Sunday, September 06, 2015

Daily Crime Reports As on 06/09/2015 at 17:00 Hrs

ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ವಿನಯ್ ಕರ್ಕೇರ (37), ತಂದೆ: ಸುಂದರ ಕರ್ಕೇರ ವಾಸ: ಕರ್ಕೇರ ನಿವಾಸ ಬಾಪು ತೋಟ, ಮಲ್ಪೆ ಕೊಡವೂರು ಉಡುಪಿ ಇವರು ದಿನಾಂಕ 09/09/2015 ರಂದು ಬೆಳಿಗ್ಗೆ 8:30 ಗಂಟೆಗೆ ತನ್ನ ತಮ್ಮನ ಕಾರು ನಂಬ್ರ ಕೆಎ 20 ಎನ್ 7258 ನೇದರಲ್ಲಿ ಸಂತೆಕಟ್ಟೆ ಕಡೆಯಿಂದ ಅಂಬಾಗಿಲು ಕಡೆಗೆ ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಯಿರಾಮ್ ಪ್ಲೋರಿಂಗ್ ಸಮೀಪ ತಲುಪುವಾಗ ಹಿಂದಿನಿಂದ ಬೊಲೆರೋ ವಾಹನದ ಚಾಲಕ ಪ್ರಕಾಶ್ ಚೌಹಾನ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುತ್ತದೆ. ಡಿಕ್ಕಿ ಹೊಡೆದ ಮಹಿಂದ್ರ ಬೊಲೆರೋ ನಂಬ್ರ MH 02 TCB 248 ಆಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ: ಪಿರ್ಯಾದಿದಾರರಾದ ತೋಮಸ್ ಮಾರ್ಟಿಸ್ (62) ,ತಂದೆ: ದಿ. ಜೋಸೆಫ್ ಮಾರ್ಟಿಸ್, ವಾಸ: ಮೇಲ್ಮನೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ಗ್ರೆಗೋರಿ ಮಾರ್ಟಿನ್ (55) ಎಂಬುವವರು ದಿನಾಂಕ 05/09/2015 ರಂದು 11:30 ಗಂಟೆಯಿಂದ ದಿನಾಂಕ 06/09/2015 ರಂದು ಬೆಳಗ್ಗೆ 08:00 ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆಯ ಸಮೀಪದ ಹಾಡಿಯಲ್ಲಿ ಕುಂಟಾಲು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 29/2015 ಕಲಂ: 174 ಸಿ.ಆರ್. ಪಿ .ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಅಮಾಸೆಬೈಲು: ಪಿರ್ಯಾದಿದಾರರಾದ ಶಂಕರ ಆಚಾರಿ (43), ತಂದೆ: ಆನಂದ ಆಚಾರಿ, ವಾಸ: ಕೆಲ, ತಾರಿಕೋಡ್ಲು ಅಮಾಸೆಬೈಲು ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣ ರಾಮಕೃಷ್ಣ ಆಚಾರಿ (45) ಎಂಬುವವರು ದಿನಾಂಕ 05/09/2015 ರಂದು ಸಂಜೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಹಂಚಿಕಟ್ಟೆಯ ಅಶೋಕ ಶೆಟ್ಟಿಯವರ ಅಂಗಡಿಯ ಹತ್ತಿರ ಮಲಗಿಕೊಂಡವರು ದಿನಾಂಕ 05/09/2015  ರಂದು  ಸಂಜೆಯಿಂದ ದಿನಾಂಕ 06/09/2015 ರ ಬೆಳಿಗ್ಗೆ 07:00 ಗಂಟೆಯ ಮದ್ಯಾವಧಿಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣ
  • ಕುಂದಾಪುರ: ದಿನಾಂಕ 06/09/2015 ರಂದು ಬೆಳಿಗ್ಗೆ 05:00 ಗಂಟೆಗೆ ನಾಸೀರ್ ಹುಸೇನ್ ಪಿಎಸ್ಐ ಕುಂದಾಪುರ ಪೊಲೀಸ್ ಠಾಣೆ ಇವರಿಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಜುಲ್ಫಾ ಸ್ಟೋರ್‌ ಬಳಿ ನಾಲ್ಕು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಮಾರುತಿ ಓಮಿನಿ ಕಾರು ನಂಬ್ರ KA 20 A 2606 ನೇದರಲ್ಲಿ ತುಂಬಿಸಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರ ಜೊತೆ ಬೆಳಿಗ್ಗೆ 05:30 ಗಂಟೆಗೆ ದಾಳಿ ನಡೆಸಿದಾಗ ಆಪಾದಿತರಾದ ಕಂಡ್ಲೂರಿನ ಜಾಕೀರ್ ಹುಸೇನ್ ಹಾಗೂ ಇನ್ನೊಬ್ಬ ವ್ಯಕ್ತಿ ಓಡಿ ತಪ್ಪಿಸಿಕೊಂಡಿದ್ದು ಆಪಾದಿತರು 4 ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು, ಅವುಗಳನ್ನು ಓಮಿನಿ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿದ್ದು, ಯಾವುದೇ ಪರವಾನಿಗೆ ಇಲ್ಲದೆ ಸದ್ರಿ ಜಾನುವಾರುಗಳನ್ನು ಕಡಿದು ಮಾಂಸ ಮಾಡಲು ಸಾಗಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು 1) ಕಂದು ಬಣ್ಣದ ಹೆಣ್ಣು ಕರು -1,  2) ಕಂದು ಮಿಶ್ರೀತ ಕಪ್ಪು ಬಣ್ಣದ ದನ -1,3) ಕಪ್ಪು ಬಣ್ಣದ ಗಂಡು ಕರು -2  ಒಟ್ಟು 4 ಜಾನುವಾರುಗಳನ್ನು ಹಾಗೂ ಓಮಿನಿ ಕಾರು ನಂಬ್ರ KA 20 A 2606 ನೇದನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 301/2015 ಕಲಂ: 379 ಐಪಿಸಿ, ಕಲಂ: 4, 5, 8, 11 ಕರ್ನಾಟಕ ಗೋಹತ್ಯಾ ನಿಷೇದ ಕಾಯ್ದೆ 1964 ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: