Sunday, September 13, 2015

Daily Crimes Reported as On 13/09/2015 at 17:00 Hrs


ಇಸ್ಪಿಟ್‌ ಜುಗಾರಿ ಪ್ರಕರಣ
  • ಹಿರಿಯಡ್ಕ:ಈ ದಿನ ದಿನಾಂಕ 13/09/15 ರಂದು ಪೆರ್ಡೂರು ಗ್ರಾಮದ ಅಲಂಗಾರುವಿನ ಸರಕಾರಿ ಹಾಡಿಯಲ್ಲಿ ಇಸ್ಪೀಟ್‌ ಎಲೆಯ ಜೂಜಾಟವಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ನಾಗೇಶ್‌ ಮೇಸ್ತ, ಪಿಎಸ್‌ಐ ರವರು ಸಿಬ್ಬಂದಿಗಳೊಂದಿಗೆ ಪಂಚಾಯತುದಾರರೊಂದಿಗೆ ಸದ್ರಿ ಸ್ಥಳಕ್ಕೆ 11:10 ಗಂಟೆಗೆ ಹೋಗಿ ಪರಿಶೀಲಿಸಿದಲ್ಲಿ ಆರೋಪಿತರುಗಳಾದ 1]ಪ್ರದೀಪ ನಾಯಕ್‌ 2]ಸೂರ್ಯ 3]ರಾಜು 4]ಪ್ರಶಾಂತ 5]ಪಾಂಡುರಂಗ ಇವರುಗಳು ಉಲಾಯಿ- ಪಿದಾಯಿ ಎಂಬ ಇಸ್ಪೀಟು ಜೂಜಾಟದಲ್ಲಿ ಹಣವನ್ನು ಪಣವಾಗಿ ಒಡ್ಡುತ್ತಾ ಜೂಜಾಡುತ್ತಿದ್ದು, ಅವರನ್ನು ದಸ್ತಗಿರಿ ಮಾಡಿ, ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ ನಗದು ಹಣ ರೂಪಾಯಿ 630/-, ಇಸ್ಪೀಟ್‌ ಎಲೆ-52 ಹಾಗೂ ನೆಲಕ್ಕೆ ಹಾಸಿದ ಬಿಳಿಪ್ಲಾಸ್ಟಿಕ್‌ ಚೀಲ -1 ಇವುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 90/15  ಕಲಂ 87 ಕರ್ನಾಟಕ ಪೊಲೀಸ್‌ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: