ಇತರೇ ಪ್ರಕರಣ
- ಕುಂದಾಪುರ: ದಿನಾಂಕ:19/09/2015 ರಂದು 19:30 ಗಂಟೆಗೆ ನಾಸೀರ್ ಹುಸೇನ್ ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ, ಕುಂದಾಪುರ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿಯವರ ಜೊತೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಚಕ್ ಪೋಸ್ಟ್ ಬಳಿ ವಾಹನವನ್ನು ತಪಾಸಣೆ ಮಾಡುವ ಸಮಯ ಸೌಕೂರು ಕಡೆಯಿಂದ ಬರುತ್ತಿದ್ದ ಓಮಿನಿ ಕಾರು ನಂಬ್ರ ಕೆಎ 20 ಬಿ 6072 ನೇದನ್ನು ನಿಲ್ಲಿಸಲು ಸೂಚನೆ ನೀಡಿದ್ದು ಆದರೆ ವಾಹನವನ್ನು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು, ಸದ್ರಿ ಕಾರನ್ನು ಬೆನ್ನಟ್ಟಿದಾಗ ಕಾರು ಚಾಲಕ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿ ಹೋಗಿ ತಪ್ಪಿಸಿಕೊಂಡಿದ್ದು ಆಪಾದಿತನು ಒಂದು ಜಾನುವಾರುವನ್ನು ಮಾರುತಿ ಓಮಿನಿ ಕಾರಿನಲ್ಲಿ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿದ್ದು, ಯಾವುದೇ ಪರವಾನಿಗೆ ಇಲ್ಲದೆ ಸದ್ರಿ ಜಾನುವಾರುವನ್ನು ಕಡಿದು ಮಾಂಸ ಮಾಡಲು ಸಾಗಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು, 1-ಜಾನುವಾರುವನ್ನು ಹಾಗೂ ಓಮಿನಿ ಕಾರು ಸ್ವಾದೀನಪಡಿಸಿಕೊಳ್ಳಲಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 307/2015 ಕಲಂ. 379 ಐಪಿಸಿ. ಮತ್ತು KARNTAKA PREVENTION OF COW SLANGHTER & CATTLE PREVENTION ACT-1964 - (U/s-4,5,8,11)ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment