ಅಪಘಾತ ಪ್ರಕರಣ
- ಶಿರ್ವಾ: ದಿನಾಂಕ 26/04/2015 ರಂದು ಪಿರ್ಯಾದಿದಾರರಾದ ಇಂದ್ರೇಶ್(31), ತಂದೆ: ಪದ್ಮನಾಭ, ವಾಸ:ಶಿನಾ ನಿವಾಸ ಕಡಿಯಾಳೀ ಉಡುಪಿ ಇವರ ಅಜ್ಜನ ಮನೆಯಾದ ಬೆಳ್ಮಣ್ಣುವಿನಲ್ಲಿ ಮೀನು ಕೊಂಡು ಹೋಗಲು ಅವರ ಮಾಲಿಕರಾದ ವಿಶ್ವನಾಥ ಎಂಬುವವರ ಮೋಟಾರ್ ಸೈಕಲ್ ನಂಬ್ರ ಕೆ 20 ಎಕ್ಸ್ 2248 ನೇದ ರಲ್ಲಿ ವಿಶ್ವನಾಥರವರು ಚಲಾಯಿಸಿಕೊಂಡು ಇಂದ್ರೇಶ್ ರವರು ಸಹ ಸವಾರರಾಗಿ ಕುಳಿತುಕೊಂಡು ಮಲ್ಪೆಯಿಂದ ಬೆಳ್ಮಣ್ಣು ಕಡೆ ಹೊರಟಿದ್ದು ಬೆಳಿಗ್ಗೆ 05:30 ಗಂಟೆಗೆ ಬಂಟಕಲ್ಲು ರೋಟರಿ ಸಮುದಾಯ ಭವನ ತಲುಪುವಾಗ ವಿಶ್ವನಾಥ ರವರು ತನ್ನ ಮೋಟಾರ್ ಸೈಕಲ್ ನ್ನು ಒಮ್ಮೆಲೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸ್ಕೀಡ್ ಆಗಿ ಮೋಟಾರ್ ಸೈಕಲ್ ಸಮೇತ ಸವಾರ ಹಾಗೂ ಸಹ ಸವಾರರು ರಸ್ತೆಗೆ ಬಿದ್ದು ಇಂದ್ರೇಶ್ ರವರ ಎಡಕಾಲಿಗೆ ರಕ್ತಗಾಯ ಹಾಗೂ ವಿಶ್ವನಾಥ ರವರಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಮಲ್ಪೆ: ಪಿರ್ಯಾದಿದಾರರಾದ ಮೋಹನ ಕಾಂಚನ್ (43), ತಂದೆ:ವಿಠಲ ಕಾಂಚನ್, ವಾಸ:ಕವಿತಶ್ರೀ, ಶಿವಪಂಚಾಕ್ಷರಿ ಭಜನಾ ಮಂದಿರದ ಹತ್ತಿರ, ಕೊಡವೂರು ಗ್ರಾಮ ಇವರಿಗೆ ದಿನಾಂಕ 17/09/2015 ರಂದು ಬೆಳಿಗ್ಗೆ 6:30 ಗಂಟೆಗೆ ಸ್ನೇಹಿತರೊಬ್ಬರು ಪೋನ್ ಕರೆ ಮಾಡಿ ಶಿವಪಂಚಾಕ್ಷರಿ ಭಜನಾ ಮಂದಿರದ ಎದುರು ಸಮುದ್ರದ ದಡದಲ್ಲಿ ಮೃತಶರೀರ ಇರುವ ಬಗ್ಗೆ ತಿಳಿಸಿದ್ದು ಹೋಗಿ ನೋಡಿದಾಗ ಸಮುದ್ರದ ದಡದಲ್ಲಿ ಒಂದು ಗಂಡಸಿನ ಮೃತ ದೇಹವು ಅಂಗಾತನೆ ಬಿದ್ದುಕೊಂಡಿದ್ದು, ಸುಮಾರು 25-26 ವರ್ಷ ಆಗಿರಬಹುದು, ಮೃತದೇಹದ ಬಲಕೈ ತೋಳಿನ ಮೇಲೆ 5-10 ಇಂಚು ಉದ್ದದ ಹೂವಿನ ಚಿತ್ರ ಟ್ಯಾಟೂ ಹಾಕಿದ ಮಾರ್ಕ್ ಇದ್ದು ಅದರ ಬಳಿ A-S-B ಎಂದು ಟ್ಯಾಟೂನಿಂದ ಬರೆದಿರುತ್ತದೆ. ಈ ವ್ಯಕ್ತಿಯು ಯಾವ ರೀತಿಯಲ್ಲಿ ಮೃತಪಟ್ಟಿರಬಹುದೆಂದು ತಿಳಿದಿರುವುದಿಲ್ಲ ಹಾಗೂ ಮೃತನ ಗುರುತು ಪರಿಚಯವಿರುವುದಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2015, ಕಲಂ: 174(3)(iv) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕೋಟ: ಪಿರ್ಯಾದಿದರರಾದ ಪರಮೇಶ ಎ.ಡಿ (27), ತಂದೆ: ದೊಡ್ಡಚಿಕ್ಕೇರಯ್ಯ, ವಾಸ: ಹೆಬ್ಬಾಲೆ ಅಂಚೆ, ಅತೀನಿ ಗ್ರಾಮ, ಅರಕಲಗೊಡು ತಾಲೂಕು ಹಾಸನ ಜಿಲ್ಲೆ ಇವರು ಎಸ್‌ಎನ್‌ಡಿಪಿ ಬಸ್ಸಿನ ಡ್ರೈವರ್ ಆಗಿದ್ದು ದಿನಾಂಕ 17/09/2015 ರಂದು ಬಸ್ಸನ್ನು ಕೊಲ್ಲೂರಿನಿಂದ ಚಲಾಯಿಸಿಕೊಂಡು ಬರುತ್ತಾ 12:25 ಗಂಟೆಗೆ ಸಾಸ್ತಾನ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿರುವಾಗ ಕೆಎ 19 ಸಿ 6703 ನೇ ಲಕ್ಷ್ಮಿ ಎಕ್ಸ್ ಪ್ರೆಸ್ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಏಕಾಏಕಿ ಬಂದು ಬಸ್ಸಿನ ಸಮಯದ ವಿಚಾರವಾಗಿ ಪರಮೇಶ ರವರ ಮೈಗೆ ಮತ್ತು ಕೈಗೆ ದೊಣ್ಣೆಯಿಂದ ಮತ್ತು ಕೈಯಿಂದ ಹೊಡೆದ ಪರಿಣಾಮ ಪರಮೇಶ ರವರ ಮುಖ ಮತ್ತು ಮೂಗಿನಲ್ಲಿ ರಕ್ತ ಬಂದಿರುತ್ತದೆ. ಆಪಾದಿತರು ಪರಮೇಶ ರವರಿಗೆ ಅವಾಚ್ಯವಾಗಿ ಬೈದು ಹೊಡೆದಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 207/2015 ಕಲಂ: 323, 324, 504, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಶಿರ್ವಾ: ದಿನಾಂಕ 25/4/2015 ರಂದು ಸಂಜೆ 5:00 ಗಂಟೆಗೆ ಆರೋಪಿತರಾದ ವಿಲಿಯಂ ದಾಲ್ಮೇಡಾ ಮತ್ತು ಚಾರ್ಲ್ಸ ದಾಲ್ಮೇಡಾ ಇವರು ಪಿರ್ಯಾದಿದಾರರಾದ ಸ್ಟ್ಯಾನಿ ಪಿಂಟೋ, ತಂದೆ: ಪಿಲಿಪ್ ಪಿಂಟೋ, ವಾಸ: ಭತ್ತಗೇಣಿ ಕುತ್ಯಾರು ಗ್ರಾಮ ಇವರ ಮನೆಯ ಹತ್ತಿರ ಬಂದು ಗಲಾಟೆ ಮಾಡಿ ಸ್ಟ್ಯಾನಿ ಪಿಂಟೋ ರವರಿಗೆ, ಅವರ ಹೆಂಡತಿ ಮೇರಿ ಪಿಂಟೋ ಹಾಗೂ ಅತ್ತೆ ಸೆಲೆ ಸ್ತಿನ್ ನೊರೋನ್ಹಾ ಇವರಿಗೆ ಜೀವ ಬೆದರಿಕೆ ಹಾಕಿ ಆರೋಪಿತ ವಿಲಿಯಂ ದಾಲ್ಮೇಡಾ ಕತ್ತಿ ಹಿಡಿದು ಸ್ಟ್ಯಾನಿ ಪಿಂಟೋ ರವದಿಗೆ ಹೊಡೆಯಲು ಬಂದಾಗ ಅವರು ಓಡಿ ತಪ್ಪಿಸಿಕೊಂಡಿದ್ದು ಅಲ್ಲದೆ ಆರೋಪಿತರು ನೀರು ಬಿಸಿ ಮಾಡುವ ದೊಡ್ಡ ಕೊಡವನ್ನು ಕತ್ತಿಯಿಂದ ಬಡಿದು ತೂತು ಮಾಡಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2015 ಕಲಂ: 427, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment