Tuesday, September 08, 2015

Daily Crime Reports As on 08/09/2015 at 19:30 Hrs

ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 03/09/2015 ರಂದು ಪಿರ್ಯಾದಿದಾರರಾದ ಅಸ್ಲಾಂ (31), ತಂದೆ; ಮೊಹಿದ್ದೀನ್ ಶೇಖ್, ವಾಸ; ಗುಲ್ ಶಾನ್ ಮಂಜಿಲ್, ಹಿಲಾಲ್, ಬೀದಿ ಮೊಗ್ದುಮ್ ಭಟ್ಕಳ ಶುಶಾರ್ ಗಡಿ ಭಟ್ಕಳ ಇವರು ತನ್ನ ಕೆಎ 47 ಕ್ಯೂ 2406 ನೇ ಮೋಟಾರ್ ಸೈಕಲ್‌ನಲ್ಲಿ ತನ್ನ ಸಂಬಂಧಿಯಾದ ಅಮೀರ್ ಭಾಷಾರವರನ್ನು ಕರೆದುಕೊಂಡು ಸಂಜೆ 4:50 ಗಂಟೆಗೆ ಭಟ್ಕಳದಿಂದ ಹೊರಟು ಸಂಜೆ 5:30 ಗಂಟೆಗೆ ಕಿರಿಮಂಜೇಶ್ವರ ಎಂಬಲ್ಲಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿದ್ದಂತೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೊಂಡಾ ಐ10 ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಓವರ್ ಟೇಕ್ ಮಾಡಿ ಅಸ್ಲಾಂ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಅಸ್ಲಾಂ ಹಾಗೂ ಸಹ ಸವಾರ ಅಮೀರ್ ಬಾಷಾ ರವರು ರಸ್ತೆಗೆ ಬಿದ್ದ ಪರಿಣಾಮ ಅಸ್ಲಾಂ ರವರಿಗೆ ಬಲ ಕೈಗೆ ತೀವ್ರ ರೀತಿಯ ಪೆಟ್ಟಾಗಿ ಬಲ ಕಾಲಿಗೆ, ಎಡಭುಜ, ಎಡಕಾಲಿಗೆ ರಕ್ತ ಗಾಯವಾಗಿರುತ್ತದೆ. ಸಹ ಸವಾರ ಅಮೀರ್ ಭಾಷಾರವರ ತಲೆ ಮತ್ತು ಕಾಲಿಗೆ ರಕ್ತ ಗಾಯವಾಗಿರುತ್ತದೆ. ಅಸ್ಲಾಂ ಹಾಗೂ ಸಹ ಸವಾರ ಅಮೀರ್ ಬಾಷಾ ರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದು, ಅಸ್ಲಾಂ ರವರ ಮನೆಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಅಸ್ಲಾಂ ರವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಯಿಂದ ಕುಂದಾಪುರ ವಿವೇಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 244/2015  ಕಲಂ: 279. 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

No comments: