Thursday, September 03, 2015

Daily Crime Reports As on 03/09/2015 at 07:00 Hrs

ಜುಗಾರಿ ಪ್ರಕರಣ
  • ಗಂಗೊಳ್ಳಿ: ದಿನಾಂಕ 02/09/2015 ರಂದು 16:45 ಗಂಟೆಗೆ ಸುಬ್ಬಣ್ಣ.ಬಿ ಪೊಲೀಸ್ ಉಪನಿರೀಕ್ಷಕರು ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ಗಂಗೊಳ್ಳಿ ಗ್ರಾಮದ ತಾರಿ ಮನೆ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ತಮ್ಮ ಸ್ವಂತ ಲಾಭಕ್ಕೋಸ್ಕರ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ  ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ  1) ರಾಜೇಶ್ ಖಾರ್ವಿ, 2) ಸುಧಾಕರ ಖಾರ್ವಿ, 3) ಸೂರ್ಯ ಖಾರ್ವಿ, 4) ಗಣೇಶ ಖಾರ್ವಿ, 5) ಸುರೇಶ್ ಖಾರ್ವಿ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಅವರು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ  1,300/-, ವಿವಿಧ ಜಾತಿಯ ಇಸ್ಪೀಟ್ ಎಲೆಗಳು 52 ಹಾಗೂ ಹಳೆಯ ದಿನ ಪತ್ರಿಕೆ ಹಾಳೆ 1 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 113/2015 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ದಿನಾಂಕ 02/09/2015 ರಂದು 15:00 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಭಾವದಬೆಟ್ಟು ಎಂಬಲ್ಲಿಯ ನಿವಾಸಿ ಪಿರ್ಯಾದಿದಾರರಾದ  ಜಯರಾಮ (24), ತಂದೆ: ಕೃಷ್ಣಯ್ಯ ಆಚಾರ್ಯ, ವಾಸ: ಕಾಳಿಕಾಂಬ ನಿಲಯ, ಭಾವದಬೆಟ್ಟು ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ತಾಯಿ ಶ್ರೀಮತಿ ಪ್ರೇಮಾ (65) ಎಂಬುವವರು ತಮ್ಮ ಬದಿ ಮನೆಯ ದಯಾನಂದ ಮೂಲ್ಯರವರ ಗುಡ್ಡಕ್ಕೆ ಹೋಗಿ ಸೊಪ್ಪು ಕಡಿಯುವಾಗ ಯಾವುದೋ ವಿಷ ಜಂತು ಕಚ್ಚಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: