Monday, August 31, 2015

Daily Crime Reports As on 31/08/2015 at 07:00 Hrs

ಅಪಘಾತ ಪ್ರಕರಣ
  • ಕಾಪು: ದಿನಾಂಕ 30/08/2015 ರಂದು ಪಿರ್ಯಾದಿದಾರರಾದ ಪ್ರಶಾಂತ (34), ತಂದೆ: ಭೋಜ ಪೂಜಾರಿ, ವಾಸ: ಕೊಂಬುಗುಡ್ಡೆ ಮಲ್ಲಾರು ಗ್ರಾಮ ಇವರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಟಪಾಡಿ ಕಡೆಗೆ ಹೋಗುವಾಗ 3:20 ಗಂಟೆಗೆ ಕಾಪುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ  ಕೆ.ಇ.ಬಿ. ಎದುರು ತಲುಪುವಷ್ಟರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರ್‌ ನಂಬ್ರ ಕೆಎಲ್‌ 59 ಕೆ 586 ನೇ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ ಪಡುಬಿದ್ರೆ ಕಡೆಗೆ ತನ್ನ ಎದುರಿನಲ್ಲಿ ಹೋಗುತ್ತಿದ್ದ ಕೆಎ 20 ಇಹೆಚ್‌ 3835 ನೇ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಮತ್ತು ಸಹಸವಾರರಿಬ್ಬರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದರು ಗಾಯಗೊಂಡವರನ್ನು ಒಂದು ವಾಹನದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದಕೊಂಡು ಹೋಗಿರುತ್ತಾರೆ. ಕೆಎಲ್‌ 59 ಕೆ 586 ನೇದರ ಕಾರು ಚಾಲಕ ಅಪಘಾತವಾದ ಬಳಿಕ ಕಾರನ್ನು ಸ್ವಲ್ಪ ಮುಂದಕ್ಕೆ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 159/2015 ಕಲಂ: 279, 337 ಐಪಿಸಿ ಮತ್ತು 134(ಎ)(ಬಿ) ಐ.ಎಮ್.ವಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣಗಳು
  • ಬ್ರಹ್ಮಾವರ : ದಿನಾಂಕ 29/08/2015 ರಂದು 16:00 ಗಂಟೆಗೆ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮ ಪಂಚಾಯತ್ ಕಟ್ಟಡ ನಂಬ್ರ 2 ರಲ್ಲಿ ಪಿರ್ಯಾದಿದಾರರಾದ ಸುಧಾಕರ್ ಕುಂದರ್(35), ತಂದೆ: ರಾಮ ಮರಕಾಲ, ವಾಸ: ಬಾರ್ಕೂರು ಮೂಡುಕೆರೆ ಹನೆಹಳ್ಳಿ ಗ್ರಾಮ ಉಡುಪಿ ತಾಲೂಕು ಇವರು ಪಂಚಾಯತ್ ಕಟ್ಟಡದಲ್ಲಿ ಪ್ಯಾನ್ಸಿ, ಪೂಟ್ ವೇರ್, ಟೈಲರಿಂಗ್ ಅಂಗಡಿ  ನಡೆಸುತ್ತಿದ್ದು ಪಂಚಾಯತಿನವರು ಎಲಂ ಅನ್ನು ಉಲ್ಲಂಘಿಸಿದ್ದು ಈ ಬಗ್ಗೆ ಸುಧಾಕರ್ ಕುಂದರ್ ರವರು ನ್ಯಾಯಾಲಯದಿಂದ ಇಂಜೆಕ್ಷನ್ ಆರ್ಡರ್ ಪಡೆದಿದ್ದರೂ ಸಹಾ ಆರೋಪಿಗಳಾದ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಹಾಗೂ ಶ್ರೀಧರ ಆಚಾರ್ಯ, ಸುಗುಣ ಆಚಾರ್ಯ ರವರು ಸೇರಿ ಅಂಗಡಿಯ ಬೀಗ ಮುರಿದು ಅಂಗಡಿಯ ನೇಮ್ ಬೋರ್ಡನ್ನು ಹಾಳು ಮಾಡಿದ್ದಲ್ಲದೆ, ಬೆದರಿಕೆ ಹಾಕಿ ಸುಧಾಕರ್ ಕುಂದರ್ ರವರ ಅಂಗಡಿಯಲ್ಲಿ ಬೇರೆ ಹೆಂಗಸನ್ನು ಕೂರಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 171/2015 ಕಲಂ:453, 427, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶಶಿಧರ ಶೆಟ್ಟಿ (49), ದಿ. ಅಂತನ ಶೆಟ್ಟಿ, ವಾಸ: ಕಡಂಗೋಡು ಮೈರ್ಮಾಡಿ ಹೊಸೂರು ಗ್ರಾಮ ಉಡುಪಿ ಇವರು ಬೆಂಗಳೂರಿನಿಂದ ದಿನಾಂಕ 28/08/2015 ರಂದು ಶಿವಮೊಗ್ಗ ಮಾರ್ಗವಾಗಿ ಉಡುಪಿಗೆ ರಾತ್ರಿ 9:30 ಗಂಟೆಗೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಲು ಬಸ್ಸು ಇಲ್ಲದೇ ಇದ್ದರಿಂದ ಬಸ್ ನಿಲ್ದಾಣದಲ್ಲಿ ಕುಳಿತಿರುವಾಗ ರಾತ್ರಿ 9:40 ಗಂಟೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಶಶಿಧರ ಶೆಟ್ಟಿ ಯವರ ಬಳಿ ಬಂದು ಎಲ್ಲಿಗೆ ಹೋಗುವವರು ನೀವು, ನಾವು ಕುಂದಾಪುರ ಕಡೆಗೆ ಹೋಗುವವರು ನಮ್ಮ ಬಳಿ ಕಾರು ಇದೆ ನಿಮ್ಮನ್ನು ನಿಮ್ಮ ಮನೆಯವರೆಗೆ ಕಾರಿನಲ್ಲಿ ಬೀಡುತ್ತೇವೆ ಎಂದು ಕಾರಿನ ಹಿಂಬದಿ ಸೀಟಿನಲ್ಲಿ ಕುರಿಸಿ ಕರೆದುಕೊಂಡು ಹೋದ ವ್ಯಕ್ತಿಗಳು ಕಾರಿನ ಕಿಟಕಿಯನ್ನು ಬಂದ್‌ ಮಾಡಿ ಶಶಿಧರ ಶೆಟ್ಟಿ ಯವರ ಬಲಬದಿ ಕುಳಿತ ವ್ಯಕ್ತಿ ಕೈಯಿಂದ ತಲೆಗೆ ಹಿಂಭಾಗಕ್ಕೆ ಹೊಡೆದನು ಶಶಿಧರ ಶೆಟ್ಟಿ ಯವರಿಗೆ ತಲೆ ಸುತ್ತು ಬಂದಂತಾಗಿದ್ದು ಆ ಸಮಯ ಆರೋಪಿಗಳು ಅವರ ಕಿಸೆಯಲ್ಲಿದ್ದ ನಗದು ರೂಪಾಯಿ 15,700/- ಮತ್ತು 100 ರೂಪಾಯಿಯ ಕಪ್ಪು ಬಣ್ಣದ ಪರ್ಸ್, ಸಿಮ್ ನಂ 9972987768, 9483351810 ಇರುವ ಕಾರ್ಬನ್ ಮೊಬೈಲ್ ಹಾಗೂ  ಬ್ಯಾಗನ್ನು ಕಿತ್ತುಕೊಂಡು ಕಾಡಿನಂತ ಪ್ರದೇಶದಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ಶಶಿಧರ ಶೆಟ್ಟಿ ಯವರನ್ನು ಕಾರಿನಿಂದ ದೂಡಿ ಹೋಗಿರುತ್ತಾರೆ. ದೂಡಿದ ಪರಿಣಾಮ ಬಲಗಾಲಿಗೆ ನೋವುಂಟಾಗಿದ್ದು ಪರೀಕ್ಷಿಸಿದ ವೈದ್ಯರು ಬಲಗಾಲಿನ ಮೊಣಗಂಟಿನ ಬಳಿ ಮುರಿತವಾಗಿದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 188/2015 ಕಲಂ: 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,     
ಕಳವು ಪ್ರಕರಣಗಳು
  • ಮಣಿಪಾಲ: ಪಿರ್ಯಾದಿದಾರರಾದ ರಾಜೀವಿ ಪ್ರಭು (67), ಗಂಡ: ದಿ. ಅನಂತ ಪ್ರಭು, ವಾಸ: ಇಂದ್ರಾಳಿ ಗುಲ್ಮೇ ಹೌಸ್, ವಿ. ಪಿ. ನಗರ 3ನೇ ಕ್ರಾಸ್, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 30/08/2015 ರಂದು  ಮದ್ಯಾಹ್ನ ತನ್ನ ಮಗಳ ಮನೆಗೆ ಹೋದವರು ವಾಪಾಸು ಬಂದು ಲಕ್ಷ್ಮೀಂದ್ರ ನಗರ ಬಸ್‌‌ ನಿಲ್ದಾಣದಲ್ಲಿ ಇಳಿದು ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 3:15 ಗಂಟೆಗೆ ಶಿವಳ್ಳಿ ಗ್ರಾಮದ ವಿ.ಪಿ ನಗರದ ಕಲ್ಕೂರ ಪ್ಯಾಲೇಸ್ ಎದುರು ತಲುಪುವಾಗ ಒಂದು ಬೈಕ್‌ ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ರಾಜೀವಿ ಪ್ರಭು ರವರಲ್ಲಿ ಪ್ಲಾಟ್‌ನ ನಂಬರ್ ಎಷ್ಟೆಂದು ಕೇಳಿದ್ದು, ರಾಜೀವಿ ಪ್ರಭು ರವರು ತನಗೆ ಗೊತ್ತಿಲ್ಲವೆಂದು ಹೇಳಿದಾಗ ಅವರಲ್ಲಿ ಒಬ್ಬನು ಅವರ ಕುತ್ತಿಗೆಯಲ್ಲಿದ್ದ ಎರಡುವರೆ ಪವನ್ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುವುದಾಗಿದೆ. ಎಳೆದುಕೊಂಡ ಹೋದ  ಚಿನ್ನದ ಸರದ ಮೌಲ್ಯ ರೂಪಾಯಿ 40,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 174/2015, ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಮಣಿಪಾಲ: ದಿನಾಂಕ 30/08/2015 ರಂದು ಮದ್ಯಾಹ್ನ ಪಿರ್ಯಾದಿದಾರರಾದ ವಿಷ್ಣುದಾಸ ಭಟ್‌‌.ಯು (61), ತಂದೆ: ರಾಮಚಂದ್ರ ಭಟ್‌‌‌, ವಾಸ: ಮನೆ.ನಂ: 8-76 ಇ4, ಶ್ರೀನಿಧಿ, ಸರಳಬೆಟ್ಟು 1ನೇ ಕ್ರಾಸ್‌, ಮಣಿಪಾಲ, ಉಡುಪಿ ತಾಲೂಕು ಇವರು ಮಣಿಪಾಲ ಕೆಎಂಸಿ ಆಸ್ಪತ್ರೆ ಕಂಪೌಂಡ್‌ ನಲ್ಲಿರುವ ತನ್ನ ಮಿತ್ರ ಮಂಜುನಾಥ ಪೈ ಎಂಬುವವರ ಕ್ಯಾಂಟಿನಿಗೆ ಹೋಗಿ ಅವರ ಜತೆ ಮಾತನಾಡಿ ಅಲ್ಲಿಂದ ಮನೆಗೆ ಹೋಗಲು ಶಿವಳ್ಳಿ ಗ್ರಾಮದ ಮಣಿಪಾಲ ಟೈಗರ್ ಸರ್ಕಲ್‌ ದಾಟಿ ಮಣಿಪಾಲ ಸ್ಟೋರ್ ಬಳಿ ತಲುಪುವಾಗ ಮದ್ಯಾಹ್ನ 3:20 ಗಂಟೆಗೆ ಒಂದು ಬೈಕ್‌ನಲ್ಲಿ ಒಬ್ಬನು ಬಂದು ವಿಷ್ಣುದಾಸ ಭಟ್‌ರವರನ್ನು ನಿಲ್ಲಿಸಿ ನಾನು ಕ್ರೈಮ್‌ ಬ್ರಾಂಚ್ ಪೊಲೀಸ್ ಎಂದು ಹೇಳಿ ನೀವು ಹೀಗೆ ಕೈಗೆ ಆಭರಣ ಮತ್ತು ಹೆಚ್ಚಿನ ಮೌಲ್ಯದ ವಸ್ತುಗಳನ್ನು ಹಾಕಿ ತಿರುಗಾಡಬಾರದು ಎಂತ ಹೇಳಿ ಹೆದರಿಸಿ ಇನ್ನೊಬ್ಬ ವ್ಯಕ್ತಿಗೆ ಹಾಗೆಯೇ ಹೇಳಿ ಆತನಲ್ಲಿದ್ದ ಬಂಗಾರದ ಒಡವೆ ಹಾಗೂ ಇತರ ವಸ್ತುಗಳನ್ನು ಒಂದು ಟವೆಲ್‌ನಲ್ಲಿ ಕಟ್ಟಿ ಆತನ ಕಿಸೆಗೆ ಹಾಕಿದನು. ಬಳಿಕ ವಿಷ್ಣುದಾಸ ಭಟ್‌ರಲ್ಲಿದ್ದ ಒಂದು ಚೈನು, 2 ಉಂಗುರ, ಮೊಬೈಲ್‌ ಹಾಗೂ ಹಣವನ್ನು ಟವೆಲ್‌ನಲ್ಲಿ ಕಟ್ಟಿ ವಿಷ್ಣುದಾಸ ಭಟ್‌ರವರ ಪ್ಯಾಂಟಿನ ಕಿಸೆಗೆ ಹಾಕಿ ಇಬ್ಬರು ದುಷ್ಕರ್ಮಿಗಳು MH 07 ಬೈಕ್‌ನಲ್ಲಿ ಹೋಗಿದ್ದು, ಬಳಿಕ ವಿಷ್ಣುದಾಸ ಭಟ್‌ರವರು ಕಿಸೆಯಲ್ಲಿದ್ದ ಟವೆಲ್‌ನ್ನು ಬಿಚ್ಚಿ ನೋಡಿದಾಗ  ಕೇವಲ ಮೊಬೈಲ್ ಮತ್ತು ಹಣ ಇದ್ದು, ಚಿನ್ನಾಭರಣಗಳನ್ನು ಅಪರಿಚಿತ ದುಷ್ಕರ್ಮಿಗಳು ಲಪಟಾಯಿಸಿಕೊಂಡು ಹೋಗಿರುವುದಾಗಿದೆ. ಲಪಟಾಯಿಸಿದ ಚಿನ್ನಾಭರಣದ ಅಂದಾಜು ಮೌಲ್ಯ ಸುಮಾರು 1 ಲಕ್ಷ ಹತ್ತು ಸಾವಿರ ರೂಪಾಯಿ ಆಗಬಹುದು. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 175/2015 ಕಲಂ: 384 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೂಜಾಟ ಪ್ರಕರಣ
  • ಬ್ರಹ್ಮಾವರ: ಅನಂತಪದ್ಮನಾಭ ಕೆ.ವಿ ಪಿಎಸ್ಐ ಬ್ರಹ್ಮಾವರ ಪೊಲೀಸ್ ಠಾಣೆ ಖಚಿತ ವರ್ತಮಾನದ ಮೇರೆಗೆ ದಿನಾಂಕ 30/08/2015 ರಂದು 14.00 ಗಂಟೆಗೆ  ಉಡುಪಿ ತಾಲೂಕು ಹಾವಂಜೆ ಗ್ರಾಮದ ಇರ್ಮಾಡಿ ಅಬ್ವಗದಾರಗ ದೈವಸ್ಥಾನ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಕೋಳಿ ಅಂಕ ಜೂಜಾಟ ನಡೆಸುತ್ತಿದ್ದಲ್ಲಿಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಗಳಾದ 1)ರಾಮ ಕುಲಾಲ, 2) ಸಂತೋಷ ಶೆಟ್ಟಿ, 3)ವಿಶ್ವನಾಥ ಶೆಟ್ಟಿ, 4) ಭಾಸ್ಕರ ಶೆಟ್ಟಿ, 5)ದಿನೇಶ ಪೂಜಾರಿ, 6) ರಮೇಶ ಪೂಜಾರಿ, 7) ಅವಿನಾಶ, 8)ಶಶಿಕಾಂತ  ಹಾಗೂ ಕೋಳಿ ಅಂಕ ಜೂಜಾಟಕ್ಕೆ ಉಪಯೋಗಿಸಿದ ನಗದು ರೂಪಾಯಿ 5,485/-, ಕೋಳಿಗಳು-6 ಹಾಗೂ 2 ಕೋಳಿ ಬಾಲ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 172/2015 ಕಲಂ:87, 93 ಕೆ.ಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಚಂದಪ್ಪ, ತಂದೆ:ತುಕ್ರ, ವಾಸ: ಅನುಗ್ರಹ ನಿಲಯ ಸಿದ್ದರ್ಥ ನಗರ, ಬಜ್ಪೆ ದಕ್ಷಿಣ ಕನ್ನಡ ಇವರು ಮತ್ತು ಇವರ ಹೆಂಡತಿಯವರು ದಿನಾಂಕ 30/08/2015 ರಂದು ಶಿವಮೊಗ್ಗದಿಂದ ಉಡುಪಿಗೆ ಕೆಎ 20 ಸಿ 507 ನೇ ರೋಸಿ ಬಸ್ ನಲ್ಲಿ ಬರುವಾಗ ನಿಂತು ಪ್ರಯಾಣ ಮಾಡಲು ಆಗದೇ ಇದ್ದರಿಂದ ಖಾಲಿ ಇದ್ದ ಹಿರಿಯ ನಾಗರೀಕರ ಸೀಟಿನಲ್ಲಿ ಕುಳಿತುಕೊಂಡಿದ್ದು, ಆ ಸಮಯ ಕಂಡಕ್ಟರ್ ಪ್ರಕಾಶ್‌ ಇವನು ಚಂದಪ್ಪ ರವರಲ್ಲಿ ಬಂದು ಉದ್ದಟತನದಿಂದ ಮಾತನಾಡಿರುತ್ತಾನೆ, ನಂತರ ಮದ್ಯಾಹ್ನ 3:30 ಗಂಟೆ ಸಮಯಕ್ಕೆ ಬಸ್ಸು ಉಡುಪಿ ಬಸ್ಸು ನಿಲ್ದಾಣಕ್ಕೆ ತಲುಪಿದಾಗ ಕಂಡೆಕ್ಟರ್ ಪ್ರಕಾಶ, ಶಂಕರ್ ಹಾಗೂ ಇತರ 5 ಜನ ಬಸ್ ಏಜೆಂಟರುಗಳು ಚಂದಪ್ಪ ರವರನ್ನು ಬಸ್ ನಿಂದ ಕೆಳಗೆ ಎಳೆದು ಹಾಕಿ, ತಡೆದು ನಿಲ್ಲಿಸಿ ಕೈಯಿಂದ ಹೊಟ್ಟೆಗೆ ಭಜಕ್ಕೆ ತಲೆಗೆ ಹೊಡೆದಿರುತ್ತಾರೆ ಮತ್ತು ಕಾಲಿನಿಂದ ತುಳಿದಿರುತ್ತಾರೆ. ಆ ಸಮಯ ಅಲ್ಲಿಗೆ ಸುರೆಂದ್ರ ಮತ್ತು ಹಾಗೂ ಶೇಖರ ಹಾಗೂ ಇತರರು ಬಂದಿದ್ದು ಆ ಪೈಕಿ ಸುರೇಂದ್ರನಿಗೆ ಆರೋಪಿಗಳು ಕೈಯಿಂದ ಹೊಡೆದು ಕೆಳಗೆ ಹಾಕಿ ಕಾಲಿನಿಂದ ತುಳಿದಿರುತ್ತಾರೆ. ಚಂದಪ್ಪ ರವರನ್ನು ಉದ್ದೇಶಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 187/2015 ಕಲಂ: 143, 147, 341, 323, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

No comments: