Thursday, September 10, 2015

Daily Crime Reports As on 10/09/2015 at 07:00 Hrs


ಮಟ್ಕಾ ಜುಗಾರಿ ಪ್ರಕರಣಗಳು
  • ಹಿರಿಯಡ್ಕ:  ಬ್ರಹ್ಮಾವರ ವೃತ್ತದ ಪೊಲೀಸ್‌ ವೃತ್ತ ನಿರೀಕ್ಷಕರು ತಮ್ಮ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪ್‌ನಲ್ಲಿ ಹಿರಿಯಡ್ಕ ಠಾಣಾ ಸರಹದ್ದಿನಲ್ಲಿ ರೌಂಡ್ಸನಲ್ಲಿದ್ದ ವೇಳೆ ಪೆರ್ಡೂರು ಗ್ರಾಮದ ಪೆರ್ಡೂರು ಪೇಟೆಯ ಜಂಕ್ಷನ್‌ನಲ್ಲಿ ಒಬ್ಬನು ಮಟ್ಕಾ ಜೂಜಾಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ಸಿಬ್ಬಂದಿಯವರೊಂದಿಗೆ ಅಲ್ಲಿಗೆ ದಾಳಿ ನಡೆಸಿ ಆಪಾದಿತ ರವಿ ಶೆಟ್ಟಿ [ 30] ತಂದೆ; ದಿ ಕೃಷ್ಣ ಶೆಟ್ಟಿ , ವಾಸ; ಬಜಾಲ್‌, ಕುಕ್ಕೆಹಳ್ಳಿ ಗ್ರಾಮ ಎಂಬವನನ್ನು ದಸ್ತಗಿರಿ ಮಾಡಿ ಅವನ ವಶದಲ್ಲಿ ಒಟ್ಟು ರೂ 480/- ನಗದು ಹಣ,  ಮಟ್ಕಾ ಚೀಟಿ-1 ಹಾಗೂ ಬಾಲ್‌ ಪೆನ್‌-1 ದೊರೆತಿದ್ದು,  ಈ ಬಗ್ಗೆ ಹಿರಿಯಡ್ಕ ಠಾಣೆ ಅಪರಾಧ ಕ್ರಮಾಂಕ 89/2015  U/s  78 (1) (3) ಕರ್ನಾಟಕ ಪೊಲೀಸ್‌ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 09.09.2015 ರಂದು ದಿವಾಕರ ಪಿ.ಎಂ, ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಬಸ್‌‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರದ ಅಡಿಯಲ್ಲಿ ಕೆಎ 25 ಪಿ 7728 ನೇ ಕಾರಿನಲ್ಲಿ ಆಪಾದಿತ ಮಹೇಶ್‌ ಆಚಾರಿ (28) ತಂದೆ: ಚಂದ್ರಯ್ಯ ಆಚಾರಿ ವಾಸ: ದೂಪದಕಟ್ಟೆ, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು ಈತನು ಸಾರ್ವಜನಿಕರನ್ನು ಸೇರಿಸಿಕೊಂಡು ಹುಬ್ಬಳ್ಳಿಯಲ್ಲಿ ನಡೆಯುವ ಕೆ.ಪಿ.ಎಲ್‌ ಕ್ರಿಕೆಟ್‌ ಪಂದ್ಯಾಟದ ನಮ್ಮ ಶಿವಮೊಗ್ಗ ಹಾಗೂ ಬಿಜಾಪುರ ಬುಲ್ಸ್‌ ತಂಡಗಳ ಸೋಲು ಗೆಲುವಿನ ಮೇಲೆ ನಮ್ಮ ಶಿವಮೊಗ್ಗ 1000 ಕ್ಕೆ 1000, ಬಿಜಾಪುರ 1000 ಕ್ಕೆ 2000 ಎಂದು ಜೋರಾಗಿ ಹೇಳುತ್ತಾ ಬೆಟ್ಟಿಂಗ್‌ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು ಗಂಟೆಗೆ ದಾಳಿ ನಡೆಸಿ, ವಿಚಾರಿಸಿದಾಗ ಆಪಾದಿತನು ತನ್ನ ಸ್ವಂತ ಲಾಭಕ್ಕಾಗಿ ಕೆ.ಪಿ.ಎಲ್‌ ಕ್ರಿಕೆಟ್‌ ಪಂದ್ಯಾಟದ ಸೋಲು-ಗೆಲುವಿನ ಮೇಲೆ ಸಾರ್ವಜನಿಕರಿಂದ ಹಣವನ್ನು ಪಣವನ್ನಾಗಿ ಸಂಗ್ರಹಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಆಪಾದಿತನನ್ನು ದಸ್ತಗಿರಿ ಮಾಡಿ, ಆತನ ವಶದಲ್ಲಿದ್ದ ಒಂದು ಸ್ಯಾಮ್‌ಸಂಗ್‌ ಮೊಬೈಲ್‌, ನಗದು ರೂ. 15,000/- ಚೆವರ್‌ಲೆಟ್‌ ಕಾರು ನಂಬ್ರ: ಕೆಎ 25 ಪಿ 7728, ಒಂದು ನೋಟ್‌ ಪುಸ್ತಕ ಹಾಗೂ ಒಂದು ಬಾಲ್‌ ಪೆನ್ನನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಕುಂದಾಪುರ ಠಾಣೆ ಅಪರಾಧ ಕ್ರಮಾಂಕ 305/2015  ಕಲಂ: 78 (1) (3) ಕರ್ನಾಟಕ ಪೊಲೀಸ್‌ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿ ರೊನಾಲ್ಡ್ ಪಿರೇರಾ ಇವರ ಅಣ್ಣ ಜೆರೊಮ್ ಪಿರೇರಾ(47) ಅತಿಯಾಗಿ ಶರಾಬು ಸೇವಿಸಿ ಸರಿಯಾಗಿ ಮನೆಗೆ ಬಾರದೇ ಉಡುಪಿ ಪರಿಸರದಲ್ಲಿ ಸಂಚರಿಸಿಕೊಂಡಿದ್ದು, ದಿನಾಂಕ 09/09/2015 ರಂದು ಮದ್ಯಾಹ್ನ ಸಮಯ ಸುಮಾರು 15:15 ಗಂಟೆಗೆ ನಿಟ್ಟೂರಿನ ರಘು ಎಂಬವರು ಫೋನ್ ಮಾಡಿ ದಿನಾಂಕ 09/09/2015 ರಂದು ಬೆಳಗ್ಗೆ 11:00 ಗಂಟೆಗೆ ನಮ್ಮ ಅಂಗಡಿಯ ಪಕ್ಕದಲ್ಲಿ ವಿಪರೀತಿ ಶರಾಬು ಸೇವಿಸಿ  ಕುಳಿತುಕೊಂಡಿದ್ದನು  ಮದ್ಯಾಹ್ನ ಸಮಯ ಸುಮಾರು 15:00 ಗಂಟೆಗೆ ಬಂದು ನೋಡುವಾಗ ಮೃತಪಟ್ಟಿರುವುದಾಗಿ ಕಂಡು ಬಂದಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಬ್ರಹ್ಮಾವರ: ದಿನಾಂಕ: 09/09/2015 ರಂದು 19.30 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಎಂಬಲ್ಲಿ ಪಿರ್ಯಾದಿ ಆಶಾ ಇವರ ಮನೆಯ ಹೊರಗಡೆ ಕಟ್ಟಿಗೆ ಹಾಕುತ್ತಿರುವ ವಿಚಾರದಲ್ಲಿ ಆರೋಪಿತೆ ಜ್ಯೋತಿ ಎಂಬವಳು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೇ ಇದ್ದ ಕೋಲಿನಿಂದ ಎಡಕೈಗೆ ಹೊಡೆದು ಕುತ್ತಿಗೆಯನ್ನು ಒತ್ತಿ ಬಲಕೈ ಹೆಬ್ಬೆರಳನ್ನು ಕಚ್ಚಿದ್ದಲ್ಲದೆ ಹೊಟ್ಟೆಗೆ ತುಳಿದು ಮುಂದಕ್ಕೆ ನಮ್ಮ ಜಾಗದಲ್ಲಿ ಕಟ್ಟಿಗೆ ಇಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಸುಶ್ಮಾ, ದೇವರಹಿತ್ಲು ಮನೆ ಉಪ್ಪಿನಕೋಟೆ ವಾರಂಬಳ್ಳಿ ಗ್ರಾಮ ಈಕೆ ಪಿರ್ಯಾದಿದಾರರನ್ನು ಹಿಡಿದು ಕೈಯಿಂದ ಕುತ್ತಿಗೆಗೆ ಹೊಡೆದಿರುತ್ತಾಳೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 179/15 ಕಲಂ: 323,324,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: