Sunday, September 06, 2015

Daily Crime Reports As on 06/09/2015 at 07:00 Hrsಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಪ್ರವೀಣರವರು ದಿನಾಂಕ:04/09/2015 ರಂದು ಕುಕ್ಕಿಕಟ್ಟೆ ಬಳಿ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 05:30 ಗಂಟೆ ಸಮಯದಲ್ಲಿ ಕೆಎ-20 ಆರ್-8140 ನೇ ಮೋಟಾರ್ ಸೈಕಲ್ ಸವಾರ ಪ್ರಜ್ವಲ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 98/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ದಿನಾಂಕ 04/09/2015 ರಂದು ಸೀಮಾ ನಾಯಕ್‌ ರವರು ಬೆಳಿಗ್ಗೆ 08.00 ಗಂಟೆ ಸಮಯಕ್ಕೆ ಸೈಂಟ್‌ ಸಿಸಿಲಿ ಶಾಲೆಗೆ ಒಮಿನಿ ಕಾರ್ ನಂಬ್ರ ಕೆಎ20 ಸಿ 1259 ನೇದರಲ್ಲಿ ಹೋಗಿದ್ದು ಸದ್ರಿ ಶಾಲೆಯ  ದ್ವಜ ಸ್ಥಂಭದ ಎದುರು ಶಾಲೆಯ ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿರುವಾಗ 08.15 ಗಂಟೆ ಸಮಯಕ್ಕೆ  ಆಯತಪ್ಪಿ ಬಿದ್ದಾಗ ಹಿಂದಿನಿಂದ ಕೆಎ-20 ಬಿ-9267 ನೇ ಒಮಿನಿ ಕಾರು ಚಾಲಕ ಬಿ.ಕೆ ರಾಮಯ್ಯನವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಲಕಾಲಿನ ಮೇಲೆ ಚಲಾಯಿಸಿದ ಪರಿಣಾಮ ರಕ್ತಗಾಯವಾಗಿರುತ್ತದೆ. ಸದ್ರಿ ಅಪಘಾತಕ್ಕೆ ಕೆಎ-20 ಬಿ-9267 ನೇ ಒಮಿನಿ ಕಾರು ಚಾಲಕ ಬಿ,ಕೆ ರಾಮಯ್ಯನವರ  ಅತೀವೇಗ ಹಾಗೂ ಅಜಾಗರೂಕತೆಯ ಚಾಲನೇಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯಾದಿ ಕೆ.ವಿಶ್ವೇಶ್ವರ ಹೊಳ್ಳ ಇವರು ದಿನಾಂಕ:05/09/2015 ರಂದು ಮಧ್ಯಾಹ್ನ ಸುಮಾರು 11:00 ಗಂಟೆ ಸಮಯಕ್ಕೆ ಅವರ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಸಾಸ್ತಾನ ಕಡೆಯಿಂದ  ಸಾಲಿಗ್ರಾಮ ಕಡೆಗೆ ರಾ.ಹೆ-66 ರಲ್ಲಿ  ಬರುವಾಗ ಉಡುಪಿ ತಾಲೂಕು ಮೂಡಹಡು ಗ್ರಾಮದ ಚೇಂಪಿ ಹಾಲು ಡೈರಿ ಹತ್ತಿರ ಸಾಲಿಗ್ರಾಮ ಕಡೆಯಿಂದ ಸಾಸ್ತಾನ ಕಡೆಗೆ  ಕೆ.ಎ:20 ಝಡ್:5483 ನೇ ನಂಬ್ರದ ಆಲ್ಟೋ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾ.ಹೆ-66 ರ ರಸ್ತೆಯ ಬದಿಯಲ್ಲಿನ ಮೋರಿಗೆ  ಢಿಕ್ಕಿ ಹೊಡೆದ  ಪರಿಣಾಮ ಚಾಲಕ ಮಂಜುನಾಥ ಕೆದ್ಲಾಯರವರ ಎದೆಯ ಭಾಗಕ್ಕೆ ಒಳ ಜಖಂ ನೋವು, ಕಾರಿನಲ್ಲಿದ್ದ ಅವರ  ಹೆಂಡತಿ ಜ್ಯೋತಿ(40) ರವರ ಬಲಕಾಲಿನ ಗಂಟಿನ ಕೆಳಗೆ ಮೂಳೆ ಮುರಿತದ ಗಾಯ, ಸೊಂಟದಲ್ಲಿ ರಕ್ತಗಾಯ ಹಾಗೂ ಅವರ ಮಗ ವಾಗೀಶ(13) ರವರ ಮುಖಕ್ಕೆ, ಸೊಂಟಕ್ಕೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 200/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ವಂಚನೆ ಪ್ರಕರಣ

  • ಹೆಬ್ರಿ: ಪಿರ್ಯಾದಿ ಜೊಸ್ ತಾತ್ಯಾಮ್ಕುಲಮ್ ಇವರು ಮಂಗಳೂರು ರಬ್ಬರ್ ಮಾರ್ಕೆಟಿಂಗ್ ಮತ್ತು ಪ್ರೋಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ನೊಂದಾಯಿತ ಕಛೇರಿ) ನ ಚೇರ್ ಮ್ಯಾನ್ ಆಗಿದ್ದು. ಸದರಿ ಸಂಸ್ಥೆಯ ಕಾರ್ಯನಿರ್ವಹಣೆಯು 3 ರಾಜ್ಯ ಅಂದರೆ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುತ್ತದೆ. ಸದರಿ ಸಂಸ್ಥೆಯ ಮುಖ್ಯ ಉದ್ದೇಶ ರಬ್ಬರ್ ಬೆಳೆಗಾರರಿಂದ ರಬ್ಬರನ್ನು ಉತ್ತಮ ಬೆಲೆಗೆ ಖರೀದಿಸುವುದು. ಸದರಿ ಸಂಸ್ಥೆಯಲ್ಲಿ ಮನೋಜ್ ಕೆ.ವಿ ಎಂಬವರು ಸುಮಾರು 8 ವರ್ಷಗಳಿಂದ ಉದ್ಯೋಗಿಯಾಗಿರುತ್ತಾರೆ. ಅವರನ್ನು ದಿನಾಂಕ: 12/07/2010 ರಂದು ಹೆಬ್ರಿ ಮತ್ತು ಬಜಗೋಳಿ ಬ್ರಾಂಜ್ ನ ಮ್ಯಾನೇಜರ್ ಆಗಿ ಆಯ್ಕೆ ಮಾಡಿದ್ದು, ಸದರಿ ಸಂಸ್ಥೆಯು ಆರೋಪಿ ಮನೋಜ್ ಕೆ.ವಿ ರವರಿಗೆ ದಿನ ನಿತ್ಯದ ಕೆಲಸದ ಮತ್ತು ವ್ಯಾಪಾರ-ಕಾರ್ಯದ ಪಾರು ಪತ್ರ ಹೆಬ್ರಿ ಶಾಖೆಗೆ ವಹಿಸಿದ್ದು, ಅದರಂತೆ ರಬ್ಬರ್ ಶೀಟ್ ಖರೀದಿಯ ಅಧಿಕಾರದಂತೆ ರಬ್ಬರ್ ಬೆಳೆಗಾರರ ರಬ್ಬರ್ ಶೀಟ್ ನ ಖರೀದಿ ಮತ್ತು ಕೊಡಬೇಕಾದ ಹಣ ಮತ್ತು ದಿನ ನಿತ್ಯದ ಅಕೌಂಟ್ ನ್ನು ರಿಜಿಸ್ಟರ್ ಮಾಡಿ ಅದರ ಮಾಹಿತಿಯನ್ನು ಪ್ರಧಾನ ಕಛೇರಿಗೆ ನೀಡುವುದಾಗಿತ್ತು. 2015 ಜೂನ್ ತಿಂಗಳಲ್ಲಿ ಹೆಬ್ರಿ ಬ್ರಾಂಜ್ ನ ಮಾನೇಜರ್ ಆದ ಆರೋಪಿಯು ಸದರಿ ಸಂಸ್ಥೆಗೆ ನೀಡಿದ ವರದಿಯು ತೃಪ್ತಿಕರವಾಗದ ಕಾರಣ ಸದರಿ ಸಂಸ್ಥೆ ಯ ಲೆಕ್ಕ ಪರಿಶೋಧಕರು ಮತ್ತು ಚಾರ್ಟೆಡ್ ಅಕೌಂಟ್ ರು ಖುದ್ದಾಗಿ ಹೆಬ್ರಿ ಬ್ರಾಂಚ್‌ ಗೆ ಭೇಟಿ ನೀಡಿ ದಿನಾಂಕ; 01/04/2014 ರಿಂದ ದಿನಾಂಕ: 05/07/2015 ರವರೆಗಿನ ಖರೀದಿ ರಿಜಿಸ್ಟರ್, ಮಾರಾಟ ರಿಜಿಸ್ಟರ್, ಸಂಗ್ರಹ ರಿಜಿಸ್ಟರ್, ಖರೀದಿ ಬಿಲ್ಲು, ಮಾರಾಟ ಇನ್ ವೈಸ್, ಮಾರಾಟ ತೆರಿಗೆ ಇತ್ಯಾದಿಗಳ ವಿಸ್ತಾರವಾದ ವರದಿಯನ್ನು ದಿನಾಂಕ: 20/07/2015 ರಂದು ಪ್ರಧಾನ ನಿರ್ವಾಹಕರಿಗೆ ನೀಡಿದ್ದು, ಅವರ ಅಭಿಪ್ರಾಯದಂತೆ ಆರೋಪಿಯು ಸದರಿ ಸಂಸ್ಥೆಗೆ ಮೋಸ ಮಾಡುವ ಉದೇಶದಿಂದ ಸುಮಾರು 1,26,74,294/-ರೂ ಗಳನ್ನು ದುರುಪಯೋಗ ಮಾಡಿ ಸದರಿ ಸಂಸ್ಥೆಗೆ ಮೋಸ ಮಾಡಿದ್ದಲ್ಲದೇ ಆರೋಪಿಯು ಖರೀದಿಸಿದ ರಬ್ಬರ್ ಸಂಗ್ರಹಗಳನ್ನು ಮೋಸದಿಂದ ತೆಗೆದು ಅದನ್ನು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಗೌಪ್ಯವಾದ ಸ್ಥಳದಲ್ಲಿ ಮರೆ ಮಾಚಿ ಇಟ್ಟು ಸಂಸ್ಥೆಗೆ ವಂಚನೆ ಮಾಡಿರುತ್ತಾನೆ. ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 81/15 ಕಲಂ: 403, 407, 417, 420, 424, 468 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: