Tuesday, September 08, 2015

Daily Crime Reports As on 08/09/2015 at 07:00 Hrs



ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ  07/09/2015  ರಂದು ಸಾಯಂಕಾಲ ಗಂಗೊಳ್ಳಿ ಪೊಲೀಸ್‌ ಠಾಣೆಯ  ಪಿ.ಎಸ್‌. ಐ ಸುಬ್ಭಣ್ಣ  ಬಿ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌   ಕರ್ತವ್ಯದಲ್ಲಿ ಇರುವಾಗ  ಗುಜ್ಜಾಡಿ ಗ್ರಾಮದ ಗುಜ್ಜಾಡಿ ಜಂಕ್ಷನ್ ಬಳಿ ಇರುವ ಲಕ್ಷ್ಮಣ ಪೂಜಾರಿ  ರವರ ಗೂಡಂಗಡಿಯ  ಬಳಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವುದಾಗಿ  ದೊರೆತ ಖಚಿತ ಮಾಹಿತಿ ಸಿಕ್ಕಿದ್ದು, ಅದರಂತೆ  ಮೇಲ್ಕಾಣಿಸಿದ ಸ್ಥಳಕ್ಕೆ  ಹೋಗಿ ಖಚಿತಪಡಿಸಿಕೊಂಡು  18.00 ಗಂಟೆಗೆ  ದಾಳಿ ಮಾಡಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಲಕ್ಷ್ಮಣ ಪೂಜಾರಿ ಪ್ರಾಯ 44 ವರ್ಷ ತಂದೆ ದಿ. ಕುಪ್ಪಯ್ಯ ಪೂಜಾರಿ ವಾಸ ಮಾವಿನಕಟ್ಟೆ 5 ಸೆಂಟ್ಸ್ ಗುಜ್ಜಾಡಿ   ಗ್ರಾಮ ಕುಂದಾಪುರ ತಾಲೂಕು ಈತನನ್ನು ವಶಕ್ಕೆ ಪಡೆದು, ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ಹಣ, ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ಹಣ 1300/- ರೂಪಾಯಿ  ಕಾನೂನು ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 115 / 2015 ಕಲಂ  78 (1) (111) ಕೆಪಿ  ಆಕ್ಟ್‌  ನಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 07/09/2015 ರಂದು ಪಿರ್ಯಾದಿ ಶ್ರೀಪತಿ ಕೆ ಇವರು ತನ್ನ  ಬಾಬ್ತು ಕೆಎ 19 ಎಂ ಇ 5417 ನೇದರಲ್ಲಿ  ಮಂಗಳೂರಿನಿಂದ ಮುರ್ಡೇಶ್ವರಕ್ಕೆ ಹೋಗುವಾಗ ಸುಮಾರು  17:00 ಗಂಟೆಗೆ ಉಡುಪಿ ತಾಲೂಕು  ವಾರಂಬಳ್ಳಿ  ಗ್ರಾಮದ ಧರ್ಮವರ ಆಡಿಟೋರಿಯಂ ಬಳಿ ಪಿರ್ಯಾದಿದಾರರ ಬಾಬ್ತು ಕೆಎ 19 ಎಂ ಇ 5417 ನೇದರ ಕಾರಿನ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಒಂದು ಟಿಪ್ಪರ್ ಕೆಎ 20 ಡಿ 1067 ನೇಯದನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂತೆಯಿಂದ  ಕಾರನ್ನು ಓವರ್ ಟೇಕ್ ಮಾಡುವಾಗ  ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಲಭಾಗವೂ ಸಂಪೂರ್ಣ ಜಖಂಗೊಂಡಿರುತ್ತದೆ. ಸದ್ರಿ ಅಪಘಾತಕ್ಕೆ ಟಿಪ್ಪರ್ ಚಾಲಕ ನವೀನ್ ಡಿಸೋಜಾರವರ ಅತಿವೇಗ ಹಾಗೂ ಅಜಾಗರೂಕತೆಯು ಕಾರಣವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 176/2015 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ : ದಿನಾಂಕ 07/09/2015 ರಂದು ಸಮಯ ಸುಮಾರು ಮಧ್ಯಾಹ್ನ 04:30 ಗಂಟೆಗೆ ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ಕಟ್‌‌‌‌‌‌ಬ್ಯಾಲ್ತೂರು ರೈಲ್ವೆ ಸೇತುವೆಯ ಬಳಿ ರಸ್ತೆಯಲ್ಲಿ ಆಪಾದಿತ ಸಂತೋಷ ಆಚಾರಿ ಎಂಬವರು ತನ್ನ ಬಾಬ್ತು KA20-EC-1850ನೇ ಬೈಕಿನಲ್ಲಿ  ಪಿರ್ಯಾದಿ ಶ್ರೀಮತಿ  ಆಚಾರಿರವರನ್ನು ಸಹ ಸವಾರಳಾಗಿ  ಕುಳ್ಳಿರಿಸಿಕೊಂಡು ನೂಜಾಡಿ ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮ್ಮಲೆ ಬ್ರೇಕ್‌ ಹಾಕಿದ ಕಾರಣ ಬೈಕಿ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದು ಪಿರ್ಯಾದಿದಾರರು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 112/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ದಿನಾಂಕ. 07.09.2015 ರಂದು ರಾತ್ರಿ 8:00 ಗಂಟೆಗೆ ನಡ್ಸಾಲು ಗ್ರಾಮದ ಪಡುಬಿದ್ರಿ ಕಾರ್ಕಳ ಜಂಕ್ಷನ್ ಬಳಿಯಿಂದ ನಂದಿಕೂರು ಕಡೆಗೆ ಹೋಗುವ ರಾಜ್ಯ ಹೆದ್ದಾರಿ-1 ರಲ್ಲಿ ಕಂಚಿನಡ್ಕ ಕ್ರಾಸ್ ನಿಂದ ಸ್ವಲ್ಪ ಮುಂದಕ್ಕೆ ಕೆಎ-20-ಸಿ-3421 ನೇ ಆಟೋ ರಿಕ್ಷಾದ ಚಾಲಕನಾದ ಜಾನ್ ಡಿ ಸೋಜಾ ಎಂಬವರು ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಉತ್ತರ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಿರುಪತಿ ರಾಜಾ ಎನ್ 32 ವರ್ಷ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಯ  ಹಿಂಬದಿ ಹಾಗೂ ಎಡಕೈಯ ಮಣಿಗಂಟಿಗೆ ಗಾಯವಾಗಿ ಚಿಕಿತ್ಸೆಯ ಬಗ್ಗೆ ಸಿದ್ದಿ ವಿನಾಯಕ ಆಸ್ಪತ್ರೆ ಪಡುಬಿದ್ರಿಗೆ ದಾಖಲಾಗಿರುತ್ತಾರೆ. ರಿಕ್ಷಾ ಚಾಲಕನು ಚಿಕಿತ್ಸೆಗೆ ಕರೆದು ಕೊಂಡು ಹೋಗದೇ ವಾಹನ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 113/15 ಕಲಂ. 279, 337 ಐ.ಪಿ.ಸಿ. ಮತ್ತು 134 (ಎ) (ಬಿ) ಐ.ಎಂ.ವಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಪಿರ್ಯಾದಿ ಜಗನ್ನಾಥ್ ಇವರು ದಿನಾಂಕ:07/09/2015 ರಂದು ತಮ್ಮ ಬಾಬ್ತು ಸ್ಕೂಟರ್ ನಂಬ್ರ ಕೆಎ-20 ಇಹೆಚ್-2790 ನೇದರಲ್ಲಿ ತಮ್ಮ ಪತ್ನಿ ಕುಸುಮರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಲಯನ್ ಸರ್ಕಲ್ ಕಡೆಯಿಂದ ಹೊಗುತ್ತಿರುವಾಗ ಸಮಯ ಸುಮಾರು ಸಂಜೆ 06:50 ಗಂಟೆ ಸಮಯಕ್ಕೆ ಡಯಾನಾ ಸರ್ಕಲ್ ಬಳಿಯ ಶೆಟ್ಟಿ ಆಂಡ್ ಕಂಪೆನಿ ಪೆಟ್ರೋಲ್ ಪಂಪ್ ಬಳಿ ತಲುಪುವಷ್ಟರಲ್ಲಿ ಪಿರ್ಯಾದುದಾರರ ಹಿಂದಿನಿಂದ ಕೆಎ-20 ಸಿ-7408 ನೇ ಬಸ್ಸಿನ ಚಾಲಕ ಸುಕುಮಾರ್ ಎಂಬರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಮತ್ತು ಅವರ ಪತ್ನಿ ಕುಸುಮರವರಿಗೆ ಗುದ್ದಿದ ಮತ್ತು ರಕ್ತಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 100/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ದಿನಾಂಕ: 07/09/2015 ರಂದು  ಮಧ್ಯಾಹ್ನ  11:00 ಗಂಟೆಯಿಂದ  12:00 ಗಂಟೆಯ ನಡುವಿನ ಆವಧಿಯಲ್ಲಿ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಎಂಬಲ್ಲಿರುವ ಶ್ರೀಮತಿ ವಿದ್ಯಾ ಶೆಟ್ಟಿ (48) ರವರು  ಯಾವುದೋ ವಿಚಾರದಲ್ಲಿ  ಮಾನಸಿಕವಾಗಿ ನೊಂದು ಮನೆಯ ಮಲಗುವ  ಕೋಣೆಯ ಫ್ಯಾನಿಗೆ ಸೀರೆಯನ್ನು  ಕಟ್ಟಿ ಕುತ್ತಿಗೆಗೆ  ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ  ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಬೈಂದೂರು: ಶೇಖರ ನಾಯ್ಕ ಹೆಚ್‌ಸಿ ಇವರು ದಿನಾಂಕ 06/07-09-2015 ರಂದು ರಾತ್ರಿ  ರೌಂಡ್ಸ್  ಕರ್ತವ್ಯದಲ್ಲಿರುವ ಸಮಯ ಬೆಳಗಿನ ಜಾವ 05-10 ಗಂಟೆಗೆ ಠಾಣಾ ಸರಹದ್ದಿನ ನಾವುಂದದಲ್ಲಿ  ರೌಂಡ್ಸ್  ಮಾಡುತ್ತಿರುವಾಗ ಬಾತ್ಮೀದಾರರೊಬ್ಬರು ಕರೆ ಮಾಡಿ ಓರ್ವ ವ್ಯಕ್ತಿಯು ನಾವುಂದ ಗ್ರಾಮದ  ಮಠದಹಿತ್ಲು ಶ್ರೀ ವಿಷ್ಣು ದೇವಸ್ಥಾನದ ಬಳಿಯಲ್ಲಿ  ತನ್ನ ಮುಖವನ್ನು ಕರವಸ್ತ್ರದಲ್ಲಿ ಮರೆ ಮಾಚಿ ಅಡಗಿಕೊಂಡಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ  ಹೋಗಿ  ಮರೆಯಲ್ಲಿ ವಾಹನವನ್ನು ನಿಲ್ಲಿಸಿ  ಕತ್ತಲೆಯಲ್ಲಿ ಟಾರ್ಚ್ ಲೈಟಿನ ಬೆಳಕಿನ ಸಹಾಯದಿಂದ ಮಠದಹಿತ್ಲು ಶ್ರೀ ವಿಷ್ಣು ದೇವಸ್ಥಾನದ ಬಳಿಯಲ್ಲಿ  ಹುಡುಕಾಡಲಾಗಿ ದೇವಸ್ಥಾನದ ಗೋಡೆ ಬದಿಯಲ್ಲಿ  ಕತ್ತಲೆಯಲ್ಲಿ ಓರ್ವ ವ್ಯಕ್ತಿಯು ಅಡಗಿ ಕುಳಿತುಕೊಂಡಿದ್ದು, ಆತನು ಮುಖವನ್ನು  ಕರವಸ್ತ್ರದಿಂದ ಮರೆ ಮಾಚಿ  ಅಲ್ಲಿಂದ ಓಡಿ ಹೋಗುತ್ತಿದ್ದಾಗ ಆತ ಕೆಳಗೆ ಬಿದ್ದಾಗ ಆ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದಲ್ಲಿ ಆತನು ತೀವ್ರ ಪ್ರತಿರೋಧ ಒಡ್ಡಿದ್ದು, ಆತನನ್ನು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತಡವರಿಸಿಕೊಂಡು ತನ್ನ ಹೆಸರು ಮೂರ್ತಿ  ಪ್ರಾಯ-26  ವರ್ಷ, ತಂದೆ- ಮರ್ಲ ವಾಸ: ಭಾಗೀರಥಿ ನಿಲಯ, ಅಂಬಾಗಿಲು, ಉಪ್ಪುಂದ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದುಆತನ ಇರುವಿಕೆಯ ಬಗ್ಗೆ ಕಾರಣ ಕೇಳಲಾಗಿ ಆತನು ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಆದುದರಿಂದ ಆತನು  ದೇವಸ್ಥಾನದ  ಹತ್ತಿರ ಯಾ ಸಮೀಪದಲ್ಲಿ ಎಲ್ಲಿಯಾದರೂ ಯಾವುದೋ ಸಂಜ್ಞೇಯ ಅಪರಾಧ ಮಾಡುವ ಉದ್ದೇಶದಿಂದ ಕತ್ತಲೆಯಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಇದ್ದಿದ್ದರಿಂದ ಆತನಿಗೆ ಆತನ ತಪ್ಪಿತವನ್ನು ತಿಳಿಯಪಡಿಸಿ ಮುಂದಿನ ಕ್ರಮದ ಬಗ್ಗೆ  ವಶಕ್ಕೆ ಪಡೆದು ಬೈಂದೂರು  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 243/2015 ಕಲಂ  96 (ಬಿ) ಕೆ.ಪಿ ಆಕ್ಟ್‌  ನಂತೆ ಪ್ರಕರಣ ದಾಖಲಿಸಿರುವುದಾಗಿದೆ. 
  • ಕಾರ್ಕಳ: ದಿನಾಂಕ: 07.09.2015 ರಂದು ಮದ್ಯಾಹ್ನ ಸುಮಾರು 13:00 ಗಂಟೆಗೆ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ   ರೆಂಜಾಳ ಮಸೀದಿ ಹತ್ತಿರ ಇರುವ ಹಂಝ ಮತ್ತು ಅದ್ದು ವಾಸದ ಮನೆಯ  ಮುಂಭಾಗ ರಸ್ತೆಯಲ್ಲಿ ಓಮಿನಿ ಕೆ ಎ 19 ಎಂ ಈ 2264 ರಲ್ಲಿ 2 ದೊಡ್ಡ ಮತ್ತು 3 ಚಿಕ್ಕ ದನಗಳನ್ನು ಕಟ್ಟಿ ಹಿಂಸೆ ಆಗುವ ರೀತಿಯಲ್ಲಿ ತುಂಬಿಸಿ ಅಕ್ರಮವಾಗಿ ಕಸಾಯಿ ಖಾನೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದು ಮಾಹಿತಿ ಮೇರೆಗೆ ಪಿರ್ಯಾದಿ ಜೀವನ ಜಯ ಶೆಟ್ಟಿ ಮತ್ತು ಸಂದೇಶ ಪ್ರವೀಣ ಮಹೇಶ ರವರುಗಳು ಹೋಗಿ ನೋಡಲಾಗಿ ಹಂಝ ಮತ್ತು ಅದ್ದು ರವರು ಓಡಿ ಹೋಗಿದ್ದು ಓಮಿನಿಯಲ್ಲಿ 3 ಜನರಿದ್ದು ಓಮಿನಿಯನ್ನು ಅತೀ ವೇಗವಾಗಿ ಮಣ್ಣು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದರಿಂದ ನಿಯಂತ್ರಣ ತಪ್ಪಿ ಓಮಿನಿ ವಾಹನವು ಅಡ್ಡ ಬಿದ್ದಿರುತ್ತದೆ ಸ್ಥಳಕ್ಕೆ ಹೋದಾಗ 3 ಜನರು ತಲವಾರುಗಳನ್ನು ಹಿಡಿದು ಬೆದರಿಸಿ ಕಾಡಿನೊಳಗೆ ಹೋಗಿರುತ್ತಾರೆ. ಓಮಿನಿ ಒಳಗೆ 5 ದನ ಕರುಗಳನ್ನು ಹಿಂಸ್ಮಾತಕವಾಗಿ ಒಂದರ ಮೇಲೊಂದು ಕಾಲನ್ನು ಕಟ್ಟಿ ಹಾಕಿರುತ್ತಾರೆ ಇದನ್ನು ಜನರು ಬಂದು ನೋಡಲಾಗಿ 1 ದನವು ಪ್ರಸಾದ ಜೈನ್ ರವರದಾಗಿದ್ದು ಇನ್ನೊಂದು ರಮಣಿ ಪೂಜಾರ್ತಿರವರಿಗೆ ಸೇರಿದ್ದಾಗಿದ್ದು ಅವರ ಮನೆಯಿಂದ ಕಳವು ಮಾಡಿ ಬಂದಿದ್ದಾಗಿರುತ್ತದೆ. ಹಂಝ ಮತ್ತು ಅದ್ದು ರವರ ಮನೆಯ ಬಳಿ 6 ದನಗಳನ್ನು ಎಲ್ಲಿಂದಲೋ ತಂದು ಕಟ್ಟಿ ಹಾಕಿದ್ದು ಅವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಮಾರಾಟ ಮಾಡಲು ಸಂಗ್ರಹಿಸಿದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 148/2015 ಕಲಂ 8.9.11 ಕ.ಗೋ.ಹ ನಿಷೇಧ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು 379, 279 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ಆರೋಪಿತ 1. ರಿಯಾಜ್ ಕಟಪಾಡಿ, 2. ಸಪ್ರಿನ್ @ ಪಿಂಕಿ, 3. ಆಸ್ಮಾ @ ಮುಮ್ತಾಜ್ 4. ಅಶೋಕ ಆಚಾರಿ ಪ್ರಾಯ: 28 ವರ್ಷ, ತಂದೆ: ರುದ್ರಯ್ಯ ಆಚಾರಿ, ವಾಸ: ವಿಷ್ಣುಮೂರ್ತಿ ನಗರ,  ಕೆಳಾರ್ಕಳಬೆಟ್ಟು ಗ್ರಾಮ, ಉಡುಪಿ ಇವರುಗಳು ಮಹಿಳೆಯರನ್ನು ಬೇರೆ ಬೇರೆ ಕಡೆಗಳಿಂದ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು,  ಈಶ್ವರ ನಗರ 6 ಸಿ ಕ್ರಾಸ್ ಎಂಬಲ್ಲಿರುವ ಸೋಹ ಶೆಹಜಾದ್ ಎಂಬ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಡಿಸಿಐಬಿ  ಪೊಲೀಸ್ ನಿರೀಕ್ಷಕ  ಟಿ.ಆರ್‌ ಜೈಶಂಕರ್‌‌ರವರಿಗೆ ಖಚಿತ ಮಾಹಿತಿ ಬಂದಂತೆ ಅವರ ಸಿಬ್ಬಂದಿಯವರು, ಹಾಗೂ ಠಾಣಾ ಮಹಿಳಾ ಸಿಬ್ಬಂದಿ, ಪಂಚರೊಂದಿಗೆ ಸದ್ರಿ ಸ್ಥಳಕ್ಕೆ 14:30ಗಂಟೆಗೆ ದಾಳಿ ಮಾಡಿ ಆಪಾದಿತರಾದ ಅಶೋಕ ಆಚಾರಿ, ಆಸ್ಮಾ @ ಮುಮ್ತಾಜ್ ಹಾಗೂ ನೊಂದ ಮಹಿಳೆಯವರನ್ನು ವಶಕ್ಕೆ ತೆಗೆದುಕೊಂಡಿದ್ದು, ದಾಳಿ ಸಮಯ ರಿಯಾಜ್ ಕಟಪಾಡಿ, ಸಪ್ರಿನ್ @ ಪಿಂಕಿರವರು ಓಡಿ ಹೋಗಿರುತ್ತಾರೆ. ಆರೋಪಿಗಳಾದ ರಿಯಾಜ್ ಕಟಪಾಡಿ, ಸಪ್ರಿನ್ @ ಪಿಂಕಿ, ಆಸ್ಮಾ @ ಮುಮ್ತಾಜ್ ಹಾಗೂ ಅಶೋಕ ಆಚಾರಿ ಇವರ ವಿರುದ್ದ  ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 180/15 ಕಲಂ 3, 2(ಎ), 4, 5(ಎ) 5 (ಸಿ), 6, ಐಟಿಪಿ ಅ್ಯಕ್ಟ್‌, ಮತ್ತು  ಕಲಂ 370(3) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ಪಿರ್ಯಾದಿ ಒಲ್ಗಾ ರಾಡ್ರಿಗಸ್‌, ಗಂಡ: ಚಾರ್ಲ್ಸ್ ರಾಡ್ರಿಗಸ್‌, ವಾಸ: Cherish, House No 5-269, V.P Nagara, ಮಣಿಪಾಲ    ಇವರ ಮನೆಯ ಕೆಲಸದಾಳು ಜಯಂತಿರವರು ದಿನಾಂಕ 04-09-15ರಂದು ಬೆಳಿಗ್ಗೆ 10:00ಗಂಟೆಯಿಂದ 18:30ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಬೆಡ್‌‌ರೂಮ್‌‌ನ ಸೇಫ್‌ ಲಾಕರ್‌‌ನಲ್ಲಿಟ್ಟಿದ್ದ 4,00,000/-ರೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ  ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 181/15 ಕಲಂ 381 ಐಪಿಸಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: