Tuesday, September 08, 2015

Daily Crime Reports As on 08/09/2015 at 17:00 Hrsಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 07/09/2015 ರಂದು ಸಮಯ ಸುಮಾರು ಮಧ್ಯಾಹ್ನ 01:30 ಗಂಟೆಗೆ  ಕುಂದಾಪುರ ತಾಲೂಕು ವಡೇರ ಹೋಬಳಿ ಗ್ರಾಮದ ಬಿ.ಸಿ ರಸ್ತೆಯ ಬೆಟ್ಟಗಾರ ಎಂಬಲ್ಲಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಆಪಾದಿತನು KA-05 MN-9601 ನೇ ಕಾರನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಕೊಂಡು ರಸ್ತೆಯ  ಬಲ ಬದಿಗೆ   ಬಂದು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಪಿರ್ಯಾದಿ ನಾರಾಯಣ ಶೆಟ್ಟಿ ಇವರು ಚಂದ್ರಶೇಖರ ಶೆಟ್ಟಿ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA-20 X-1823 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಹಾಗೂ ಸಹ ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 111/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಅಜೆಕಾರು: ಪಿರ್ಯಾದಿ ಪ್ರದೀಪ ಪಿ.ಜೆ  ಇವರು ಉಡುಪಿಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು ಕಡ್ತಲ ಗ್ರಾಮದ ಮಡ್ಲಕ್ಯಾರು ಎಂಬಲ್ಲಿ ಹಂಚಿನ ಮನೆ ಹಾಗೂ ಜಾಗವನ್ನು ಹೊಂದಿದ್ದು ಸದ್ರಿ ಮನೆಯಲ್ಲಿ ಯಾರೂ ವಾಸ್ತವ್ಯ ಇಲ್ಲದೆ ಇದ್ದು ದಿನಾಂಕ 26-07-2015 ರಿಂದ 06-09-2015 ರ ಮಧ್ಯ ಅವಧಿಯಲ್ಲಿ ಯಾರೋ ಕಳ್ಳರು ಸದ್ರಿ ಮನೆಯ ಹಿಂದಿನ ಬಾಗಿಲನ್ನು ದೂಡಿ ಒಳ ಪ್ರವೇಶಿಸಿ ಮನೆಯ ಸ್ನಾನದ ಕೋಣೆಯಲ್ಲಿ ಅಳವಡಿಸಿದ ಸುಮಾರು 13,000 ರೂ ಮೌಲ್ಯದ ನೀರು ಕಾಯಿಸುವ ತಾಮ್ರದ ಪಾತ್ರೆ ಮತ್ತು ಮನೆಯೊಳಗೆ ಇಟ್ಟಿರುವ ತೋಟಕ್ಕೆ ನೀರು ಬಿಡುವ ಸುಮಾರು 14 ಸ್ಪಿಂಕ್ಲರ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸ್ವತ್ತುಗಳ ಒಟ್ಟು  ಅಂದಾಜು ಮೌಲ್ಯ 18,600/- ರೂಪಾಯಿಗಳಾಗಬಹುದು. ಈ ಬಗ್ಗೆ ಅಜೆಕಾರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 29/2015 ಕಲಂ 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಮಣಿಪಾಲ: ಪಿರ್ಯಾದಿ ಬಾಲಪ್ಪ  ಇವರು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಮಣಿಪಾಲದ ಕೇರಳ ಹೊಟೇಲ್‌ ಬಳಿ, ಅಪ್ಪಣ್ಣ ಪೈರವರ ಮನೆಯಲ್ಲಿ ಹೆಂಡತಿ ಮಾದೇವಿ, ಮಗ ಶರಣ್ಣ, ಮಗಳು ಮಂಜುಳಾಳೊಂದಿಗೆ ವಾಸವಾಗಿದ್ದು, ಮಗಳು ಮಂಜುಳಾ ಉಡುಪಿಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ. ದಿನಾಂಕ 25/08/15ರಂದು ಮಧ್ಯಾಹ್ನ ಸುಮಾರು 1:00 ಗಂಟೆಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಈತನಕ ವಾಪಸ್ಸು ಮನೆಗೂ ಬಾರದೇ ತನ್ನ ಸ್ವಂತ ಊರಾದ ಬಾದಾಮಿಗೂ ಹೋಗದೇ ಕಾಣೆಯಾಗಿದ್ದಾಗಿದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 182/15 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ದಿನಾಂಕ 07/09/2015 ರಂದು ರಾತ್ರಿ 09:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಮೈಥುಗುಳಿ ಎಂಬಲ್ಲಿ ವಾಸವಾಗಿರುವ  ರಮೇಶ ಪ್ರಾಯ ಸುಮಾರು 42 ವರ್ಷ ರವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡು ಪರಿಣಾಮ ಚಿಕೆತ್ಸೆಗಾಗಿ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ದಾರಿಯಲ್ಲಿ ಎದೆ ನೋವು ತೀವ್ರಗೊಂಡು ಆಸ್ಪತ್ರೆಗೆ ತಲುಪುವಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 51/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: