Saturday, September 12, 2015

Daily Crime Reported As On 12/09/2015 At 19:30 Hrs

ಅಪಘಾತ ಪ್ರಕರಣ
  • ಕೊಲ್ಲೂರು: ದಿನಾಂಕ 11/09/2015 ರಂದು ಪಿರ್ಯಾದಿದಾರರಾದ ಜಯಕುಮಾರ್ (40), ತಂದೆ: ದಿ.ಮಂಜು, ವಾಸ: ಗದ್ದೆಮನೆ, ಕೊಲ್ಲೂರು ಗ್ರಾಮ ಕುಂದಾಪುರ ತಾಲೂಕು ಇವರು ರಾತ್ರಿ 9:15 ಗಂಟೆಗೆ ಸಾಗರ-ಕೊಲ್ಲೂರು ರಾಜ್ಯ ಹೆದ್ದಾರಿಯ ಕೊಲ್ಲೂರು ಗ್ರಾಮದ ಅಶ್ವತಿ ವಸತಿಗೃಹದ ಬಳಿ ಕೊಲ್ಲೂರು ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೊಲ್ಲೂರು ಕಡೆಯಿಂದ ಸಾಗರ ಕಡೆಗೆ KA 20 Y 0590 ನೇ ನಂಬ್ರದ ಟಿವಿಎಸ್ ಸ್ಟಾರ್ ಸಿಟಿ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ನಿಂತಿರುವ ನಾಯಿಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ನಡೆದುಕೊಂಡು ಹೋಗುತ್ತಿದ್ದ ಜಯಕುಮಾರ್ ರವರಿಗೆ ಎದುರುನಿಂದ ಡಿಕ್ಕಿ ಹೊಡೆದ ಪರಿಣಾಮ ಜಯಕುಮಾರ್ ರವರು ರಸ್ತೆಗೆ ಬಿದ್ದು ತಲೆಗೆ, ಹಣೆಗೆ, ತುಟಿಗೆ ತರಚಿದ ರಕ್ತಗಾಯವಾಗಿದ್ದು ಹಾಗೂ ಮೂಗು ಬಲಕೈ ಬಲಕಾಲಿಗೆ ಗುದ್ದಿದ ಜಖಂ ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

No comments: