Monday, September 07, 2015

Daily Crime Reports as on 07/09/2015 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಬಸವರಾಜು (57), ತಂದೆ: ದಿ. ಕರಿಯ ಮರಕಲ, ವಾಸ: ಸೀತಾ ನಿಲಯ, ಮುದ್ದುಮನೆ, ಶಿರೂರು 33, ಉಡುಪಿ ತಾಲೂಕು ಇವರ ತಂಗಿ ಸಾಕು ಸುವರ್ಣ (45) ಇವರು ಕೊರ್ಗಿ ಗ್ರಾಮದ ಹೊಸಮಠ ನಿವಾಸಿ ರಾಮಣ್ಣ ಶೆಟ್ಟಿ ಪಿ.ಹೆಚ್‌ ರವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದು ದಿನಾಂಕ 07/09/2015 ರಂದು ಬೆಳಿಗ್ಗೆ 06:00 ಗಂಟೆಗೆ ರಾಮಣ್ಣ ಶೆಟ್ಟಿಯವರ ಮನೆಯ ಹಿಂಬದಿ ಆವರಣ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2015  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಟ್ಕಾ ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 07/09/2015 ರಂದು ಎಂ.ಮಂಜುನಾಥ ಶೆಟ್ಟಿ, ಪೊಲೀಸ್‌ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಇರಿಗೆ ದೊರೆತ ಖಚಿತ ಮಾಹಿತಿಯಂತೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕೋಟೇಶ್ವರ ವೈ ಜಂಕ್ಷನ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತರಾದ 1) ರವಿ ಪೂಜಾರಿ (27), ತಂದೆ; ದಿ. ಕೂಸಪ್ಪ ಪೂಜಾರಿ, ವಾಸ: ರಾಘವೇಂದ್ರ ನಿಲಯ, ಪೆಟ್ರೋಲ್‌ ಬಂಕ್‌ ಬಳಿ, ಕೋಟೇಶ್ವರ, ಕುಂದಾಪುರ ತಾಲೂಕು, 2) ಗಣೇಶ ಪೂಜಾರಿ (42), ತಂದೆ: ನಾರಾಯಣ ಪೂಜಾರಿ, ವಾಸ: ಲಕ್ಷ್ಮಿ ನಿಲಯ, ಹಳೆ ಅಳಿವೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು 1/- ರೂಪಾಯಿಗೆ 70/- ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 11:35 ಗಂಟೆಗೆ ದಾಳಿ ನಡೆಸಿ, ಆರೋಪಿತರನ್ನು ದಸ್ತಗಿರಿ ಮಾಡಿದ್ದು 1 ನೇ ಆರೋಪಿತ ರವಿ ಪೂಜಾರಿಯು ತಾನು ಮಟ್ಕಾ-ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್‌ ಆದ 2ನೇ ಆರೋಪಿತ ಗಣೇಶ ಪೂಜಾರಿಗೆ ನೀಡಿ ಕಮಿಷನ್ ಪಡೆಯುತ್ತಿರುವುದಾಗಿ ತಿಳಿಸಿದ್ದು, ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ಬಾಲ್ ಪೆನ್ನು-1, ನಗದು ರೂಪಾಯಿ 725/-, ಮಟ್ಕಾ ನಂಬರ್‌ ಬರೆದ ಚೀಟಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 302/2015 ಕಲಂ:78 (1) (3) ಕರ್ನಾಟಕ ಪೊಲೀಸ್‌ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ,    

No comments: