ಬೆದರಿಕೆ ಪ್ರಕರಣ
- ಬೈಂದೂರು : ದಿನಾಂಕ 19/09/2015 ರಂದು ಸಂಜೆ 5:00 ಗಂಟೆಯ ಸಮಯಕ್ಕೆ ಆಪಾದಿತರಾದ ಪರಮೇಶ್ವರ ಭಟ್, ಶಶಿ ಭಟ್, ಶಿವರಾಜ ನಾಯ್ಕ್, ಶೀನ ನಾಯ್ಕ್, ಮಹೇಶ ಕೊಠಾರಿ, ಆದರ್ಶ ಗೌಡರವರು ಪಿರ್ಯಾದಿದಾರರ ಬಾಬ್ತು ಜಾಗದ ಒಳಗೆ ಅಕ್ರಮ ಪ್ರವೇಶ ಮಾಡಿ ದೇವಸ್ಥಾನದ ಕಂಪೌಂಡಿನ ಒಳಗೆ ಚಪ್ಪಲಿ ಹಾಕಿಕೊಂಡು ಬಂದಾಗ ಧರ್ಮರಾಜ ಜೈನ್ ಪ್ರಾಯ 62 ತಂದೆ: ಚಂದ್ರಯ್ಯ ಜೈನ್ ವಾಸ: ಬೊಳ್ಳಂಬಳ್ಳಿ ಕಾಲ್ತೋಡು ಗ್ರಾಮ ಕುಂದಾಪುರ ಇವರು ಅವರಲ್ಲಿ ಈ ಬಗ್ಗೆ ಆಕ್ಷೇಪಿಸಿದಕ್ಕೆ ಆಪಾದಿತರುಗಳೆಲ್ಲರೂ ಧರ್ಮರಾಜ ಜೈನ್‌ರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ನಮ್ಮನ್ನು ತಡೆದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಕೊಲೆ ಬೆದರಿಕೆ ಹಾಕಿ ದೇವಸ್ಥಾನದ ದಾರಿಯ ಕಬ್ಬಿಣದ ಗೇಟನ್ನು ಮುರಿದು ಹಾಕಿ ಗಾಜಿನ ಬಾಗಿಲನ್ನು ಜಖಂ ಮಾಡಿರುತ್ತಾರೆ. ಇದರಿಂದ ಧರ್ಮರಾಜ ಜೈನ್ ರವರಿಗೆ 5,000/- ರೂಪಾಯಿ ನಷ್ಟವಾಗಿರುತ್ತದೆ ಎಂಬಿತ್ಯಾದಿಯಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 249/2015 ಕಲಂ 447,341,504,506,427 ಜೊತಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
- ಹಿರಿಯಡ್ಕ: ದಿನಾಂಕ:19/09/15 ರಂದು ಸಂಜೆ 06:30 ಗಂಟೆಯಿಂದ ದಿನಾಂಕ 21/09/15 ರಂದು ಬೆಳಿಗ್ಗೆ 08:00 ಗಂಟೆಯ ನಡುವಿನ ವೇಳೆಯಲ್ಲಿ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿರುವ ಪಿರ್ಯಾದಿ ಜಯರಾಜ ವಿ ಶೆಟ್ಟಿ [ 46] ತಂದೆ; ಬಿ ವಾಸು ಶೆಟ್ಟಿ. ವಾಸ; ‘ಸುವಾಸ,’ ಗುಡ್ಡೆಯಂಗಡಿ, ಬೊಮ್ಮರಬೆಟ್ಟು ಗ್ರಾಮ ಇವರ ಹೆತ್ತವರ ಮನೆಯ ಮುಂಬಾಗಿಲನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ತೆರೆದು ಮನೆಯೊಳಗೆ ಪ್ರವೇಶಿಸಿ ಮನೆಯ ಒಳಗಿನ ಕಪಾಟು ಹಾಗೂ ಬೀರುವಿನಲ್ಲಿಟ್ಟ 1] ಬೆಳ್ಳಿಯ ಲೋಟ-2 , 2] ಬೆಳ್ಳಿಯ ಕಾಲು ದೀಪ -2 , 3] ಚಿನ್ನದ ಉಂಗುರ -3 , 4] ಚಿನ್ನದ ಬೆಂಡೋಲೆ -1 ಜೊತೆ ಹಾಗೂ 5] ಹಳೆಯ ಬೆಳ್ಳಿಯ ಉಡಿದಾರ -4 ಒಟ್ಟು ರೂ 40,000/- ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 93/15 U/s 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರೇ ಪ್ರಕರಣ
- ಕಾಪು: ಜಗದೀಶ್ ರೆಡ್ಡಿ ಪಿ.ಎಸ್.ಐ. ಕಾಪು ಪೊಲೀಸ್ ಠಾಣೆ ಇವರು ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ ಮಜೂರು ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ರಾತ್ರಿ 21:30 ಗಂಟೆಗೆ ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯವರೊಂದಿಗೆ ಮಜೂರು ಜಂಕ್ಷನ್‌ಗೆ ಬಂದು ನೋಡಲಾಗಿ ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದು, ಅವರನ್ನು ವಿಚಾರಿಸಿದಲ್ಲಿ 1) ಸಚಿನ್ ಶೆಟ್ಟಿ ತಂದೆ ಭುವನೇಶ್ ಶೆಟ್ಟಿ ವಾಸ: ಪಂಜಿತ್ತೂರು ಗುತ್ತು, ಮಜೂರು ಗ್ರಾಮ ಮತ್ತು 2) ಉಮ್ಮರಬ್ಬ ತಂದೆ: ಇಸೂಬು ಬ್ಯಾರಿ ವಾಸ: ವಿ.ಟಿ. ರಸ್ತೆ ಮಜೂರು ಗ್ರಾಮ ಎಂಬುವುದಾಗಿ ತಿಳಿಸಿದ್ದು, ಸದ್ರಿಯವರುಗಳು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡುತ್ತಿದ್ದವರನ್ನು ವಶಪಡಿಸಿಕೊಳ್ಳಲಾಯಿತು, ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 164/2015 ಕಲಂ 160 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment