ಅಪಘಾತ ಪ್ರಕರಣಗಳು
- ಕುಂದಾಪುರ: ದಿನಾಂಕ 19/09/2015 ರಂದು ರಾತ್ರಿ 10:50 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಯ ಹತ್ತಿರ ಮೈತ್ರಿ ಮನೆಯ ಎದುರುಗಡೆ ರಾಷ್ಡ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಯಾವುದೋ ನೊಂದಣಿ ನಂಬ್ರ ತಿಳಿದು ಬಾರದ ವಾಹನವನ್ನು ಅದರ ಚಾಲಕ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಕ್ಕಿನಲ್ಲಿ ಕುಂದಾಪುರ ಕಡೆಗೆ ಸಂತೋಷ ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-Q-1430 ನೇ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋಗಿದ್ದು, ಗಾಯಾಳು ಸಂತೋಷ ರವರು ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 115/2015 ಕಲಂ: 279, 337 ಐಪಿಸಿ & 134 (ಏ) (ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕೋಟ: ದಿನಾಂಕ 20/09/2015 ರಂದು ಸಂಜೆ 7:15 ಗಂಟೆಗೆ ಪಿರ್ಯಾದಿದಾರರಾದ ಆಲ್ಪ್ರೇಡ್ ಕಾರ್ಡೊಜಾ(58), ತಂದೆ: ಕ್ಸೇವಿಯರ್ ಕಾರ್ಡೊಜಾ, ವಾಸ: ಸಿಂಡಿಕೇಟ್ ಬ್ಯಾಂಕ್ ಎದುರು ಸಾಲಿಗ್ರಾಮ, ಚಿತ್ರಪಾಡಿ ಗ್ರಾಮ ಉಡುಪಿ ತಾಲೂಕು ಇವರ ಸಾಲಿಗ್ರಾಮದಲ್ಲಿರುವ ಲೋಬೊ ಕೋಳಿ ಪಾರಂ ಅಂಗಡಿ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಎ 20 ಇಜೆ 4215 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಸುಬಾನ್ ಎಂಬುವವರು ಆತನ ಮೋಟಾರ್ ಸೈಕಲ್‌ನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಟಾರು ರಸ್ತೆಯ ಪಶ್ಚಿಮ ಬದಿಯಿಂದ ಪೂರ್ವಕ್ಕೆ ಒಂದು ನಾಯಿ ಓಮ್ಮಲೇ ಓಡಿ ಬಂದಿದ್ದು ಆ ಸಮಯ ಮೋಟಾರ್ ಸೈಕಲ್ ಸವಾರ ಚಾಲನಾ ನಿಯಂತ್ರಣ ತಪ್ಪಿ ಓಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದವರನ್ನು ಆಲ್ಪ್ರೇಡ್ ಕಾರ್ಡೊಜಾ, ಗಣಪತಿ ಆಚಾರ್ಯ ಹಾಗೂ ಗ್ರೇಸಿಯಸ್ ಲೋಬೊ ರವರು ಸೇರಿ ಉಪಚರಿಸಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಪರೀಕ್ಷಿಸಿದ ವೈದ್ಯರು ಸುಬಾನ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 209/2015 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment