Wednesday, September 09, 2015

Daily Crime Reports As on 09/09/2015 at 19:30 Hrsಇತರೇ ಪ್ರಕರಣ

  • ಕಾರ್ಕಳ: ದಿನಾಂಕ 09/09/2015 ರಂದು ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಅಲೆದೊಟ್ಟು ಎಂಬಲ್ಲಿ ಅರೋಪಿಗಳಾದ ಜಗದೀಶ, ರತ್ನವರ್ಮ ಜೈನ್ ಹಾಗೂ ಫಝಿಲ್ ಮಹಮ್ಮದ್ ಎಂಬಾತನು ತನ್ನ ಆಕ್ಟಿವಾ ಸ್ಕೂಟರ್ ನಂಬ್ರ KA 20 EJ 7649 ನೇದನ್ನು ಉಪಯೋಗಿಸಿ, ತಮ್ಮ ಸ್ವಂತ ಲಾಭಕ್ಕೋಸ್ಕರ ದನವನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವರೇ ರಸ್ತೆ ಬದಿಯಲ್ಲಿದ್ದ ದನವೊಂದನ್ನು ಹಗ್ಗ ಕಟ್ಟಿ ಬಲವಂತವಾಗಿ ಎಳೆದು ಕೊಂಡು ಹೋಗುವಾಗ ಪಿರ್ಯಾದಿ ಜೀವನ್ ಜಯ ಶೆಟ್ಟಿ, (27) ತಂದೆ: ಜಯ ಶೆಟ್ಟಿ, ವಾಸ: ಜಯ ನಿವಾಸ, ರೆಂಜಾಳ ಗ್ರಾಮ, ಕಾರ್ಕಳ ತಾಲೂಕುರವರು ಹಾಗೂ ಜೊತೆಯಲ್ಲಿದ್ದ 2-3 ಜನ ಸಂಘಟನೆಯ ಕಾರ್ಯಕರ್ತರು ವಿಚಾರಿಸಿದಾಗ ಅವರಿಗೆಲ್ಲ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈಯ್ದು, “ಗೋ”ವನ್ನು ಕಡಿದು ಮಾಂಸ ಮಾಡಿ, ನಿಮಗೂ ಬೇಕಾದರೆ ಕೊಡುತ್ತೇವೆಎಂದು ಹೇಳಿ ನಿಂದಿಸಿರುತ್ತಾರೆ, ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 124/2015 ಕಲಂ 9, 11 ಗೋ ಹತ್ಯೆ ನಿಷೇಧ ಕಾಯ್ದೆ, & ಕಲಂ 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: