Saturday, September 19, 2015

Daily Crime Reported As On 19/09/2015 At 17:00 Hrs

ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 18/09/2015 ರಂದು ಪಿರ್ಯಾದಿದಾರರಾದ ದಿನಕರ ಪೂಜಾರಿ (42), ತಂದೆ: ದಿ ರಾಮ ಪೂಜಾರಿ, ವಾಸ: ರಾಗಿಹಕ್ಲು ಹೇರೂರು ಗ್ರಾಮ ಕುಂದಾಪುರ ತಾಲೂಕು ಇವರು ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ಯು 1670 ನೇದರಲ್ಲಿ ಬೈಂದೂರಿನಿಂದ ತ್ರಾಸಿ ಕಡೆಗೆ ಸವಾರಿ ಮಾಡಿಕೊಂಡು ಸಂಜೆ 05:10 ಗಂಟೆಯ ಸಮಯಕ್ಕೆ ನಾವುಂದ ಗ್ರಾಮ ಬಡಾಕೆರೆ ಕ್ರಾಸ್ ಬಳಿ ತಲುಪುವಾಗ ಬಡಾಕೆರೆ ರಸ್ತೆಯಿಂದ ಟಾಟಾ ಮ್ಯಾಜಿಕ್ ಕೆಎ 20 ಡಿ 2272 ನೇಯದನ್ನು ಅದರ ಚಾಲಕ ಅರ್ಥರ್ ಎಂಬುವವರು ತನ್ನ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ದಿನಕರ ಪೂಜಾರಿ ಯವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ದಿನಕರ ಪೂಜಾರಿ ಯವರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ಎಡಕೈ ಮೂಳೆ ಮುರಿತ ಒಳಜಖಂ ಆಗಿ ಎಡ ಕಣ್ಣು, ಕುತ್ತಿಗೆಯ ಎಡಬಾಗ ಒಳನೋವು ಆಗಿರುತ್ತದೆ. ದಿನಕರ ಪೂಜಾರಿ ಯವರನ್ನು ಅಲ್ಲಯೇ ಇದ್ದ ಚಂದ್ರ ಪೂಜಾರಿಯವರು ಉಪಚರಿಸಿ 108 ಅಂಬುಲೆನ್ಸ್‌ ನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 248/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
ಹಲ್ಲೆ ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿದಾರರಾದ ಉಮೇಶ್ ಪೂಜಾರಿ (33), ತಂದೆ: ಶಂಕರ ಪೂಜಾರಿ, ವಾಸ: ಮಿಲ್ಕ್ ಡೈರಿ ಬಳಿ ಅಂಪಾರು ಗ್ರಾಮ ಕುಂದಾಪುರ ತಾಲೂಕು ಇವರು ಅಂಪಾರು ಗಣೇಶೋತ್ಸವ ಕಾರ್ಯಕ್ರಮಕ್ಕೆ ಬಂದವರು ದಿನಾಂಕ 19/09/2015 ರಂದು ರಾತ್ರಿ 02:00 ಗಂಟೆಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಅಂಪಾರು ಸೊಸೈಟಿಯ ಬಳಿ ಇದ್ದಾಗ ಅಲ್ಲಿಗೆ ಬಂದ ಆರೋಪಿ ವಸಂತ ಶೆಟ್ಟಿ ಅಂಪಾರು ಯಾವುದೋ ಹಳೆ ದ್ವೇಷದಿಂದ ಕೋಪಗೊಂಡು ಉಮೇಶ್ ಪೂಜಾರಿ ಯವರ ಕುತ್ತಿಗೆಯ ಬಳಿ ಚೂರಿಯಿಂದ ಹಲ್ಲೆ ಮಾಡಿರುತ್ತಾನೆ, ಇದರ ಪರಿಣಾಮ  ಉಮೇಶ್ ಪೂಜಾರಿಯವರಿಗೆ ಕುತ್ತಿಗೆಯ ಬಳಿ ಗಂಭೀರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 184/15 ಕಲಂ: 326 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ಮನ್ಸೂರ್‌ಆಲಿ (31), ತಂದೆ: ಎಮ್‌.ಹೆಚ್‌ ಯೂಸುಫ್‌, ವಾಸ.: ಗಾಳದಕಟ್ಟೆ ಬ್ರಹ್ಮಾವರ ಕುಮ್ರಗೋಡು ಗ್ರಾಮ ಇವರ ಹೆಂಡತಿ ಅಪ್ಸತ್‌ ಎಂಬುವವರ ಹೆಸರಿನಲ್ಲಿರುವ ಮಾರುತಿ ರಿಡ್ಜ್‌ ಕಾರು ನಂಬ್ರ ಕೆಎ 20 ಜಡ್‌ 5622 ನೇದನ್ನು 2013 ಇಸವಿ ನವಂಬರ್‌ ತಿಂಗಳಲ್ಲಿ ಆರೋಪಿ ಎನ್‌.ಎಮ್‌.ಎ ಸಿದ್ದಿಕಿ (30), ತಂದೆ: ದಿ: ಮೊಯ್ದಿನ್‌, ವಾಸ: ಎಮ್‌.ಎಫ್‌.ಸಿ ಚಿಕ್ಕನ್‌ ಸೆಂಟರ್‌ ಕಂಕನಾಡಿ ಅಥೆನ್ಸ್‌ ಆಸ್ಪತ್ರೆ ಬಳಿ ಮಂಗಳೂರು ತಾಲೂಕು ದ.ಕ. ಜಿಲ್ಲೆ ಇವರಿಗೆ ಬಾಡಿಗೆ ನೆಲೆಯಲ್ಲಿ  ಫೆಬ್ರವರಿ 2014 ನೇ ಇಸವಿ ತನಕ ಬಾಡಿಗೆ ಕೊಟ್ಟಿದ್ದು ನಂತರ ದಿನಾಂಕ 18/03/2014 ರಂದು 4 ವರ್ಷಕ್ಕೆ ಸಂಬಂಧಿಸಿ ಕರಾರು ಮಾಡಿ ತಿಂಗಳಿಗೆ ರೂಪಾಯಿ 25,000/- ಬಾಡಿಗೆ ಕೊಡುವಂತೆ ಆರೋಪಿಗೆ ಬಾಡಿಗೆಗೆ ನೀಡಿರುತ್ತಾರೆ. ಆದರೆ ಆರೋಪಿಯು ಈ ತನಕ ಕರಾರಿನಂತೆ ಬಾಡಿಗೆ ಕೊಡದೆ ಕಾರನ್ನು ಹಿಂತಿರುಗಿಸದೇ ಮನ್ಸೂರ್‌ಆಲಿ ಯವರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿ ರೂಪಾಯಿ 6,00,000/- ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 183/2015 ಕಲಂ: 406,  420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

No comments: