Tuesday, September 01, 2015

Daily Crime Reports As on 01/09/2015 at 07:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು: ಪಿರ್ಯಾದಿದಾರರಾದ ಎಲ್ಲೂ ಪೂಜಾರ್ತಿ (70), ಗಂಡ: ತಿಮ್ಮ ಪೂಜಾರಿ, ವಾಸ: ಕಾಫಿನ ಮನೆ ಉಪ್ರಳ್ಳಿ 11 ನೇ ಉಳ್ಳೂರು ಗ್ರಾಮ ಕುಂದಾಪುರ ತಾಲೂಕು ಇವರ ಮೊಮ್ಮಗ ಸಂತೋಷ (19) ಎಂಬುವವನು ದಿನಾಂಕ 31/08/2015 ರಂದು ಸಂಜೆ 4:00 ಗಂಟೆಯಿಂದ 4:30 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಅಡುಗೆ ಕೋಣೆಯ ಮಾಡಿನ ಪಕ್ಕಾಸಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 32/2015 ಕಲಂ:174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.    
ಇತರೇ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ಜಶ್‌ ಬಿ ಮನಿಯಾರ್‌ (19), ತಂದೆ: ಬಿನಯ್‌ ಎನ್ ಮನಿಯಾರ್‌, ವಾಸ: ರೂಮ್‌ ನಂಬ್ರ 110ಎ, ಎಮ್‌ಐಟಿ ಹಾಸ್ಟೆಲ್‌, ಮಣಿಪಾಲ ಇವರು ದಿನಾಂಕ 12/08/2015 ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ವ್ಯಕ್ತಿಯು ಕೆಎ 15 5601 ನೇ ಲಾರಿಯಿಂದ ಇಳಿದು ಜಶ್‌ ಬಿ ಮನಿಯಾರ್‌ ರವರ ಬಳಿ ಬಂದು ಏನು ಮಾಡುತ್ತಿದ್ದಯಾ? ನಾನು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಅವರ ಕೈಯಲ್ಲಿದ್ದ I Phone 6 ಮೊಬೈಲ್‌ ಸೆಟ್‌‌ನ್ನು ಬಲವಂತದಿಂದ ಕಸಿದುಕೊಂಡು ಸುಲಿಗೆ ಮಾಡಿರುತ್ತಾನೆ. ಈ ಬಗ್ಗೆ ಪೊಲೀಸ್ ಕಂಪ್ಲೆಂಟ್ ನೀಡದಂತೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾನೆ. ಮೊಬೈಲ್‌ನ ಮೌಲ್ಯ ರೂಪಾಯಿ 50,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 177/2015 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: