Wednesday, September 09, 2015

Daily Crime Reports As on 09/09/2015 at 17:00 Hrs



ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 08/09/2015 ರಂದು  ಸಂಜೆ 5:15 ಗಂಟೆಗೆ ಉಡುಪಿ ತಾಲೂಕು, ಹೇರೂರು ಗ್ರಾಮದ , ರುಡ್‌ ಸೆಟ್‌ ಕ್ರಾಸ್‌ನ ಹತ್ತಿರ ರಾಷ್ಟ್ರೀಯ .ಹೆದ್ದಾರಿ 66 ರಲ್ಲಿ ಪಿರ್ಯಾದಿ ರತ್ನಾಕರ ಶೆಟ್ಟಿ ಎನ್ (54), ತಂದೆ: ಪುಟ್ಟಯ್ಯ ಶೆಟ್ಟಿ ವಾಸ: ಪೂರ್ವಿ, ಪಾಂಡುರಂಗ ನಗರ, ಚಾಂತಾರು ಗ್ರಾಮ, ಉಡುಪಿ ತಾಲೂಕು ಇವರು ತನ್ನ ಬುಲೆರೊ ವಾಹನವನ್ನು ಚಲಾಯಿಸಿಕೊಂಡು  ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ ಆರೋಪಿ ತನ್ನ ಕೆಎ 20 ಜೆಡ್ 8442 ನೇ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಡಗಡೆಯಿಂದ ಓವರ್‌ಟೇಕ್ ಮಾಡಿ ಮುಂದಿನಿಂದ ಬ್ರಹ್ಮಾವರ ಕಡೆಗೆ ಜಯರಾಮ ಆಚಾರ್ಯರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 20 ಯು 1899 ನೇ ಮೋಟಾರ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ , ಮೋಟಾರ್ ಸೈಕಲ್ ಸವಾರ ಜಯರಾಮ ಆಚಾರ್ಯರವರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬೊನೆಟ್ ಮೇಲೆ ಬಿದ್ದು , ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಾಯ, ಎಡಕಾಲಿನ ಮೂಳೆ ಮುರಿತ, ಎಡ ಭುಜದ ಮೂಳೆ ಮುರಿತದ ಗಾಯವಾಗಿದ್ದು ದೇಹದ ಇತರ ಭಾಗಗಳಿಗೆ ತರಚಿದ ಗಾಯವಾಗಿರುತ್ತದೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 178/15 ಕಲಂ:: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ
  • ಬ್ರಹ್ಮಾವರ: ದಿನಾಂಕ: 07/09/2015 ರಂದು 07:30 ಗಂಟೆಗೆ ಪಿರ್ಯಾದಿ ನಜೀರ್ ಅಹ್ಮದ್, [66], ತಂದೆ: ಬುಡಾನ್ ಸಾಹೇಬ್, ವಾಸ: ಬೆಳದಿಂಗಳೂ, ಸಂತೋಷನಗರ. 52ನೇ ಹೇರೂರು ಗ್ರಾಮ, ಉಡುಪಿ ತಾಲೂಕು ಇವರ ಅಕ್ಕನ ಮಗನಾದ ಮೊಹಮ್ಮದ್ ರಫೀಕ್ (53) ಎಂಬವರು ಮನೆಯಿಂದ ಗುಂಡ್ಮಿಗೆ ಜನರಲ್ ಐಟಂಗಳ ಸೇಲ್ಸ್ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 177/15 ಕಲಂ:: ಗಂಡಸುಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಟ್ಕಾ ಜುಗಾರಿ ಪ್ರಕರಣ
  • ಶಂಕರನಾರಾಯಣ: ದಿನಾಂಕ  08/09/2015  ರಂದು  17:15 ಗಂಟೆಗೆ ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಮೇಲ್ ಜೆಡ್ಡು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ  ಕೋಳಿಗಳ ಕಾಲುಗಳಿಗೆ (ಕತ್ತಿ) ಬಾಳು ಕಟ್ಟಿ ಹಣವನ್ನು ಪಣವಾಗಿರಿಸಿ ಜೂಜಾಟ ಆಡುತ್ತಿದ್ದರು,  ದೇಜಪ್ಪ ಪಿ ಎಸ್ ಐ ಶಂಕರನಾರಾಯಣ ಪೊಲೀಸ್‌ ಠಾಣೆ ರವರು ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಿ ಆರೋಪಿಗಳಾದ 1)ಸುರೇಂದ್ರಶೆಟ್ಟಿ, 2) ಕೃಷ್ ಪೂಜಾ, 3) ಬಸವ ಪೂಜಾರಿ , 4) ಮೂರ್ತಿ ಶೆಟ್ಟಿ, 5) ಸುಧಾಕರ, 6) ಸೀತಾರಾಮ, 7)  ರಾಜು ಶೆಟ್ಟಿ, 8)  ಶಂಕರ ಶೆಟ್ಟಿ, 9) ಉದಯ ಮತ್ತು ಇತರರು ಹಾಗೂ 3 ಕೋಳಿ ಹುಂಜ ನಗದು ಹಣ 5600/- ಹಾಗೂ 13 ಮೋಟಾರ್‌ ಸೈಕಲ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 181/15 ಕಲಂ: 87,93  KP ACT ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಕುಂದಾಪುರ:ಪಿರ್ಯಾದಿ ಗಣೇಶ್‌ ಪೂಜಾರಿ ತಂದೆ: ಹೆರಿಯ ಪೂಜಾರಿ ವಾಸ: ಶ್ರೀ ಲಕ್ಷ್ಮೀ ಕೃಪಾ, ವಿಠಲವಾಡಿ, ವಡೇರಹೋಬಳಿ, ಕುಂದಾಪುರ ತಾಲೂಕುರವರ ಮೊಬೈಲ್‌ ಗೆ ಪ್ರಸಿದ್ದ ಪತ್ರಿಕೆಯ ಸಂದಾದಕರಾದ ಸಂತೋಷ್‌ ಸುವರ್ಣ ರವರು ದೂರವಾಣಿ ಕರೆ ಮಾಡಿ ಒಂದು ಹುಡುಗಿಯ ಜೊತೆ ಅನೈತಿಕ ಸಂಬಂಧ ಇರುವುದಾಗಿ ಹೇಳಿ ತನ್ನ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಸಿ, ಗಣೇಶ್‌ ಪೂಜಾರಿ ರವರಿಂದ ರೂ. 30,000 ದಿಂದ 1,20,000/- ದವರೆಗೂ ಹಣ ನೀಡುವಂತೆ ಕಿರುಕುಳ ನೀಡಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 304/2015  ಕಲಂ: 384, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: