ಅಪಘಾತ ಪ್ರಕರಣ
- ಕುಂದಾಪುರ: ದಿನಾಂಕ 21/09/2015 ರಂದು ರಾತ್ರಿ 8:10 ಗಂಟೆಗೆ ಕುಂದಾಪುರ ತಾಲೂಕು, ಹೆಮ್ಮಾಡಿ ಗ್ರಾಮದ ಜ್ಯುವೆಲ್ ಪಾರ್ಕ ಬಳಿಯ WFK ಫಿಶರಿಸ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಯಾವುದೋ ನೊಂದಣಿ ನಂಬ್ರ ತಿಳಿದು ಬಾರದ ವಾಹನವನ್ನು ಅದರ ಚಾಲಕ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಾಸೀಮ್ ಜಬಲಿಯವರು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-47-K-0457 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋಗಿದ್ದು, ಬೈಕ್ ಸವಾರ ವಾಸೀಮ್ ಜಬಲಿ ಹಾಗೂ ಬೈಕಿನ ಸಹ ಸವಾರ ಮುಸಾದಿಕ್ ರವರ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗಿದ್ದು ಗಾಯಾಳು ಮುಸಾದಿಕ್ ರವರು ಬಳಿಕ ಮಂಗಳೂರು ತೇಜೆಸ್ವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2015 ಕಲಂ 279,338 ಐಪಿಸಿ & 134 (ಏ) (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಶಂಕರನಾರಾಯಣ: ದಿನಾಂಕ 22/09/2015 ರಂದು 14:15 ಗಂಟೆಗೆ ಪಿರ್ಯಾದಿದಾರರಾದ ಕೆ.ಶ್ರೀನಿವಾಸ ಸೋಮಯಾಜಿ, ತಂದೆ: ಹೆಚ್‌ಕೆ ಕೃಷ್ಣ ಮೂರ್ತಿ, ವಾಸ: ನಂ 255 10 ನೇ ಕ್ರಾಸ್ ಸರಸ್ವತಿ ನಗರ, ವಿಜಯನಗರ ಬೆಂಗಳೂರು-40 ಇವರು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರನಾರಾಯಣ ಎಂಬಲ್ಲಿ ಇರುವಾಗ ಅವರ ಮೊಬೈಲ್ ಗೆ ಸರಿತಾ ಎಂಬುವವರು ಪೋನ್ ಮಾಡಿ ಎಟಿಎಮ್ ಕಾರ್ಡನ ನಂಬ್ರ ಕೇಳಿದ್ದು ಈ ಸಮಯ ಎಟಿಎಮ್ ನಂಬ್ರ ನೀಡಲು ನಿರಾಕರಿಸಿದಾಗ ಎಟಿಎಮ್ ಕಾರ್ಡ ಸಮಯ ಮೀರಿದೆ ಎಂದು ಹೇಳಿದಾಗ ಎಟಿಎಮ್ ನಂಬ್ರ ನೀಡಿದ್ದು ಆ ಬಳಿಕ ಕೆ.ಶ್ರೀನಿವಾಸ ರವರ ಮೊಬೈಲ್ ನಂಬ್ರಕ್ಕೆ ಹಣ ಡ್ರಾ ಆದ ಬಗ್ಗೆ ಮೆಸೇಜ್ ಬಂದಿದ್ದು ನಂತರ ನೋಡಲಾಗಿ ಅವರ ಖಾತೆಯಿಂದ ಒಟ್ಟು 36,000/- ರೂಪಾಯಿ ಡ್ರಾ ಮಾಡಿರುತ್ತಾರೆ. ಎಟಿಎಮ್ ಕಾರ್ಡನ ಸಮಯ ಮೀರಿದೆ ಎಂದು ಹೇಳಿ ಎಟಿಎಮ್ ಕಾರ್ಡ ನಂಬ್ರ ಪಡೆದು ಹಣ ಡ್ರಾ ಮಾಡಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186/2015 ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕಾಪು: ದಿನಾಂಕ 21/09/2015 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರಾದ ರಾಜುಂದಿರ್ ಕೌರ್ (27), ಗಂಡ: ಗುರುಜಿತ್ ಸಿಂಗ್, ವಾಸ: ಮಜಾವರ್ ಕಾಲೋನಿ, ಮಜಾವರ್ ಅಪಾರ್ಟ್‌ಮೆಂಟ್ ಕೋಟೆ ರೋಡ್, ಮಲ್ಲಾರು ಗ್ರಾಮ ಇವರ ಮನೆ ಎದುರಿನಲ್ಲಿ ನಿಂತುಕೊಂಡಿರುವಾಗ ಆರೋಪಿ ಸಲೀಂ ಎಂಬುವವನು ರಾಜುಂದಿರ್ ಕೌರ್ ರವರಿಗೆ ಹೊಡೆಯಲು ಬಂದಿದ್ದು ರಾಜುಂದಿರ್ ಕೌರ್ ರವರು ಸಲೀಂನಿಂದ ತಪ್ಪಿಸಿಕೊಂಡು ತಮ್ಮ ಮನೆಯೊಳಗೆ ಹೋದಾಗ ಸಲೀಂ ಎಂಬುವವರು ರಾಜುಂದಿರ್ ಕೌರ್ ರವರನ್ನು ಹಿಂಬಾಲಿಸಿಕೊಂಡು ಮನೆಗೆ ಅಕ್ರಮ ಪ್ರವೇಶ ಮಾಡಿ ರಾಜುಂದಿರ್ ಕೌರ್ ವರೊಂದಿಗೆ ದೂಡಾಡಿಕೊಂಡು, ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಬೆಲ್ಟಿನಿಂದ ಹೊಡೆದು ದೈಹಿಕ ಹಿಂಸೆ ನೀಡಿರುತ್ತಾನೆ. ಪುನ: ಹೊಡೆಯಲು ಬಂದಾಗ ರಾಜುಂದಿರ್ ಕೌರ್ ರವರು ಆರೋಪಿಯನ್ನು ಮನೆಯಿಂದ ಹೊರಗಡೆ ದೂಡಿಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 166/2015 ಕಲಂ 448, 354, 323, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕಾಪು: ಪಿರ್ಯಾದಿದಾರರಾದ ಶ್ರೀಮತಿ ನಾಹೀದ್ ಅಂಜುಂ (26), ಗಂಡ: ಸೈಯದ್ ಸಲೀಂ, ವಾಸ: ಬಿ-6, ಮುಜಾವರ್ ಅಪಾರ್ಟ್‌ಮೆಂಟ್ಸ್ ಮುಜಾವರ್ ಕಾಲೋನಿ, ಮಲ್ಲಾರು ಗ್ರಾಮ ಇವರ ಗಂಡ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಂದರ್ಭದಲ್ಲಿ ಜೂನ್ 18 ರಿಂದ ಜುಲೈ 17 ರ ನಡುವಿನ ಅವಧಿಯಲ್ಲಿ ನಾಹೀದ್ ಅಂಜುಂ ರವರ ಅಪಾರ್ಟಮೆಂಟ್‌ನಲ್ಲಿ ಬಾಡಿಗೆಗೆ ವಾಸವಿರುವ ಸೋನು @ ಗುರುಜೀತ್ ಸಿಂಗ್ ಎಂಬಾತನು ಯಾರಿಂದಲೋ ನಾಹೀದ್ ಅಂಜುಂ ರವರ ಮೊಬೈಲ್ ನಂಬ್ರವನ್ನು ಪಡೆದುಕೊಂಡು ಪದೇ ಪದೇ ಕರೆಗಳನ್ನು ಮಾಡುತ್ತಿದ್ದು, ಅಲ್ಲದೆ ಹಿಂಬಾಲಿಸಿ ಮೊಬೈಲ್ ಸಂಭಾಷಣೆ ಮಾಡಬೇಕಾಗಿ ಒತ್ತಾಯಿಸುತ್ತಿದ್ದು ಇಲ್ಲದೇ ಇದ್ದಲ್ಲಿ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸುತ್ತಿದ್ದು, ಈ ವಿಚಾರ ಆತನ ಹೆಂಡತಿಗೆ ಮತ್ತು ನಾಹೀದ್ ಅಂಜುಂ ರವರ ಗಂಡನಿಗೆ ತಿಳಿಸಿದಾಗ ಅವರ ಗಂಡ ಊರಿಗೆ ಬಂದಿದ್ದು, ಈ ಸಂದರ್ಭದಲ್ಲಿ ಸೋನುವನ್ನು ನಾಹೀದ್ ಅಂಜುಂ ರವರ ಗಂಡ ವಿಚಾರಿಸುತ್ತಾರೆ ಎಂಬ ಭಯದಿಂದ ಆತನ ಹೆಂಡತಿ ರಾಜ್‌ವೀಂದರ್ ಕೌರ್ ದಿನಾಂಕ 21/09/2015 ರಂದು ಸಾಯಂಕಾಲ 6:00 ಗಂಟೆಗೆ ನಾಹೀದ್ ಅಂಜುಂ ರವರಿಗೆ ಮತ್ತು ಅವರ ಗಂಡನಿಗೆ ಅಪಾರ್ಟಮೆಂಟ್‌ನಲ್ಲಿ ಅವಾಚ್ಯವಾಗಿ ಬೈದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 167/2015 ಕಲಂ: 354(ಡಿ), 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment