ಅಸ್ವಾಭಾವಿಕ ಮರಣ ಪ್ರಕರಣ
- ಹೆಬ್ರಿ: ಪಿರ್ಯಾದಿ ಸುರೇಶ ಪೂಜಾರಿ (44) ತಂದೆ: ಪ್ರಕಾಶ ಪೂಜಾರಿ ವಾಸ: ಹೆರ್ಗಲ್ಲಿ ಚಾರಾ ಗ್ರಾಮ ಕಾರ್ಕಳ ತಾಲೂಕು ಇವರ ಮಾವ ಸಾಧು ಪೂಜಾರಿ (65) ರವರು ದಿನಾಂಕ: 16/09/2015 ರಂದು ಸಂಜೆ 3-00 ಗಂಟೆಗೆ ಚಾರಾ ಗ್ರಾಮದ ಹೇರ್ಗಲ್ಲು ಎಂಬಲ್ಲಿ ವಾದಿರಾಜ ಶೆಟ್ಟಿ ರವರ ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಯಾವುದೋ ವಿಷ ಪೂರಿತ ಹಾವು ಅವರ ಎಡಕೈಯ ಹಿಂಗೈಗೆ ಕಡಿದಿದ್ದು. ಕೂಡಲೇ ಅವರಿಗೆ ನಾಟಿ ಮದ್ದನ್ನು ಮಾಡಿ ಮನೆಗೆ ಕರೆದುಕೊಂಡು ಬಂದಿದ್ದು. ಅವರ ಅರೋಗ್ಯದಲ್ಲಿ ಎರುಪೇರು ಉಂಟಾದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ಅಂಬುಲೈನ್ಸ್ 108 ನಲ್ಲಿ ಕೊಂಡು ಹೋಗುವಾಗ ಸಮಯ ದಾರಿ ಮದ್ಯೆ ಮೃತ ಪಟ್ಟಿರುತ್ತಾರೆ, ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಯುಡಿಆರ್ ನಂ: 34/15 ಕಲಂ:174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment