Monday, August 31, 2015

Daily Crime Reports As on 31/08/2015 at 19:30 Hrs

ಕಳವು ಪ್ರಕರಣ
  • ಮಣಿಪಾಲ: ದಿನಾಂಕ 31/08/2015 ರಂದು ಬೆಳಿಗ್ಗೆ 10:15ಗಂಟೆಯಿಂದ 13:15ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿ ಎಚ್‌.ಆರ್‌. ಭರತ್ ಪಾಟೀಲ್‌, ತಂದೆ: ರಾಜಶೇಖರ ಪಾಟೀಲ್‌, ವಾಸ: ಕಣಕಟ್ಟೆ, ಭದ್ರ ಕಾಲೋನಿ ಪೋಸ್ಟ್‌‌, ಭದ್ರವತಿ, ಶಿವಮೊಗ್ಗ ಜಿಲ್ಲೆ ಇವರು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಕೆಎ 04ಈಈ 9399 ನೇ ಹೀರೊಹೊಂಡಾ ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ 40000/-ರೂ ಆಗಿರುತ್ತದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ 176/15 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಬೈಂದೂರು: ಪಿರ್ಯಾದಿ ರಾಮನಾಥ ಭಟ್ ಪ್ರಾಯ 29 ವರ್ಷ ತಂದೆ: ರಾಮಕೃಷ್ಣ ಭಟ್ ವಾಸ: ಮೇಲ್ಪಂಕ್ತಿ ಶಿರೂರು ಗ್ರಾಮ ಕುಂದಾಫುರ ತಾಲೂಕುರವರ ಪಕ್ಕದ ಜಾಗವಾದ ಸರ್ವೆ ನಂಬ್ರ 249 ಹಿಸ್ಸಾ 24 ರಲ್ಲಿ 0.10 ಸೆಂಟ್ಸ್ ಜಾಗವನ್ನು ಸೀತಾರಾಮ ಶೆಟ್ಟಿ ಎಂಬವರು ಖರೀದಿಸಿದ್ದು, ನಂತರ ಅವರಿಗೆ ಹಣದ ಅಡಚಣೆ ಉಂಟಾಗಿ ಆ ಜಾಗವನ್ನು ರಾಮನಾಥ ಭಟ್ ರವರ ಸ್ವಾದೀನಕ್ಕೆ ನೀಡಿರುತ್ತಾರೆ. ದಿನಾಂಕ 09/06/2015 ರಂದು ಬೆಳಿಗ್ಗೆ 9:30 ಗಂಟೆಗೆ ಸದ್ರಿ ಜಾಗಕ್ಕೆ ಪಾಗಾರ ಕಟ್ಟಲು ಹೋದಾಗ ಆರೋಪಿತರಾದ 1.ವಿಶ್ವನಾಥ ಪೂಜಾರಿ 2. ರಾಜು ಪೂಜಾರಿ 3. ಪದ್ಮಾವತಿ 4. ಮೂಕಾಂಬು, 5. ಜಯಂತ 6. ನಾಗರಾಜ 7. ಪಾರ್ವತಿ 8. ಬೀಬಿ 9. ಭಾರತಿ 10. ಸುಬ್ಬು 11. ಸುಶೀಲ 12. ನಾಗರತ್ನ 13. ಗೌರಿ 14. ಚಿಕ್ಕು 15. ಪ್ರೇಮ 16. ಹಂಸಾವತಿ 17. ಮಂಜುನಾಥ ರವರುಗಳು ಗುಂಪು ಕೂಡಿಕೊಂಡು ರಾಮನಾಥ ಭಟ್ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಾಗಾರ ಹಾಕದಂತೆ ತಡೆದು ಕೆಲಸಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಹಾಕಿದ್ದಲ್ಲದೇ ಆ ಜಾಗದಿಂದ ಬಲತ್ಕಾರವಾಗಿ ಹೊಡೆದೊಡಿಸಿರುತ್ತಾರೆ, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ 235/2015 ಕಲಂ 341,447, 506 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: