Sunday, September 20, 2015

Daily Crime Reported As On 20/09/2015 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ರಾಮ ಪೂಜಾರಿ (56), ತಂದೆ: ದಿ. ಬಚ್ಚ ಪೂಜಾರಿ, ವಾಸ: ಅರಾಲುಗುಡ್ಡೆ, ಹಳೆ ಅಳಿವೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರ ತಾಯಿ ಶ್ರೀಮತಿ ಅಕ್ಕು ಪೂಜಾರ್ತಿ (90) ಇವರು ದಿನಾಂಕ 19/09/2015 ಸಂಜೆ 7:00 ಗಂಟೆಯಿಂದ ದಿನಾಂಕ 20/09/2015 ರಂದು ಬೆಳಿಗ್ಗೆ 09:00 ಗಂಟೆ ನಡುವಿನ ಸಮಯದಲ್ಲಿ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಹಳೆ ಅಳಿವೆ ಎಂಬಲ್ಲಿ ಸಿಪ್ರಿಯಾ ಮೇನೆಜಸ್‌ ಎಂಬುವವರಿಗೆ ಸೇರಿದ ಕೆರೆಗೆ ರಾತ್ರಿ ಸಮಯ ನಡೆದುಕೊಂಡು ಹೋಗುವಾಗ ದಾರಿ ಕಾಣದೆ ಆಕಸ್ಮಾತ್ತಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2015 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   
ಕಳವು ಪ್ರಕರಣ
  • ಹಿರಿಯಡ್ಕ: ದಿನಾಂಕ 19/09/2015 ರಂದು 20:00 ಗಂಟೆಯಿಂದ ದಿನಾಂಕ 20/09/2015 ರ ಬೆಳಿಗ್ಗೆ 07:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿದಾರರಾದ ಶ್ರೀ ಬಿ ಕೃಷ್ಣಪ್ಪ ಕಾಂಚನ್ (52), ತಂದೆ: ಅಣ್ಣಯ್ಯ ಬಂಗೇರ, ವಾಸ : ಗೀತಾಕೃಷ್ಣ, ಮುತ್ತೂರು ಕ್ರಾಸ್, ಕೊಂಡಾಡಿ, ಬೊಮ್ಮರಬೆಟ್ಟು ಗ್ರಾಮ ಉಡುಪಿ ತಾಲೂಕು ಇವರ ಗೀತಾಕೃಷ್ಣ  ಎಂಬ ಮನೆಯ ಮುಂದಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಬಲತ್ಕಾರವಾಗಿ ತೆರೆದು ಮನೆಯ ಒಳಗಡೆ ಪ್ರವೇಶಿಸಿ ಮನೆಯ ಕೋಣೆಯ ಕಪಾಟಿನಲ್ಲಿಟ್ಟಿದ್ದ ನಗದು ರೂಪಾಯಿ 2,500/- ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/2015 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

No comments: