Friday, September 18, 2015

Daily Crime Reported As On 18/09/2015 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ಆಲ್ಬರ್ಟ್‌ ವಿಲಿಯಂ ಸೋನ್ಸ್‌(66), ತಂದೆ: ದಿ.ಇಮಾನುವೆಲ್‌ ಪೀಟರ್‌ಸೋನ್ಸ್‌, ವಾಸ: 30-12(8)(9) ಪ್ರಸನ್ನಿ ಇಮಾನುವೆಲ್‌ವಿಲ್ಲಾ, ಮುಖ್ಯರಸ್ತೆ, ಮಲ್ಪೆ ಕೊಡವೂರು ಗ್ರಾಮ ಇವರು ತಮ್ಮ ಮಲ್ಪೆ ಮುಖ್ಯ ರಸ್ತೆಯಲ್ಲಿರುವ ಸ್ವರ್ಣ ಚಿಕನ್ ಸೆಂಟರ್‌ನ ಹಿಂದಿರುವ ಮನೆ ಹಾಗೂ ಮನೆಯ ಪಕ್ಕದ ಜಾಗವನ್ನು ಅವರು ಆಗಾಗ ಸ್ವಚ್ಚಗೊಳಿಸಲು ಹೋಗಿಬರುತ್ತಿದ್ದು, ಅಂತೆಯೇ ಅವರು 20 ದಿನಗಳ ಹಿಂದೆ ಕೂಲಿಯಾಳುಗಳನ್ನು ಕರೆದುಕೊಂಡು ಹೋಗಿ ಸ್ವಚ್ಚಗೊಳಿಸಿರುತ್ತಾರೆ, ದಿನಾಂಕ 18/09/2015 ರಂದು ಬೆಳಿಗ್ಗೆ 10:00 ಗಂಟೆಗೆ ಅದೇ ಜಾಗಕ್ಕೆ ಸ್ವಚ್ಚಗೊಳಿಸಲು ಹೋಗಿದ್ದಾಗ ಅವರ ಜಾಗದಲ್ಲಿದ್ದ ಬಾವಿಗೆ ಹಾಕಿದ ಬಲೆಯು ಸರಿದಿರುವುದನ್ನು ಕಂಡು ಬಾವಿಗೆ ಇಣುಕಿ ನೋಡಿದಾಗ ಬಾವಿಯಲ್ಲಿ ಒಂದು ಗಂಡಸಿನ ಮೃತದೇಹವು ಕವುಚಿ ಮಲಗಿಕೊಂಡಿರುವ ಸ್ಥಿತಿಯಲ್ಲಿದ್ದು, ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ಮೃತನ ಗುರುತು ಪರಿಚಯ ಇರುವುದಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2015 ಕಲಂ: 174(3)(iv) ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

2 comments:

JAYADEVA PRASAD MOLEYAR said...

I wuld like to know the email id of Mr Annamalai, SP in order to send him some suggestions/ideas

Jayadev

JAYADEVA PRASAD MOLEYAR said...

Sorry. Clarification: My suggestions have nothing to do with this post. They are of general nature