Friday, September 18, 2015

Daily Crime Reported As On 18/09/2015 At 17:00 Hrs

ವಂಚನೆ ಪ್ರಕರಣ
  • ಮಣಿಪಾಲ: ಪಿರ್ಯಾದಿ ಗುರುಚರಣ್‌ ಸಾವೋ ಇವರು ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ  ಖಾತೆ  ಹೊಂದಿದ್ದು ದಿನಾಂಕ 17.09.2015 ರಂದು  ಸಂಜೆ 4:26 ಗಂಟೆಗೆ ಪಿರ್ಯಾದಿದಾರರ  ಮೊಬೈಲ್ ಗೆ ಕರೆ ಮಾಡಿ  ತಾನು ಬ್ಯಾಂಕ್‌‌ನ ಸಿಬ್ಬಂದಿ ಬ್ಯಾಂಕ್‌‌ನಿಂದ ಮಾತನಾಡುವುದೆಂದು ತಿಳಿಸಿ ಪಿರ್ಯಾದಿದಾರರಿಗೆ ಬ್ಯಾಂಕಿಗೆ ಬರುವಂತೆ ತಿಳಿಸಿದನು. ಪಿರ್ಯಾದಿದಾರರು ತನಗೆ ಈಗ ಬರಲು ಸಾಧ್ಯವಿಲ್ಲವೆಂದು ತಿಳಿಸಿದಾಗ ಪಿರ್ಯಾದಿದಾರರ ಆಧಾರ್‌‌ಕಾರ್ಡ್‌ನ ನಂಬರ್‌ ಹಾಗೂ ಎಟಿಎಮ್‌ ಕಾರ್ಡ್‌ ನಂಬ್ರ ಹಾಗೂ ಪಿನ್‌‌ ನಂಬ್ರ ಕೇಳಿದಂತೆ ಪಿರ್ಯಾದಿದಾರರು ಆ ವ್ಯಕ್ತಿಗೆ ತಿಳಿಸಿದ್ದು ಬಳಿಕ ಪಿರ್ಯಾದಿದಾರರ ಖಾತೆಯಿಂದ 14,300/ ರೂಪಾಯಿಯ ವರ್ಗಾವಣೆ ಆಗಿರುತ್ತದೆ. ಆಪಾದಿತನು ಪಿರ್ಯಾದಿದಾರರ ಎ.ಟಿ.ಎಂ ನಂಬ್ರವನ್ನು ಉಪಯೋಗಿಸಿ ಪಿರ್ಯಾದಿದಾರರ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿ ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 186/15 ಕಲಂ 66(ಸಿ),66(ಡಿ) ಐಟಿ ಕಾಯಿದೆ & ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 17/09/2015 ರಂದು ಸಮಯ ಸುಮಾರು ಮಧ್ಯಾಹ್ನ 3:30 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕಾಮಧೇನು ಫ್ಯಾಕ್ಟರಿಯ ಬಳಿ  ರಸ್ತೆಯಲ್ಲಿ ಆಪಾದಿತ  ಪ್ರಕಾಶ  ಪೂಜಾರಿ  ಎಂಬವರು KA20-X-5399ನೇ ಬೈಕನ್ನು ಹಾಲಾಡಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲ ಬದಿಗೆ ಬಂದು ಪಿರ್ಯಾದಿ ವಿನಾಯಕ ಪೂಜಾರಿ ಇವರು ಕೊಟೇಶ್ವರ  ಕಡೆಯಿಂದ ಹಾಲಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA41-EC-7622 ನೇ ಟಿ.ವಿ.ಎಸ್‌ ಜುಪಿಟರ್ ಸ್ಕೂಟರ್ ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 114/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: