೇವರ ಚಿನ್ನದ ಕಿರೀಟ-1,  ಚಿನ್ನದ ಕರಿಮಣಿ ಸರ -1 ಹಾಗೂ 3 ಚಿನ್ನದ ಸರಗಳನ್ನು ಕಳವು ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದು, ಕಳವಾದ ಬಂಗಾರದ ಒಡವೆಗಳ ಒಟ್ಟು ತೂಕ ಸುಮಾರು 250  ಗ್ರಾಂ ಆಗಿದ್ದು, ಮೌಲ್ಯ ಸುಮಾರು 4 ಲಕ್ಷದ 75 ಸಾವಿರ ರೂಪಾಯಿ ಆಗಬಹುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 94/2015 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಹೆಬ್ರಿ: ಪಿರ್ಯಾದಿ ಸುದೇಶ್ ನಾಯ್ಕ್ ಇವರು ದಿನಾಂಕ 20-09-2015 ರಂದು ತನ್ನ ಸಂಬಂಧಿಕರೊಂದಿಗೆ ಕೆ.ಎ.20.7445 ನೇ ಟಾಟಾ 407 ಪ್ಯಾಸೆಂಜರ್‌ ವಾಹನದಲ್ಲಿ ಆಗುಂಬೆ ಮುಖೇನ ಹೆಬ್ರಿಯ ಕಡೆಗೆ ಬರುತ್ತಿರುವಾಗ್ಯೆ ಸಮಯ ಸುಮಾರು ಸಂಜೆ 5:00 ಗಂಟೆಗೆ ನಾಡ್ಪಾಲು ಗ್ರಾಮದ, ಸೋಮೇಶ್ವರದ 4 ನೇ ತಿರುವಿನಲ್ಲಿ ಸದ್ರಿ ವಾಹನವನ್ನು ಅದರ ಚಾಲಕನಾದ ರಮೇಶ ನಾಯ್ಕ್‌ ರವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬದಿಯಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿ ಪ್ರಯಾಣಸುತ್ತಿದ್ದ ಗೀತಾ, ಸುಮತಿ ಮತ್ತು ರಾಧಾಕೃಷ್ಣ ನಾಯ್ಕ್ ರವರು ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಲ್ಲದೇ ವಾಹನದಲ್ಲಿದ್ದ ಇತರರಿಗೂ ಗಾಯವಾಗಿದ್ದು, ಅವರುಗಳು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 83/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 20/09/2015 ರಂದು 17:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾಬೆಟ್ಟು ಶ್ರೀ ವೇಣು ಗೋಪಾಲ ದೇವಸ್ಥಾನದ ಬಳಿ ಹಾದು ಹೋಗುವ ಪುಲ್ಕೇರಿ-ಜೋಡುರಸ್ತೆ ರಾಜ್ಯ ಹೆದ್ದಾರಿಯಲ್ಲಿ ಮಾರುತಿ ಓಮ್ನಿ ಕಾರು ನಂಬ್ರ KA20MA2405 ನೇಯದರ ಚಾಲಕ ತನ್ನ ಬಾಬ್ತು ಕಾರನ್ನು ನಕ್ರೆ ಜಂಕ್ಷನ್ ಕಡೆಯಿಂದ, ಆನೆಕೆರೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಬಾಲಕ ಆದಿತ್ಯ ಎಂಬಾತನಿಗೆ ಢಿಕ್ಕಿ ಹೊಡೆದ ಪರಿಣಾಮ ಆದಿತ್ಯನ ಸೊಂಟಕ್ಕೆ, ಎಡಕೈಗೆ ಹಾಗೂ ತಲೆಯ ಹಿಂಭಾಗಕ್ಕೆ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 130/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3 comments:

Unknown said...

SP Sir gud evening im Nagabhushan nimmanu nodbeku nim jothe mathadbeku sir

Unknown said...

Sir my number 9591308153

Unknown said...

दिल्ली पुलिस ने किया लुटेरी हसीना को गिरफ्तार
Read More Todaynews18.com https://goo.gl/JEq1IL