Sunday, September 13, 2015

Daily Crime Reported As On 13/09/2015 At 07:00 Hrs

ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಉಮೇಶ್ (28), ತಂದೆ:ಗೂಳಪ್ಪ ಕುರಿ, ವಾಸ:ಸುವಿಧ ಹೋಮ್ಸ ವಿಭಿಧ ಪ್ರಿಯ ನಗರ ಮಣಿಪಾಲ ಇವರು ದಿನಾಂಕ 12/09/2015 ರಂದು ಕೆಎ 20 ಝಡ್ 9577 ನೇ ಕಾರಿನಲ್ಲಿ ತನ್ನ ಮಾಲಕರನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹನುಮಾನ್ ಶೋರೂಮ್‌‌ಗೆ ಬಂದು ಅಲ್ಲಿಂದ ಸಂಜೆ 04:32 ಗಂಟೆಗೆ ಶೋರೂಮ್‌ನ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಗೆ ಬರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಕೆಎ 20 ಬಿ 4023 ನೇ ಬಸ್ಸು ಚಾಲಕ ಪ್ರಭಾಕರ ಎಂಬುವವರು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಮೇಶ್ ರವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಲಬದಿಯ ಚಕ್ರ ಒಡೆದು ಹೋಗಿದ್ದು ಹೆಡ್‌ಲೈಟ್, ಬಂಪರ್ ಮತ್ತು ಬಲಬದಿಯ ಡಿಸ್ಕ್‌ ಜಖಂಗೊಂಡಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2015 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: