Sunday, September 20, 2015

Daily Crime Reported As On 20/09/2015 At 19:30 Hrs

ಅಪಘಾತ ಪ್ರಕರಣಗಳು
  • ಮಲ್ಪೆ: ಪಿರ್ಯಾದಿದಾರರಾದ ಶೇಖರ್‌ಲೋಬೊ (17), ತಂದೆ: ನೆಲ್ಸನ್‌ಲೋಬೊ, ವಾಸ: ನೇಜಾರು ಸಂತೆಕಟ್ಟೆ ಅಂಚೆ, ಮೂಡುತೋನ್ಸೆ ಗ್ರಾಮ, ಉಡುಪಿ ತಾಲೂಕು ಇವರು  ದಿನಾಂಕ 18/09/2015 ರಂದು ಸೈಕಲ್ ನಲ್ಲಿ ಶಾಲೆಗೆ ಹೋಗಿ ಪಾಪಾಸ್ಸು ಮನೆಗೆ ಬರುತ್ತಿರುವಾಗ 12:30 ಗಂಟೆಗೆ ಮೂಡುತೋನ್ಸೆ ಗ್ರಾಮದ ನೇಜಾರು ಮಸೀದಿ ಬಳಿ ಬಲಕ್ಕೆ ತಿರುಗಿ ಹೋಗುವಾಗ ಹಿಂದಿನಿಂದ ಸಂತೆಕಟ್ಟೆ ಕಡೆಯಿಂದ ಕೆಮ್ಮಣ್ಣು ಕಡೆಗೆ  ಕೆಎ 20 ಎ 4716 ನೇ ಟೆಂಪೋ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶೇಖರ್‌ಲೋಬೊ ರವರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸೈಕಲ್ ಸಮೇತ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು ಶೇಖರ್‌ಲೋಬೊ ರವರ ಬಲ ಕೈಯ ಬೆರಳಿಗೆ ಹಾಗೂ ಬಲ ಕಾಲಿಗೆ ರಕ್ತಗಾಯವಾಗಿದ್ದು ಟೆಂಪೋ ಚಾಲಕ ಹಾಗೂ ಇತರರು ಅವರನ್ನು ಚಿಕಿತ್ಸೆಯ ಬಗ್ಗೆ ಹೈ- ಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 18/09/2015 ರಂದು 22:30 ಗಂಟೆಗೆ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ಪಿರ್ಯಾದಿದಾರರಾದ ತಮ್ಮಯ್ಯ ನಾಯ್ಕ (67), ತಂದೆ: ದಿ.ಕುಷ್ಟ ನಾಯ್ಕ, ವಾಸ: ಹಲಸಿನಕಟ್ಟೆ ಮನೆ ಕೊಡ್ಲಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಆರೋಪಿತ ರಾಮ ಮೊಗವೀರ ಇವರಿಗೆ ಸೇರಿದ ಕೆಎ  20 ಇಇ 5762 ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಹೋಗುತ್ತಿರುವಾಗ ರಾಮ ಮೊಗವೀರ ರವರು ಮೋಟಾರ್‌ ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು ಇದರ ಪರಿಣಾಮ ಸವಾರ ಹಾಗೂ ಸಹಸವಾರ ಮೋಟಾರ್ ಸೈಕಲ್ ಸಮೇತ ಎಸ್ತೆಗೆ ಬಿದ್ದಿದ್ದು ಇದರಿಂದ ತಮ್ಮಯ್ಯ ನಾಯ್ಕ ರವರ ಬಲಕಾಲಿನ ಮಣಿಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 185/2015  ಕಲಂ:279, 338 ಐಪಿಸಿ  ಮತ್ತು 134 (b) IMV ACT ನಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಲ್ಪೆ: ಪಿರ್ಯಾದಿದಾರರಾದ ಹರೀಶ ಎನ್ ಶೇರಿಗಾರ್ (35), ತಂದೆ: ನಾರಾಯಣ ಶೇರಿಗಾರ್, ವಾಸ: ಕನ್ನರ್ಪಾಡಿ ಕಡೇಕಾರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಅಣ್ಣನಾದ ಬಾಲಕೃಷ್ಣ (38) ಇವರು ದಿನಾಂಕ 19/09/2015 ರಂದು ಕಡೇಕಾರು ಗ್ರಾಮದ ಕನ್ನರ್ಪಾಡಿಯ ಅವರ ಮನೆಯಲ್ಲಿ ರಾತ್ರಿ 11:00 ಗಂಟೆಯ ಸಮಯಕ್ಕೆ ಊಟ ಮಾಡಿ ಮಲಗಿದವರು ರಾತ್ರಿ ಮತನಾಡದ ಸ್ಧಿತಿಯಲ್ಲಿದ್ದು ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2015, ಕಲಂ: 174  ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 

  • ಮಲ್ಪೆ: ಪಿರ್ಯಾದಿದಾರರಾದ ಮಧು (36), ತಂದೆ: ಸಂಜೀವ ಸಲ್ಯಾನ್, ವಾಸ: ಹನುಮಾನ್ ನಗರ ಮಲ್ಪೆ ಕೊಳ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 11/08/2015 ರಂದು ಬೆಳಿಗ್ಗೆ  7:00 ಗಂಟೆಗೆ ಮಲ್ಪೆ ಬೀಚ್ ನ ಕೊಳದ ಪಂಚಾಕ್ಷರಿ ಭಜನ ಮಂದಿರದ ಹತ್ತಿರ ಹೋಗುತ್ತಿರುವಾಗ ಸುಮಾರು 35 ರಿಂದ 40 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಅಸ್ವಸ್ಧನಾಗಿ ಬಿದ್ದಿದ್ದು ಆತನ ಹೆಸರು ಸುರೇಶ ಎಂದು ತಿಳಿಸಿದ್ದು ಮಧು ರವರು ಅವನನ್ನು 108 ವಾಹನದಲ್ಲಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ದಿನಾಂಕ 25/08/2015 ರಂದು 9:00 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುರೇಶನು ಮೃತ ಪಟ್ಟಿರುವುದಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2015, ಕಲಂ: 174  ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

    No comments: