Wednesday, September 02, 2015

Daily Crime Reports As on 02/09/2015 at 07:00 Hrs

ಅಪಘಾತ ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿದಾರರಾದ ಸುರೇಶ ಶೆಟ್ಟಿ (52), ತಂದೆ: ಶಿವಣ್ಣ ಶೆಟ್ಟಿ, ವಾಸ: ಸೂರಲು ಮನೆ ಮಡಾಮಕ್ಕಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 01/09/2015 ರಂದು ಮದ್ಯಾಹ್ಯ 15:45 ಗಂಟೆಗೆ ತನ್ನ ಪರಿಚಯದ ಭುಜಂಗ ಶೆಟ್ಟಿ ಎಂಬುವವರ ಮೋಟಾರ್‌ ಸೈಕಲ್ ನಂಬ್ರ ಕೆಎ 20 ಎಕ್ಸ್ 8626 ನೇದರಲ್ಲಿ ಹಿಂಬದಿ ಸವಾರರಾಗಿ ಹಾಲಾಡಿ-ಅಮಾಸೆಬೈಲು ರಸ್ತೆಯಲ್ಲಿ  ತನ್ನ ಅಂಗಡಿಗೆ ಹೋಗುತ್ತಿರುವಾಗ ಅಮಾಸೆಬೈಲು ಕಡೆಯಿಂದ ಕೆಎ 20 ಇಡಿ 8941 ನೇ ಮೋಟಾರ್‌ ಸೈಕಲ್ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರೇಶ ಶೆಟ್ಟಿ ಯವರು ಹೋಗುತ್ತಿದ್ದ ಮೋಟಾರ್‌ ಸೈಕಲ್ಲಿಗೆ ಡಿಕ್ಕಿ ಹೊಡೆದಿದ್ದು ಇದರ  ಪರಿಣಾಮ ಅವರು ಹಾಗೂ ಸವಾರರು  ಮೋಟಾರ್‌ ಸೈಕಲ್ ಸಮೇತ ರಸ್ತೆಗೆ ಬಿದಿದ್ದು ಇದರ ಪರಿಣಾಮ , ಸುರೇಶ ಶೆಟ್ಟಿ ಯವರಿಗೆ ಎಡ ಕಾಲು, ಬಲ ಕೈ ಬೆರಳಿಗೆ ರಕ್ತ ಗಾಯವಾಗಿರುತ್ತದೆ. ಅಲ್ಲದೆ ಸೈಕಲ್ ಸವಾರ ಭುಜಂಗ ಶೆಟ್ಟಿಯವರಿಗೆ ತಲೆಯ ಬಲ ಬದಿ ಹಾಗೂ ಕಣ್ಣುಗಳ ಬದಿ ಮತ್ತು ಕೈಗಳಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2015 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  •  ಉಡುಪಿ: ಪಿರ್ಯಾದಿದಾರರಾದ ರಾಘವೇಂದ್ರ (32), ತಂದೆ: ಗೋಪಾಲ ಕೋಟ್ಯಾನ್‌, ವಾಸ: ನಂದಿನುತೆ ಗುಳಿಬೆಟ್ಟು ಮೇಲ್‌ ತೋನ್ಸೆ ಗ್ರಾಮ ಉಡುಪಿ ಇವರ ತಂದೆ ಗೋಪಾಲ್‌ ಕೋಟ್ಯಾನ್‌(60) ಇವರು ದಿನಾಂಕ 01/09/2015 ರಂದು ಕಲ್ಸಂಕ ಬಳಿಯಿರುವ ದುರ್ಗಾ ಪ್ರಸಾದ್‌ ಹೋಟೇಲಿನ ಹತ್ತಿರದಲ್ಲಿರುವ ರಸ್ತೆಯ ಚರಂಡಿಯ ಬಳಿ 11:00 ಗಂಟೆಗೆ ಕುಳಿತುಕೊಂಡಿದ್ದು ಸಂಜೆ 4:00 ಗಂಟೆಗೆ ಯಾರೋ ದಾರಿಹೋಕರು ನೋಡುವಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಕಾಪು: ದಿನಾಂಕ 01/09/2015 ರಂದು ಸಂಜೆ 6:45 ಗಂಟೆಗೆ ಉಡುಪಿ ತಾಲೂಕು ಇನ್ನಂಜೆ ಗ್ರಾಮದ ಕಲ್ಯಾಲು ಮಂಡೇಡಿ ರೈಲ್ವೇ ಟ್ರಾಕ್ ನಲ್ಲಿ ಸುಮಾರು 40 ರಿಂದ 45 ವರ್ಷದ ಗಂಡಸಿನ ಮೃತ ದೇಹ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರಾದ ದಿವೇಶ್ ಶಟ್ಟಿ (32), ತಂದೆ: ಶಿವ ಶೆಟ್ಟಿ, ವಾಸ: ಕಲ್ಯಾಲು ಇನ್ನಂಜೆ  ಗ್ರಾಮ ಉಡುಪಿ ಇವರು 19:00 ಗಂಟೆಗೆ ಸ್ಥಳಕ್ಕೆ ಹೋದಾಗ ಅಪರಿಚಿತ ಗಂಡಸಿನ ಮೃತ ದೇಹವು ಪೂರ್ಣ ಜಖಂಗೊಂಡ ಸ್ಥಿತಿಯಲ್ಲಿ ರೈಲ್ವೇ ಟ್ರಾಕ್ ಮದ್ಯದಲ್ಲಿ ಬಿದ್ದುಕೊಂಡಿದ್ದು ಮೃತ ದೇಹದ ಮೇಲೆ ತಿಳಿ ಹಳದಿ ಬಣ್ಣದ ಗೆರೆಗಳಿರುವ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಇದ್ದು ಬಲ ಕೈಯಲ್ಲಿ  ಅಂಜನೇಯ ದೇವರ ಹಚ್ಚೆ ಗುರುತು ಮತ್ತು ಶಶಿ ಎಂದು ಬರೆದಿರುವ  ಹಚ್ಚೆ ಗುರುತು ಇರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಟ್ಕಾ ಜುಗಾರಿ ಪ್ರಕರಣ
  • ಬೈಂದೂರು: ಟಿ.ಅರ್‌ ಜೈಶಂಕರ್‌ ಪೊಲೀಸ್‌ ನಿರೀಕ್ಷಕರು ಡಿ.ಸಿ.ಐ.ಬಿ ಉಡುಪಿ ಇವರಿಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ನಾವುಂದ ಗೋಪಾಲರವರ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಾರೆ ಎಂದು ಬಂದ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತಲುಪಿ ಮಟ್ಕಾ ಜುಗಾರಿ ಆಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು 16:30 ಗಂಟೆಗೆ ದಾಳಿ ನಡೆಸಿದಾಗ ಜುಗಾರಿ ಕಟ್ಟುತ್ತಿದ್ದವರು ಓಡಿ ಹೋಗಿದ್ದು ಚೀಟಿ ಬರೆದು ಹಣ ಸಂಗ್ರಹಿಸುತ್ತಿದ್ದವನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನು ಪ್ರಕಾಶ್‌ ದೇವಾಡಿಗ (33), ತಂದೆ: ರಾಮ ದೇವಾಡಿಗ, ವಾಸ: ಎಂ.ಜಿ ರಸ್ತೆ ನಾವುಂದ ಗ್ರಾಮ ಕುಂದಾಪುರ ತಾಲೂಕು ಆಗಿದ್ದು ತನ್ನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದು ಆರೋಪಿಯನ್ನು ದಸ್ತಗಿರಿ ಮಾಡಿ ಆತನು ಮಟ್ಕಾ ಜುಗಾರಿಯಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂಪಾಯಿ 6,100/-, ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 239/2015 ಕಲಂ: 78(3) ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 


No comments: