Monday, August 31, 2015

Daily Crime Reports As on 31/08/2015 at 17:00 Hrs



ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿ ರಾಮ್ಕರ್ಕೆರ ಇವರು ಪಂದುಬೆಟ್ಟುವಿನಲ್ಲಿ ಪಾಲುಗಾರಿಕೆಯಲ್ಲಿ ವಿನಾಯಕ ಐಸ್ಪ್ಲಾಂಟ್ನಡೆಸುತ್ತಿದ್ದು ಸುಮಾರು 4 ವರ್ಷದಿಂದ ಬೆಳ್ತಂಗಡಿ ವಾಸಿ ಚಂದ್ರಶೇಖರ(22) ವರ್ಷದವರು ಫಿರ್ಯಾದಿದಾರರ ಐಸ್ಪ್ಲಾಂಟ್ನಲ್ಲಿ ಕೆಲಸ ಮಾಡಿಕೊಂಡಿದ್ದು  ದಿನಾಂಕ: 31/08/2015ರಂದು ಬೆಳಿಗ್ಗೆ 7:00ಗಂಟೆಗೆ ಫಿರ್ಯಾದಿದಾರರ ಐಸ್ ಪ್ಲಾಂಟ್ ಮ್ಯಾನೇಜರ್ರಾಘವೇಂದ್ರರವರು ಫಿರ್ಯಾದಿದಾರರಿಗೆ ಪೋನ್ಮಾಡಿ ಚಂದ್ರಶೇಖರವರು ಐಸ್ಪ್ಲಾಂಟ್ ಅಡುಗೆ ಕೋಣೆಯ ಮಾಡಿನ ಕಬ್ಬಿಣದ  Angler ಗೆ  Wire Rope ನಿಂದ ದಿನಾಂಕ: 30/08/2015 ರಾತ್ರಿ 11:00 ಗಂಟೆಯಿಂದ ದಿನಾಂಕ: 31/08/2015ರಂದು ಬೆಳಿಗ್ಗೆ 6:00ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು ಮೃತ ಚಂದ್ರಶೇಖರನು ಅತಿಯಾದ ಶರಾಬು ಸೇವಿಸುವ ಅಭ್ಯಾಸದವಾನಾಗಿದ್ದು ಈತನು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿದನೆಂದು ತಿಳಿದಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು.ಡಿ.ಆರ್‌ ನಂಬ್ರ 46/2015 ಕಲಂ 174(ಸಿ)  ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಹೆಬ್ರಿ: ಶೇಖರ ಪೂಜಾರಿ (70ವರ್ಷ) ಎಂಬವರು ಸುಮಾರು ವರ್ಷಗಳಿಂದ  ಕಬ್ಬಿನಾಲೆ ಗ್ರಾಮದ ಕೇಸರಿಬೈಲು  ಎಂಬಲ್ಲಿರುವ  ಜಾನ್ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡು ವಿಪರೀತ ಮದ್ಯಸೇವನೆ ಮಾಡಿಕೊಂಡು ಒಬ್ಬಂಟಿಯಾಗಿ ಇದ್ದ ಬಗ್ಗೆ ಮಾನಸಿಕವಾಗಿ ನೊಂದು ಕೊಂಡಿದ್ದು. ಇದೇ ವಿಚಾರದಲ್ಲಿ ಮೃತರು ದಿನ ದಿನಾಂಕ: 30/08/15 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ: 31/08/15 ರ ಬೆಳಿಗ್ಗೆ 06:30 ಗಂಟೆಯ ಮದ್ಯಾವದಿಯಲ್ಲಿ ಕಬ್ಬಿನಾಲೆ ಗ್ರಾಮದ ಕೇಸರಿ ಬೈಲ್ಲು ಎಂಬಲ್ಲಿ ಜಾನ್ ಎಂಬವರಿಗೆ ಸೇರಿದ ಗೋಡನ್ ನ ಒಳಗೆ ಮೇಲಿನ ಮರದ ಜಂತಿಗೆ ನೇಣು ಹಾಕಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯು.ಡಿ.ಆರ್‌ ನಂಬ್ರ 33/2015 ಕಲಂ 174(ಸಿ)  ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ; ಶ್ರೀನಿವಾಸ ಎನ್‌. ಅಂಚನ್‌ ಪ್ರಾಯ 64 ವರ್ಷ ಎಂಬವರು ವಿಪರೀತ ಮದ್ಯಪಾನ ಸೇವಿಸುವ ಚಟವನ್ನು ಹೊಂದಿದ್ದು, ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26.08.2015 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 27.08.2015 ರ ಬೆಳಿಗ್ಗೆ 7:00 ಗಂಟೆ ನಡುವಿನ ಅವಧಿಯಲ್ಲಿ ತಾನು ವಾಸ್ತವ್ಯವಿದ್ದ ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಗೋಪಾಡಿ ಚಿಕ್ಕು ಅಮ್ಮನ ದೇವಸ್ಥಾನದ ಬಳಿ ಇರುವ ಮನೆಯ ಉಪ್ಪರಿಗೆ ಕೋಣೆಯಲ್ಲಿ ಕೀಟನಾಶಕ ವಿಷ ಪದಾರ್ಥವನ್ನು ಸೇವಿಸಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದಾಗಿಯೂ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30.08.2015 ರಂದು ರಾತ್ರಿ 9:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯು.ಡಿ.ಆರ್‌ ನಂಬ್ರ 38/2015 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: