Thursday, September 03, 2015

Daily Crime Reports As on 03/09/2015 at 17:00 Hrs

ಅಪಫಾತ ಪ್ರಕರಣ
  • ಹಿರಿಯಡ್ಕ: ದಿನಾಂಕ 02/09/15 ರಂದು ರಾತ್ರಿ  09:00 ಗಂಟೆಗೆ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕದ ಕಾಮತ್‌ ನರ್ಸಿಂಗ್‌ ಹೋಂ ಬಳಿ, ಪಿರ್ಯಾದಿ ಗಣೇಶ ನಾಯ್ಕ ಇವರು ತನ್ನ ಬೈಕಿನಲ್ಲಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ  ಹೋಗುತ್ತಿರುವಾಗ ಅವರ ಎದುರು ಬದಿಯಿಂದ ಅಂದರೆ ಹಿರಿಯಡ್ಕ ಕಡೆಯಿಂದ ಕೆಎ 20 ಇಬಿ 6651 ನೇ ಹೊಂಡಾ ಸ್ಕೂಟರ್‌ನ್ನು ಅದರ ಸವಾರ,  ಆರೋಪಿ ದಯಾನಂದ ಶೆಟ್ಟಿ ಎಂಬವರು, ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಟೆಂಪೋವನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲ ಬದಿಗೆ ಬಂದು ಪಿರ್ಯಾದುದಾರರ ಮುಂದಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಅವರ ಮಿತ್ರ ರಾಕೇಶ್‌ ನಾಯ್ಕ ರವರು ಚಲಾಯಿಸುತ್ತಿದ್ದ ಕೆಎ 20 ಇಎಫ್‌ 0508 ನೇ  ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಾಕೇಶ್‌ ರವರು ಬೈಕ್‌ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ಹಾಗೂ ಎಡ ಕಾಲಿಗೆ ಗಂಭೀರ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/15  ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 ಅಸ್ವಾಭಾವಿಕ ಮರಣ ಪ್ರಕರಣ 
 
  • ಉಡುಪಿ: ದಿನಾಂಕ: 02/09/2015 ರಂದು ಬ್ರಂದಾವನ ಕಾಂಪ್ಲೆಕ್ಸ್‌ ನಲ್ಲಿರುವ ಫಿರ್ಯಾದಿ ಎಸ್ಉಮ್ಮರ್‌‌ ಇವರ ಬಾಬ್ತು Deco Pay ಅಂಗಡಿಯನ್ನು  ಸಂಜೆ 19:00ಗಂಟೆಗೆ ಅಂಗಡಿ ಬಾಗಿಲು ಹಾಕಿ ಹೋಗಿದ್ದು  ದಿನಾಂಕ: 03/09/2015ರಂದು ಬೆಳಿಗ್ಗೆ 9:00ಗಂಟೆಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ  ಬಾಗಿಲ ಬಳಿ ಓರ್ವ  ಸುಮಾರು 35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು ಬಂದು ಅದರ ಬಳಿ ಹೋಗಿ ನೋಡಲಾಗಿ ಆತನು ಮೃತ ಪಟ್ಟಿದ್ದು ಮೃತನು ಯಾವುದೋ ಖಾಯಿಲೆಯಿಂದ  ಅಥವಾ ಇನ್ನಾವುದೋ ಕಾರಣದಿಂದ ಮಲಗಿದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ 48/2015 ಕಲಂ:174 ಸಿ.ಆರ್‌.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: