ಅಪಘಾತ ಪ್ರಕರಣ
- ಹೆಬ್ರಿ: ಪಿರ್ಯಾದಿದಾರರಾದ ದಾಮೋದರ್ (35), ತಂದೆ: ದಿ.ಸೀನಾ ಸುವರ್ಣ, ವಾಸ: ಬಿಳಿಯೂರು, ಅಚ್ಚರಿಕಟ್ಟೆ, ಪಡುಮಾರ್ನಾಡು ಗ್ರಾಮ, ಮೂಡುಬಿದ್ರೆ ತಾಲೂಕು ಇವರು ಶ್ರೀ ರಾಮ ನಾಸಿಕ್ ಬ್ಯಾಂಡ್ ಎಂಬ ಹೆಸರಿನ ಬ್ಯಾಂಡ್ ತಂಡ ಹೊಂದಿದ್ದು ಮುದ್ರಾಡಿ ಗಣೇಶ ವಿಸರ್ಜನೆಯ ಕಮಿಟಿಯವರ ಆಹ್ವಾನದ ಮೇರೆಗೆ ದಿನಾಂಕ 18/09/2015 ರಂದು ದಾಮೋದರ್ ರವರು ಹಾಗೂ ಅವರ ತಂಡದವರು ಮುದ್ರಾಡಿಗೆ ಬಂದಿದ್ದು ಸಂಜೆ 4:30 ಗಂಟೆಗೆ ಕಾರ್ಕಳ ತಾಲೂಕು ಮುದ್ರಾಡಿ ಗ್ರಾಮದ ಮುದ್ರಾಡಿಯ ಪೇಟೆಯ ಜಂಕ್ಷನ್ ಬಳಿ ಗಣೇಶ್ ವಿಸರ್ಜನಾ ಮೆರವಣಿಗೆಯ ಕೆಎ 20 ಬಿ 7608 ನೇ ಲಾರಿಯಲ್ಲಿ ಗಣೇಶ್ ವಿಗ್ರಹವನ್ನು ಕುಳ್ಳಿರಿಸಿಕೊಂಡು ವಿಸರ್ಜನೆ ಮಾಡುವ ಸಲುವಾಗಿ ಹೋಗುತ್ತಿರುವಾಗ ಲಾರಿಯ ಚಾಲಕ ಭುಜಂಗ ಹೆಗ್ಡೆ ಲಾರಿಯನ್ನು ಮುದ್ರಾಡಿ ಪೇಟೆ ಸರ್ಕಲ್ ನಿಂದ ಭಕ್ರೆ ಮಠದ ಕಡೆಗೆ ನಿರ್ಲಕ್ಷತನದಿಂದ ಒಮ್ಮೆಲೆ ವೇಗವಾಗಿ ಮುಂದಕ್ಕೆ ಚಲಾಯಿಸಿಕೊಂಡು ಬಂದು ಲಾರಿಯ ಮುಂದಿನಿಂದ ನಾಸಿಕ್ ಬ್ಯಾಂಡ್ ನ್ನು ಬಡಿಯುತ್ತಾ ಹೋಗುತ್ತಿದ್ದ ನಾಸಿಕ್ ಬ್ಯಾಂಡ್ ನ ತಂಡದ ಅಭೀಜಿತ್ (18) ಎಂಬುವವರಿಗೆ ಹಾಗೂ ಮರೆವಣಿಗೆಯಲ್ಲಿ ಹೋಗುತ್ತಿದ್ದ ಬೊಗ್ಗು ಹರಿಜನ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅಭಿಜಿತ್ ರವರು ರಸ್ತೆಗೆ ಬಿದ್ದು ಅವರ ತಲೆಯ ಮೇಲೆ ಲಾರಿಯ ಚಕ್ರ ಹಾದು ಹೋಗಿ ಎದುರಿನಲ್ಲಿ ಹೋಗುತ್ತಿದ್ದ ಕೆಎ 19 ಡಿ 6526 ನೇ ಪಿಕಪ್ ವಾಹನಕ್ಕೆ ತಾಗಿ ನಿಂತಿದ್ದು, ಕೂಡಲೇ ಗಾಯಾಳು ಅಬೀಜಿತ್ ರವರನ್ನು ಚಿಕಿತ್ಸೆಯ ಬಗ್ಗೆ ಸಂಜೆ 5:00 ಗಂಟೆಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರಲ್ಲಿ ತೋರಿಸಿದಾಗ ಆತನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2015 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment