Wednesday, September 09, 2015

Daily Crime Reports As on 09/09/2015 at 07:00 Hrs

ಅಪಘಾತ ಪ್ರಕರಣ
  • ಕಾರ್ಕಳ: ಪಿರ್ಯಾದಿದಾರರಾದ ನಿಕಿಲ್‌ಡಿಸೋಜ (34), ತಂದೆ: ಫೆಲಿಕ್ಸ್‌ಡಿಸೋಜ, ವಾಸ: ಕಾರ್ಕಳ ತಾಲೂಕು ಕಚೇರಿಯ ಬಳಿ, ಕಾರ್ಕಳ ಇವರು ದಿನಾಂಕ 29/08/2015 ರಂದು ಸಂಜೆ 16:30 ಗಂಟೆಗೆ ನಿಸರ್ಗ ರೆಸಿಡೆನ್ಸಿ ವಸತಿ ನಿಲಯದ ಎದುರು ಕಾರ್ಕಳ ಮುಖ್ಯ ರಸ್ತೆಯಲ್ಲಿ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮೂಡಬಿದ್ರೆ ಕಡೆಯಿಂದ KA 20 EG 2927 ನೇ ನಂಬ್ರದ ಸ್ಕೂಟರ್‌ನ್ನು ಅದರ ಸವಾರಳು ಸ್ಕೂಟರ್‌ನಲ್ಲಿ ಹೆಂಗಸನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದು ಅದೇ ಸಮಯಕ್ಕೆ ಸ್ಕೂಟರ್‌ನ ಹಿಂದಿನಿಂದ KA 19 ME 2639 ನೇ ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಸದ್ರಿ ಸ್ಕೂಟರ್‌ನ ಹಿಂದುಗಡೆಯಿಂದ ಬರುತ್ತಿದ್ದ ಸ್ಕೂಟರ್‌ ಸವಾರಳು ಸ್ಕೂಟರನ್ನು ಒಮ್ಮೆಲೆ ಬಲಬದಿಗೆ ತಿರುಗಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ  ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ಸಮೇತ  ಸವಾರಳು  ಹಾಗೂ ಹಿಂಬದಿ ಕುಳಿತ್ತಿದ್ದ ಹೆಂಗಸು ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್‌ನ ಸಹ ಸವಾರಳಿಗೆ ಬಲಕಾಲಿಗೆ, ಬಲಪಕ್ಕೆಲುಬಿಗೆ, ಎರಡು ಕೈಗಳಿಗೆ ಜಖಂ ಆಗಿದ್ದು ಸ್ಕೂಟರ್‌ ಸವಾರಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಹಿಂಬದಿ ಸವಾರಳ ಹೆಸರು ಕೇಳಲಾಗಿ ಎವಿಜಿನ್‌ತಾವ್ರೋ ಎಂದು ತಿಳಿಯಿತು. ಗಾಯಾಳುಗಳನ್ನು ಅಲ್ಲಿ ಸೇರಿದ್ದವರು ಉಪಚರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಕಾರು ಚಾಲಕನ ಹೆಸರು ಕೇಳಲಾಗಿ ಹೆಚ್‌.ಅಕ್ಷಯ್‌ ಹಾಗೂ ಸ್ಕೂಟರ್‌ ಸವಾರಳು ಪ್ರೇಮಲತಾ ಶೆಟ್ಟಿ ಎಂದು ತಿಳಿಯಿತು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2015 ಕಲಂ: 279, 337 ಐಪಿಸಿ ಮತ್ತು 134(ಎ)&(ಬಿ) ಐಎಮ್‌ವಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  
ಮಟ್ಕಾ ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 08/09/2015 ರಂದು ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕೋಟೇಶ್ವರ ಬೈಪಾಸ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತ ನಾಗೇಶ ದೇವಾಡಿಗ (52), ತಂದೆ: ದಿ. ಕುಪ್ಪ ದೇವಾಡಿಗ, ವಾಸ: ಮಾರ್ಕೋಡು, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರು ಸಾರ್ವಜನಿಕರನ್ನು ಸೇರಿಸಿಕೊಂಡು 1 ರಿಂದ 99 ರ ಒಳಗೆ ಯಾವುದೇ ನಂಬರ್‌ಬಂದರೆ 1/- ರೂಪಾಯಿಗೆ 70/- ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದಾಗಿ ನಾಸೀರ್‌ಹುಸೇನ್‌ ಪಿ.ಎಸ್‌.ಐ ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ  ಖಚಿತಪಡಿಸಿಕೊಂಡು 16:50 ಗಂಟೆಗೆ ದಾಳಿ ನಡೆಸಿ ಆರೋಪಿತನನ್ನು ದಸ್ತಗಿರಿ ಮಾಡಿ ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ನಗದು ರೂಪಾಯಿ 435/-, ಮಟ್ಕಾ ನಂಬರ್‌ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 303/2015 ಕಲಂ: 78 (1) (3) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ: ಪಿರ್ಯಾದಿದಾರರಾದ ಕೃಷ್ಣ ಪೂಜಾರಿ, ದೊಡ್ಡಹಿತ್ಲು, ಗಂಗೊಳ್ಳಿ ಗ್ರಾಮ ಇವರ ತಂದೆ ಶಂಕರ ಪೂಜಾರಿ (60)  ಎಂಬುವವರು ದಿನಾಂಕ 08/09/2015 ರಂದು ಮದ್ಯಾಹ್ನ ಸಮಯ ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ ಮನೆಯ ಮಾಡಿನ ಪಕ್ಕಾಸಿಗೆ ನೈಲಾನ್‌ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14 /2015 ಕಲಂ: 174 ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: