Thursday, September 10, 2015

Daily Crime Reported As On 10/09/2015 At 17:00 Hrs

ಹಲ್ಲೆ ಪ್ರಕರಣ:
  • ಬ್ರಹ್ಮಾವರ  :ದಿನಾಂಕ: 09/09/2015 ರಂದು 19.30 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಎಂಬಲ್ಲಿ ಪಿರ್ಯಾದಿ ಆಶ (29) ಗಂಡ: ಸುರೇಶ ವಾಸ: ದೇವರಹಿತ್ಲು ಮನೆ ಉಪ್ಪಿನಕೋಟೆ ವಾರಂಬಳ್ಳಿ ಗ್ರಾಮ ಉಡುಪಿ ತಾಲೂಕು ಇವರ ಮನೆಯ ಹೊರಗಡೆ ಕಟ್ಟಿಗೆ ಹಾಕುತ್ತಿರುವ ವಿಚಾರದಲ್ಲಿ ಆರೋಪಿತರುಗಳಾದ ಜ್ಯೋತಿ ,ಸುಶ್ಮಾದೇವರಹಿತ್ಲು ಮನೆ ಉಪ್ಪಿನಕೋಟೆ ವಾರಂಬಳ್ಳಿ ಗ್ರಾಮ  ಇವರುಗಳು ಪಿರ್ಯಾದರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೇ ಇದ್ದ ಕೋಲಿನಿಂದ ಎಡಕೈಗೆ ಹೊಡೆದು ಕುತ್ತಿಗೆಯನ್ನು ಒತ್ತಿ ಬಲಕೈ ಹೆಬ್ಬೆರಳನ್ನು ಕಚ್ಚಿದ್ದಲ್ಲದೆ ಹೊಟ್ಟೆಗೆ ತುಳಿದು ಮುಂದಕ್ಕೆ ನಮ್ಮ ಜಾಗದಲ್ಲಿ ಕಟ್ಟಿಗೆ ಇಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 179/15 ಕಲಂ: 323,324,504,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.  
ಕಳವು ಪ್ರ ಕರಣ:
  • ಗಂಗೊಳ್ಳಿ :ಪಿರ್ಯಾದಿ ಬಿ. ಎಂ. ಗಣೇಶ ಖಾರ್ವಿ ಪ್ರಾಯ  48 ವರ್ಷ  ತಂದೆ ಮುನ್ನ ಖಾರ್ವಿ  ವಾಸ ಹುಣ್ಸೆ ಹಿತ್ಲು , ಗಂಗೊಳ್ಳಿ ಗ್ರಾಮ ಕುಂದಾಪುರ  ತಾಲೂಕು ಇವರು ತನ್ನ HEERO HONDA SPLENDAR MOTOR CYCLE KA 20 R-1504 ನೇಯದನ್ನು  ದಿನಾಂಕ 05/09/2015 ರಂದು ಸಾಯಂಕಾಲ 07.00 ಗಂಟೆಗೆ ತನ್ನ ಮನೆಯ ಬಳಿ ನಿಲ್ಲಿಸಿ  ಮನೆಗೆ ಹೋಗಿರುತ್ತಾರೆ. ರಾತ್ರಿ 10.00 ಗಂಟೆಗೆ ವಾಪಾಸು ಮೋಟಾರು ಸೈಕಲ್  ಹತ್ತಿರ ಬಂದು ನೋಡಿದಾಗ ಮೋಟಾರು ಸೈಕಲನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದರು. ಕಳವಾದ ಮೋಟಾರು ಸೈಕಲಿನ  ಮೌಲ್ಯ 15000/- ರೂ ಆಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 116 /2015 ಕಲಂ 379 ಐಪಿಸಿ  ರಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
  • ಕಾರ್ಕಳ ನಗರ : ದಿನಾಂಕ 09/09/2015 ರಂದು 17:00 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ ಹಾದು ಹೋಗುವ ಬೆಳುವಾಯಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ನೇದರಲ್ಲಿ ಪಿರ್ಯಾದಿದಾರರಾದ  ನಾಗಪ್ಪ, ಪ್ರಾಯ 39 ವರ್ಷ, ತಂದೆ: ಮಹಾದೇವಪ್ಪ, ವಾಸ: ಅಶ್ವಥಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಜೋಡು ರಸ್ತೆ, ಕುಕ್ಕುಂದೂರು ಗ್ರಾಮ, ಕಾರ್ಕಳ ಇವರು ಮೋಟಾರು ಸೈಕಲ್ ನಂಬ್ರ KA20EC9988 ನೇಯದರಲ್ಲಿ ಅಂಬಣ್ಣ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೆಳುವಾಯಿ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಬರುವಾಗ, ಕಾರ್ಕಳ ಕಡೆಯಿಂದ ಮುರತ್ತಂಗಡಿ ಕಡೆಗೆ ಕಾರು ನಂಬ್ರ KA03.MA.7985 ನೇಯದರ ಚಾಲಕ ಶ್ರೀನಿವಾಸ ಡಾಂಗೆ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು, ಪಿರ್ಯಾದುದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮತ್ತು ಸಹಸವಾರ ಡಾಮಾರು ರಸ್ತೆಗೆ ಬಿದ್ದು ಸಾಮಾನ್ಯ ಸ್ವರೂಪದ ಗಾಯಗೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 126/2015 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ :ದಿನಾಂಕ 08/09/2015 ರಂದು ಪಿರ್ಯಾದಿದಾರರಾದ ಶ್ರೀಮತಿ ಪ್ರತಿಮ(28) ಗಂಡ: ಶಂಕರ ಮೊಗವೀರ ವಾಸ: ಮಂದರ್ತಿ ಹೆಗ್ಗುಂಜೆ ಗ್ರಾಮ ಉಡುಪಿ ತಾಲೂಕು ಇವರು ಆಪಾದಿತ ಅಶೋಕರ ರವರ ಮೋಟಾರು ಸೈಕಲ್‌ ನಂಬ್ರ ಕೆಎ-20 ಈಎಫ್- 9179 ನೇದರಲ್ಲಿ ಸಹಸವಾರಳಾಗಿ ಕುಳಿತು ಕೋಟ ಕಡೆಯಿಂದ ಮಂದರ್ತಿಗೆ ಹೋಗುವರೇ ಕೋಟ ಹೈಸ್ಕೂಲ್ - ಸಾಯಿಬ್ರಕಟ್ಟೆ ಡಾಮರು ರಸ್ತೆಯಲ್ಲಿ ಹೋಗುತ್ತಿದ್ದಾಗ ಸುಮಾರು 15.30 ಗಂಟೆಗೆ ಉಡುಪಿ ತಾಲೂಕು ಬನ್ನಾಡಿ ಸಮೀಪ ತಲುಪಿದಾಗ ಆಪಾದಿತರಾದ ಅಶೋಕ್ ರವರು ತನ್ನ ಕೆಎ-20 ಈಎಫ್- 9179 ನೇ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬಂದು ಹತೋಟಿ ತಪ್ಪಿ ರಸ್ತೆಯ ಎಡ ಬದಿಯಲ್ಲಿದ್ದ ಕಲ್ಲು ಕಂಬಕ್ಕೆ ಢಿಕ್ಕಿ ಹೊಡೆಸಿದ ಪರಿಣಾಮ ಸಹಸವಾರಳಾದ ಪ್ರತಿಮಾ ರವರಿಗೆ ಎಡಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಬಲಕಾಲಿನ ಮೊಣಗಂಟಿನ ಹತ್ತಿರ, ಎಡಕೆನ್ನೆಗೆ ತರಚಿದ ಗಾಯವಾಗಿದ್ದು ಆಪಾದಿತ ಮೋಟಾರು ಸೈಕಲ್‌ ಸವಾರನಿಗೂ ಕೂಡಾ ತಲೆಗೆ ತೀವೃ ಸ್ವರೂಪದ ಗಾಯ ಉಂಟಾಗಿದ್ದು ಚಿಕಿತ್ದೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 202/2015 ಕಲಂ:279,337,338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

No comments: