Saturday, September 12, 2015

Daily Crime Reported As On 12/09/2015 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀ ರಾಘವ ಕುಲಾಲ್‌ (32), ತಂದೆ: ಬೊಗ್ರ ಕುಲಾಲ್‌ವಾಸ, ಬೋಂಟೆ ಕುಮೇರಿ, ಬಜೆ ರಸ್ತೆ, ಕುಕ್ಕೆಹಳ್ಳಿ ಗ್ರಾಮ,ಉಡುಪಿ ಇವರ ಚಿಕ್ಕಪ್ಪ ಪುಟ್ಟ ಕುಲಾಲ್‌ (70) ರವರು ದಿನಾಂಕ 11/09/2015 ರಂದು ತಂಗಿಯ ಮನೆಯ ಜಗಲಿಯಲ್ಲಿ ಮಲಗಿ ಬಳಿಕ ಅಲ್ಲಿಂದ ಹೋದವರು ದಿನಾಂಕ 11/09/2015 ರಂದು 19:30 ಗಂಟೆಯಿಂದ ದಿನಾಂಕ 12/09/2105 ರ ಬೆಳಿಗ್ಗೆ 06:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಕಾರ್ಕಳ: ದಿನಾಂಕ 12/09/2015 ರಂದು ಬೆಳಿಗ್ಗೆ 04:30 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಪೊಸೊಟ್ಟು ಎಂಬಲ್ಲಿ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದುದಾಗಿ ಕೃಷ್ಣ ಮೂರ್ತಿ ಯು.ಬಿ, ಪ್ರಭಾರ ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ವರ್ತಮಾನದಂತೆ ಅವರು ಸಿಬ್ಬಂದಿಯವರೊಂದಿಗೆ 05:45 ಗಂಟೆಗೆ ಮಾಳ ಗ್ರಾಮದ ಮಂಜಲ್ತಾರು ಹುಕ್ರಟ್ಟೆ ತಲುಪಿ ನೋಡಿದಾಗ ಮಣ್ಣು ರಸ್ತೆಯಲ್ಲಿ  KA 19 AA 1106 ಪಿಕ್ ಅಫ್ ಮತ್ತು ಮೋಟಾರ್ ಸೈಕಲ್ ನಂಬ್ರ KA 19 EH 0086 ನೇಯದು ನಿಂತಿದ್ದು ಅದರ ಪಕ್ಕ ನಿಂತಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ಆತನು ಅಬೂಬಕರ್ (58), ತಂದೆ: ಬಾವು ಬ್ಯಾರಿ, ವಾಸ: ಹಂಡೇಲು ಮನೆ, ಪುತ್ತಿಗೆ ಗ್ರಾಮ ಮಿಜಾರು ಅಂಚೆ, ಮಂಗಳೂರು ತಾಲೂಕು, ದ.ಕ ಆಗಿದ್ದು ತಾನು ಮೂಡುಬಿದ್ರೆ ವಾಸಿ ಸಲ್ಲು ಮತ್ತು ರಹೀಮ್ ಎಂಬುವವರ ಜೊತೆ ತಮ್ಮ ಸ್ವಂತ ಲಾಭಕ್ಕಾಗಿ ದನಗಳನ್ನು ಊರಿನವರಿಂದ ಖರೀದಿಸಿ ಮಾಂಸಕ್ಕಾಗಿ ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಎರಡು ದನಗಳನ್ನು ಸಾಗಿಸುತ್ತಿದ್ದುದಾಗಿ ತಿಳಿಸಿದ್ದು ಆರೋಪಿತನನ್ನು, ಸ್ಥಳದಲ್ಲಿದ್ದ ಪಿಕ್ ಅಫ್ ವಾಹನ, ಮೋಟಾರ್ ಸೈಕಲ್ ಮತ್ತು ಪಿಕ್ ಆಫ್ ವಾಹನದಲ್ಲಿದ್ದ ಒಂದು ಗಂಡು ಮತ್ತು ಒಂದು ಹೆಣ್ಣು ದನಗಳನ್ನು ವಶಕ್ಕೆ ಪಡೆದಿರುವುದಾಗಿದೆ. ಆರೋಪಿತರು ದನವನ್ನು ಸಾಗಾಟ ಮಾಡುವಾಗ ಊರಿನವರು ತಡೆದಾಗ ಪಿಕ್ ಅಫ್ ಚಾಲಕ ಸಲ್ಲು ಮತ್ತು ಮೋಟಾರ್ ಸೈಕಲ್ ನಲ್ಲಿದ್ದ ರಹೀಂ ರವರು ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 149/2015 ಕಲಂ 8,9,11 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣಾ ಅಧಿನಿಯಮ 1964 ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: