Tuesday, September 01, 2015

Daily Crime Reports As on 01/09/2015 at 17:00 Hrs


ಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಮಲ್ಪೆ: ಶ್ರೀ ರವಿಕುಮಾರ ಎ, ಪಿ.ಎಸ್.ಐ  ಮಲ್ಪೆ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ದಿನಾಂಕ: 31/08/15 ರಂದು ಬೆಳಗಿನ ಜಾವ ಸಮಯ ಸುಮಾರು 05:30 ಗಂಟೆಗೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಜಂಕ್ಷನ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಸಂತೆಕಟ್ಟೆ ಕಡೆಯಿಂದ ಒಂದು ವಾಹನ ಬರುತ್ತಿದ್ದು ಅದಕ್ಕೆ ಸಿಬ್ಬಂದಿಯವರು ತಮ್ಮ ಬಳಿ ಇರುವ ಬ್ಯಾಟನ ಮೂಲಕ ವಾಹನವನ್ನು ನಿಲ್ಲಿಸಲು ಕೆಂಪು ಸನ್ನೆ ಮಾಡಿದಾಗ ಸದ್ರಿ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ವಾಹನವನ್ನು ಚಲಾಯಿಸಿ ಹೂಡೆ ಕಡೆಗೆ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ, ಕೂಡಲೇ ಆ ವಾಹನವನ್ನು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಬೆನ್ನಟ್ಟಿದಾಗ ಸದ್ರಿ ವಾಹನವು ಪಡುತೋನ್ಸೆ ಗ್ರಾಮದ ಗುಂಡೇರಿ ಕಂಬಳ ರಸ್ತೆಯಲ್ಲಿ ಹೋಗಿ, ಪ್ಯಾರಾಡೇಸ್ ರೆಸಾರ್ಟ್ ಬಳಿ ಇರುವ ಮನೆಯ ಬಳಿ ಆರೋಪಿತರು ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾರೆ. ನಂತರ ವಾಹನದ ಬಳಿ ಬಂದು ತಪಾಸಣೆ ಮಾಡಲಾಗಿ ಸದ್ರಿ ವಾಹನ ಕೆಎ 20 ಸಿ. 8540 ನೇ ಓಮಿನಿಯಾಗಿದ್ದು, ಸದ್ರಿ ವಾಹನದ ಒಳಗೆ ಟಾರ್ಚ ಹಾಕಿ ನೋಡಿದಾಗ ಅದರಲ್ಲಿ 2 ಕರುಗಳಿದ್ದು ಅವುಗಳ ಕಾಲುಗಳನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಕಾರಿನ ಇಕ್ಕಟ್ಟಾದ ಜಾಗದಲ್ಲಿ ತುಂಬಿಸಿದ್ದು ಕಂಡುಬಂದಿರುತ್ತದೆ, ಮನೆಯ ಪಕ್ಕದ ತೋಟದಲ್ಲಿ 15 ಜಾನುವಾರುಗಳು ಇದ್ದು ಅಲ್ಲದೇ ಮನೆಯ ಹಿಂಭಾಗ ಮಾಂಸಕ್ಕಾಗಿ ದನವನ್ನು ಕಡಿಯುತ್ತಿದ್ದವರಲ್ಲಿ ಒಬ್ಬರನ್ನು ಹಿಡಿದು ವಿಚಾರಿಸಿದಾಗ ಆರೋಪಿತ ಆರೀಪ್ ಅಲಿ, ಇಕ್ಬಾಲ್ ನಜೀರ್ ಮತ್ತು  ವಾಸೀಮ್ ಮತ್ತು ಇತರರು  ಎಲ್ಲಿಂದಲೋ  ಕಳವು ಮಾಡಿ  17 ದನದ ಕರುಗಳನ್ನು ತಂದಿರುವುದಾಗಿ ತಿಳಿಸಿದ್ದು ನಂತರ ಸ್ಥಳಕ್ಕೆ ಪಂಚರನ್ನು ಹಾಗೂ ಪಶು ವೈಧ್ಯಾಧಿಕಾರಿಯವರನ್ನು ಬರ ಮಾಡಿಕೊಂಡು ಎಲ್ಲೋ ಕಳವು ಮಾಡಿದ 2 ಕರು ಹಾಗೂ ಅದನ್ನು ಸಾಗಿಸಲು ಉಪಯೋಗಿಸಿದ ಓಮಿನಿ ಕಾರನ್ನು, ಬೇರೆ ಕಡೆ ಕಳವು ಮಾಡಿದ 15 ಜಾನುವಾರುಗಳನ್ನು, ಅಕ್ರಮ ವಧೆ ಮಾಡಿದ ಒಂದು ದನದ ಮಾಂಸವನ್ನು ಹಾಗೂ ಸದ್ರಿ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ಮತ್ತು ಈ ಹಿಂದೆ ಕಳವು ಮಾಡಿದ ದನಗಳನ್ನು ವಧೆ ಮಾಡಿದ ಚರ್ಮಗಳನ್ನು ಸ್ವಾಧೀನಪಡಿಸಿಕೊಂಡು ಮಲ್ಪೆ ಠಾಣಾ ಅಪರಾಧ ಕ್ರಮಾಂಕ: 127/2015 ಕಲಂ: 11 ಜೊತೆಗೆ 13 ಪ್ರಾಣಿ ಹಿಂಸಾ ತಡೆ ಕಾಯ್ದೆ 1960, ಹಾಗೂ ಕಲಂ: 8, 9, 11 ಕರ್ನಾಟಕ ಗೋವಧೆ ಪ್ರತಿಬಂಧಕ ಜಾನುವಾರು ಪರಿರಕ್ಷಣೆ ಅಧಿನಿಯಮ 1964 ಮತ್ತು ಕಲಂ: 379 279  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ ಪ್ರದೀಪ್‌ ಇವರು ಎ.ಪಿ.ಎಮ್‌ ಸಂಸ್ಥೆಯ ಕೆಎ20ಬಿ5842ನೇ ಕುಂದಾಪುರ-ಭಟ್ಕಳ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:31/08/2015 ರಂದು ಭಟ್ಕಳದಿಂದ ಕುಂದಾಫುರಕ್ಕೆ ಕೊನೆಯ ಟ್ರೀಪ್‌ ಬಗ್ಗೆ ಭಟ್ಕಳದಿಂದ ಹೊರಟಿದ್ದು, ಬಸ್ಸಿನಲ್ಲಿ ಸುಮಾರು 15-20 ಜನ ಪ್ರಯಾಣಿಕರಿದ್ದು, ಎನ್‌ಹೆಚ್‌-66 ರಲ್ಲಿ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ನ ಪ್ರವಾಸಿ ಮಂದಿರದ ಹತ್ತಿರ ತಲುಪುವಾಗ ರಾತ್ರಿ 20:10 ಗಂಟೆಗೆ ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಕೆಎ21-9357 ಟ್ರ್ಯಾಲರ್‌ ವಾಹನವನ್ನು ಅದರ ಚಾಲಕನು ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ವಾಹನವನ್ನು ಚಲಾಯಿಸಿ ಬಸ್ಸಿನ ಎಡಭಾಗಕ್ಕೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳೂ ಜಖಂಗೊಂಡಿದ್ದು, ಅಪಘಾತದಿಂದ ಟ್ರ್ಯಾಲರ್‌ ಚಾಲಕನಿಗೆ ಮುಖಕ್ಕೆ, ಮೈ ಕೈಗೆ ಗಾಯವಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಾದ ಕೇಶವ, ಮಹಮ್ಮದ್‌ ಹ್ಯಾರಿಸ್‌, ಸುಲೈಮಾನ್‌, ಭಾರ್ಗವಿ, ಶರತ್‌‌ಕುಮಾರ್‌ ಶೆಟ್ಟಿ, ಜಗದೀಶ್‌ ಭಟ್‌‌, ಗಣಪತಿ ಮೇಸ್ತ, ಉದಯ ಅಕ್ರಂ ಮತ್ತು ಇತರರಿಗೆ ಹಾಗೂ ಪಿರ್ಯಾದಿ ಮತ್ತು ಬಸ್ಸಿನ ನಿರ್ವಾಹಕಿ ನೀತಾರವರಿಗೆ ಸಣ್ಣ ಪುಟ್ಟ ತರಚಿತ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಟ್ರ್ಯಾಲರ್‌ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 111/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಶಂಕರನಾರಾಯಣ: ದಿನಾಂಕ 01.09.15 ರಂದು  ರಾತ್ರಿ 02:30 ಘಂಟೆಗೆ ಸಿದ್ದಾಪುರ ಗ್ರಾಮದ  ಜೆ.ಎಮ್.ಜೆ ಗ್ಯಾರೇಜ್ ಬಳಿ ಆರೋಪಿತ ಲಕ್ಷ್ಮಣ ಮೊಗವೀರ (48) ತಂದೆ:  ದಿ. ಹೆರಿಯ ನಾಯ್ಕ  ವಾಸ: ಕೋಡಿ,ಹಳವಳ್ಳಿ, ಕೊಟೇಶ್ವರ ಗ್ರಾಮ ಈತನು ಮುಖವನ್ನು ಮರೆಮಾಚಿ ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಲ್ಲಿ ಇದ್ದವನನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿ  ಮಾಡಿ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 177/15 ಕಲಂ 109 ಸಿಆರ್‌ಪಿಎಸ್‌  ಯಂತೆ ಪ್ರಕರಣ ದಾಖಲಿಸಿರುವುದಾಗಿದೆ. 
  • ಶಂಕರನಾರಾಯಣ: ಪಿರ್ಯಾದಿ ಕುಷ್ಟ ಇವರು ಆಪಾದಿತ ಸಂತೋಷ ನಾಯ್ಕ ಈತನಿಂದ 3 ½  ವರ್ಷದ ಹಿಂದೆ ತಿಂಗಳಿಗೆ 5000/- ರೂ ಬಡ್ಡಿ ಕೊಡುವುದಾಗಿ  ಹೇಳಿ 50,000/- ರೂ ಸಾಲ ಪಡೆದುಕೊಂಡಿದ್ದು ಅದರಂತೆ ತಿಂಗಳಿಗೆ 5000/- ರೂ ಬಡ್ಡಿ ಹಣ ಕಟ್ಟುತ್ತಿದರು.  3 ದಿನದ ಹಿಂದೆ  ಆರೋಪಿಯು ಪಿರ್ಯಾದಿದಾರರ ಮನೆಗೆ ಹೋಗಿ 50,000/- ರೂ ಹಾಗೂ ಬಡ್ಡಿ 5000/- ರೂ ಕೊಡಬೇಕು ಇಲ್ಲದಿದ್ದರೆ  ಕೈ-ಕಾಲು ಮುರಿದು ಹಾಕುತ್ತೇನೆ ಎಂದು ಜೀವ ಬೆದರಿಕೆ  ಹಾಕಿರುತ್ತಾನೆ.  ಆ ಬಳಿಕ  ದಿನಾಂಕ 01/09/15 ರಂದು 07:30 ಗಂಟೆಗೆ ಪಿರ್ಯಾದಿದಾರರು ಕೆಲಸಕ್ಕೆ ಹೋಗುವಾಗ  ಆರೋಪಿಯು  ಬೈಕಿನಲ್ಲಿ ಬಂದು ಪಿರ್ಯಾದಿದಾರನ್ನು ಅಡಗಟ್ಟಿ  ಈ ದಿನ ಸಂಜೆಯೊಳಗೆ  ಬಡ್ಡಿ  ಹಾಗೂ ಅಸಲು ಹಣ ಕೊಡದಿದ್ದರೆ  ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ  ಹಾಕಿ ಅವಾಚ್ಯ ಶಬ್ದದಿಂದ  ಬೈದಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 178 /15 ಕಲಂ: Karnataka money lender act 1961(38, 39)  Karnataka  prohibition of charging  exorbitant interest act 2004(3, 4) U/S 341,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: