Sunday, September 06, 2015

Daily Crime Reports As on 06/09/2015 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಶಿರ್ವಾ: ಪಿರ್ಯಾದಿದಾರರಾದ ರಮಣಿ ಮೆಂಡೋನ್ಸಾ,(35), ಗಂಡ:ವಿಕ್ಟರ್‌ಮೆಂಡೋನ್ಸಾ, ವಾಸ: ಮಂಚೆಟ್ಟು ಮನೆ, ಗಣಪನ ಕಟ್ಟೆಯ ಹತ್ತಿರ, ಮೂಡುಬೆಳ್ಳೆ ಅಂಚೆ, ಕಟ್ಟಿಂಗೇರಿ ಗ್ರಾಮ, ಉಡುಪಿ ಇವರ ಗಂಡ ವಿಕ್ಟರ್ ಮೆಂಡೋನ್ಸಾ (55) ಎಂಬುವವರು ದಿನಾಂಕ 05/09/2015 ರಂದು ರಾತ್ರಿ 08:00 ಗಂಟೆಗೆ ಮನೆಗೆ ಬಂದವರು ಬಟ್ಟೆ ಬದಲಾಯಿಸಲು ಮನೆಯಿಂದ ಹೋದವರು ಸುಮಾರು ಹೊತ್ತಾದರೂ ಬಾರದೇ ಇರುವುದನ್ನು ಕಂಡು ರಾತ್ರಿ 11:00 ಗಂಟೆಗೆ ರಮಣಿ ಮೆಂಡೋನ್ಸಾ ರವರು ಹೊರಗೆ ಬಂದು ಹುಡುಕಾಡಿದಾಗ ವಿಕ್ಟರ್ ಮೆಂಡೋನ್ಸಾ ರವರು ಮನೆಯ ಎದುರಿನ ತಗಡು ಚಪ್ಪರದ ಪಕ್ಕಾಸಿಗೆ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದು, ಕೂಡಲೇ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: