Tuesday, September 01, 2015

Daily Crime Reports As on 01/09/2015 at 19:30 Hrs


ಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 25/07/2014 ರಂದು ಪಿರ್ಯಾದಿದಾರರಾದ ಚಂದ್ರಶೇಖರ (35)ತಂದೆ:ಕೃಷ್ಣ ನಾಯ್ಕ ,ವಾಸ: ಸಾಕೀನ್‌ ಉಮ್ಮಚ್ಚಗಿ ಯಲ್ಲಾಪುರ ತಾಲೂಕು ಉತ್ತರ ಕನ್ನಡ ಇವರ ಪರಿಚಯದವರಾದ ಆರೋಪಿತರಾದ 1) ಗೋವಿಂದ ವಿ (40), ತಂದೆ: ವೆಂಕಟ ಮೊಗೇರ ವಾಸ: ಅಂಗಡಿದಾರುಮನೆ ಕಳವಾಡಿ ಬೈಂದೂರು, 2) ಸುಬ್ಬಿ  (60) ಕೋಂ ವೆಂಕಟ ಮೊಗೇರ ವಾಸ:ಅಂಗಡಿದಾರುಮನೆ ಕಳವಾಡಿ ಬೈಂದೂರು, 3) ನಾಗರತ್ನ ಗಣೇಶ್‌ (35)ವಾಸ: ಅಂಗಡಿದಾರು ಮನೆ ಕಳವಾಡಿ ಬೈಂದೂರು, 4) ಲಕ್ಷ್ಮಣ ವೆಂಕಟ ಮೊಗೇರ (26) ವಾಸ: ಅಂಗಡಿದಾರುಮನೆ ಕಳವಾಡಿ ಬೈಂದೂರು ಇವರುಗಳು ಚಂದ್ರ ಶೇಖರ ರವರಲ್ಲಿ ತಾವು ಒಂದು ಗಾರ್ಮೆಂಟ್‌ ಪ್ಯಾಕ್ಟರಿ ಆರಂಭ ಮಾಡುವುದಾಗಿ ಹೇಳಿ ಕೈಗಡವಾಗಿ ಹಣವನ್ನು ನೀಡುವಂತೆ ಕೇಳಿದ್ದು ಆರೋಪಿತರಿಗೆ ವಚನಪತ್ರವನ್ನು ಪಡೆದುಕೊಂಡು 5,80,000/ ರೂಪಾಯಿ ಹಣವನ್ನು  ಕೈಗಡವಾಗಿ ನೀಡಿರುತ್ತಾರೆ. ಆದರೆ ಆರೋಪಿತರು ಗಾರ್ಮೆಂಟ್‌ ಪ್ಯಾಕ್ಟರಿ ಆರಂಬಿಸದೇ ಬೈಂದೂರಿನಲ್ಲಿ ಬಂದು ವಾಸಮಾಡಿಕೊಂಡಿರುವುದಾಗಿದೆ. ದಿನಾಂಕ 01/08/2015 ರಂದು ಚಂದ್ರಶೇಖರ ರವರು ಬೈಂದೂರಿನಲ್ಲಿ ವಾಸಮಾಡಿಕೊಂಡಿರುವ ಆರೋಪಿತರಿದ್ದಲ್ಲಿಗೆ ಬಂದು ತಾನು ನೀಡಿದ ಹಣವನ್ನು ವಾಪಾಸ್ಸು ನೀಡುವಂತೆ ಕೇಳಿದಾಗ ಆರೋಪಿತರು ಪಿರ್ಯಾಧಿದಾರರಿಗೆ ನಾವು ನಿನ್ನ ಹತ್ತಿರ ಯಾವುದೇ ಹಣವನ್ನು ಪಡೆದಿಲ್ಲ ಆದ್ದರಿಂದ ನಿನಗೆ ಯಾವುದೇ ಹಣವನ್ನು ನೀಡುವುದಿಲ್ಲವೆಂತ  ಹೇಳಿದ್ದಲ್ಲದೇ ಚಂದ್ರ ಶೇಖರ ರವರ ಕುತ್ತಿಗೆಯನ್ನು ಹಿಡಿದು ಅಡಚಿದ್ದಲ್ಲದೇ ಹೊಟ್ಟೆಯ ಮೇಲೆ ಒದ್ದಿರುತ್ತಾರೆ. ಹಾಗೂ ಇನ್ನು ಮುಂದಕ್ಕೆ ನಮ್ಮ ಮನೆಯ ಬಾಗಿಲಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಹೇಳಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 236/2015 ಕಲಂ: 405,407,420,415,323,324,504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರೇ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಇರ್ಷಾದ್‌ ಅಹಮ್ಮದ್, ತಂದೆ: ಆಲಿ ಸಾಹೇಬ್‌ ವಾಸ: ನಜಾಮ್‌ ಮಂಜಿಲ್‌ ಮುಗ್ದಾಮ್‌ ಕಾಲೂನಿ ನ್ಯಾಶ ನಲ್‌ ರಸ್ತೆ ಭಟ್ಕಳ ಉ.ಕ ಇವರು  2015 ನೇ ಮಾರ್ಚ ತಿಂಗಳಲ್ಲಿ ದುಬೈಯಿಂದ ತನ್ನ ಊರಾದ ಬೈಂದೂರಿಗೆ ಬಂದಿದ್ದು ತನ್ನ ಜಾಗದ ಸರ್ವೇ ನಂಬ್ರ 394/11ರಲ್ಲಿ ಅರ್‌ಟಿಸಿ ಪಡೆದಿದ್ದು ಅದರಲ್ಲಿ ಕಾಲಂ ನಂ:9 ರಲ್ಲಿ ಆಪಾದಿತ 1) ರಾಮ (66), ತಾಯಿ: ದುರ್ಗಿ ವಾಸ: ಯಕ್ಷೇಶ್ವರಿ ಕೃಪಾ ನಿಲಯ ಯಡ್ತರೆ ಗ್ರಾಮ ಇವರ ಹೆಸರು ಖರೀದಿದಾರರಾಗಿ ನಮೂದಾಗಿದ್ದು ನಂತರ ಸಂಬಂದಿಸಿದ ಇಲಾಖೆಯಲ್ಲಿ ಪರಿಶೀಲಿಸಿದಾಗ ಆಪಾದಿತ 2) ಸುಧಾಕರ ಶೆಟ್ಟಿ (50) ತಂದೆ: ಮಾದಯ್ಯ ಶೆಟ್ಟಿ ವಾಸ: ಪಡುವರಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 10/11/2008 ರಂದು ಇರ್ಷಾದ್‌ ಅಹಮ್ಮದ್ ರವರ  ಜಿಪಿಎ  ಹೋಲ್ಡರ್‌ ಎಂದು ದಸ್ತಾವೇಜು ನಂಬ್ರ 688/14-15 ರಲ್ಲಿ ಈ ಜಾಗವನ್ನು ಆರೋಪಿ 2 ನೇಯವರು ಆರೋಪಿ 1 ನೇಯವರಿಗೆ 1,63,000 ರೂಪಾಯಿಗೆ ಮಾರಾಟ ಮಾಡಿರುತ್ತಾರೆ, ಆದರೆ ಇರ್ಷಾದ್‌ ಅಹಮ್ಮದ್ ರವರು ಜಿಪಿಎ ಅನ್ನು ಯಾರಿಗೂ ನೀಡಿರುವುದಿಲ್ಲ. ಹಾಗೂ ಆ ದಿನಾಂಕ ದಂದು ಇರ್ಷಾದ್‌ ಅಹಮ್ಮದ್ ರವರು ವಿದೇಶದಲ್ಲಿದ್ದು, ಆರೋಪಿ 3) ಗಣೇಶ್ ಎಮ್‌  ಅಡ್ವೋಕೇಟ್‌ ನಂ: 763 3 ನೇ ಕ್ರಾಸ್‌ ಮಲ್ಲೇಶ್ವರಂ ಬೆಂಗಳೂರು ಇವರು ಜಿಪಿಎ ಮಾಡಿಸುವಾಗ ತಾನು ಸಾಕ್ಷಿದಾರನೆಂಧು ಆರೋಪಿ 2 ನೇಯವರನ್ನು ಗುರುತಿಸುತ್ತೇನೆಂದು ಸುಳ್ಳು ದಾಖಲೆಗೆ ಸಹಾಯ ಮಾಡಿರುತ್ತಾರೆ. ಆರೋಪಿ 1, 2 & 3 ನೇಯವರು ಇರ್ಷಾದ್‌ ಅಹಮ್ಮದ್ ರವರಿಗೆ ಅಪರಿಚಿತನಾಗಿದ್ದು ಅವರ ಜಾಗವನ್ನು ಮೋಸದಿಂದ ಸುಳ್ಳು ದಾಖಲೆಗಳನ್ನು ನೈಜವೆಂದು ಸೃಷ್ಟಿಸಿ ಬಳಕೆ ಮಾಡಿಕೊಂಡು ಅಪರಾಧವೆಸಗಿರುತ್ತಾರೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 237/2015 ಕಲಂ: 464, 466, 471, ಜೊತೆಗೆ 34 ಐಪಿಸಿಯಂತೆಪ್ರಕರಣ ದಾಖಲಾಗಿರುತ್ತದೆ.

  • ಬೈಂದೂರು: ದಿನಾಂಕ 30/08/2015 ರಂದು ಪಿರ್ಯಾದಿದಾರರಾದ ರಾಮ ದೇವಾಡಿಗ (59), ತಂದೆ: ಅಣ್ಣಪ್ಪ ದೇವಾಡಿಗ ವಾಸ: ಸ್ವಾತಿ ನಿಲಯ ವಿದ್ಯಾನಗರ ಬೈಂದೂರು ಕುಂದಾಪುರ ತಾಲೂಕು ಇವರು ತಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವಾಗ ಅವರ ಸಂಬಂಧಿಕರೊಬ್ಬರು ಪೋನ್ ಮಾಡಿ ರಾಮ ದೇವಾಡಿಗ ರವರ ಸ್ಥಳಕ್ಕೆ ಆಪಾದಿತರಾದ ಮಹಾಬಲ ದೇವಾಡಿಗ ಹಾಗೂ ಇತರರು ಅಕ್ರಮ ಪ್ರವೇಶ ಮಾಡಿದ ವಿಚಾರ ತಿಳಿಸಿದ್ದು ಸ್ಥಳಕ್ಕೆ ಹೋಗಿ ನೋಡಿದಲ್ಲಿ ಆಪಾದಿತ ಮಹಾಬಲ ದೇವಾಡಿಗ ತನ್ನ ಗೂಂಡಾಗಳನ್ನು ಕರೆತಂದು ಸದ್ರಿ ಸ್ಥಳದಲ್ಲಿ ಬೇಲಿ ನಿರ್ಮಿಸುತ್ತಿರುವಾಗ ಆಪಾದಿತರಲ್ಲಿ ರಾಮ ದೇವಾಡಿಗ ರವರು ಈ ಬಗ್ಗೆ ವಿಚಾರಿಸಿದಾಗ ಆಪಾದಿತ ಮಹಾಬಲ ದೇವಾಡಿಗ ತನ್ನ ಗೂಂಡಾಗಳಿಂದ ಕಾಲು ಮುರಿದು ನಡೆಯದ ರೀತಿ ಮಾಡುತ್ತೇನೆ ಎಂದೂ, ಇನ್ನು ಮುಂದೆ ಸದ್ರಿ  ಸ್ಥಳಕ್ಕೆ ಬಂದಲ್ಲಿ ಕಾಲು ಮುರಿದು ಮನೆಯಲ್ಲಿಯೇ ಮಲಗುವ ರೀತಿ ಮಾಡುತ್ತೇನೆಂದು ಹಾಗೂ ತನಗೆ  ಇರುವ ಬೆಂಬಲದಿಂದ ನಿನ್ನನ್ನು ವಿಳಾಸ ಇಲ್ಲದ ರೀತಿಯಲ್ಲಿ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 238/2015 ಕಲಂ 447,506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: