ಅಪಘಾತ ಪ್ರಕರಣ
- ಕೋಟ: ಪಿರ್ಯಾದಿ ಸುಕೇಶ (22) ತಂದೆ: ವೀರ ದೇವಾಡಿಗ ವಾಸ: ಕಾರ್ಕಡ ಪಡುಬೈಲು ಕಾರ್ಕಡ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 16/09/15 ರಂದು ಕುಂದಾಪುರ ಕಡೆಯಿಂದ ಚೇಂಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಗಿಳಿಯಾರು ಗ್ರಾಮದ ಗೋ ಆಸ್ಪತ್ರೆ ಬಳಿ ತಲುಪಿದಾಗ ಮಧ್ಯಾಹ್ನ 12:20 ಗಂಟೆಗೆ ಕೆಎ 44 6755 ನೇ ಈಚರ್ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಕೆಎ 20 ಯು 1084 ನೇ ನಂಬ್ರದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ರಸ್ತೆಗೆ ಬಿದ್ದು ತಲೆ ಮತ್ತು ಬೆನ್ನಿಗೆ ರಕ್ತಗಾಯವಾದವರನ್ನು ನೋಡಲಾಗಿ ನಾಗೇಂದ್ರ ಎಂಬವರಾಗಿದ್ದು ,ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಕೋಟೇಶ್ವರದ ಎನ್‌ಆರ್ ಆಚಾರ್ಯ ಆಸ್ಪತ್ರೆಗೆ ಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 206/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಶಂಕರನಾರಾಯಣ: ದಿನಾಂಕ 17/09/2015 ರಂದು ಬೆಳಿಗ್ಗೆ 07.30 ಗಂಟೆಯಿಂದ 9.00 ಗಂಟೆಯ ಮಧ್ಯೆ ಪಿರ್ಯಾದಿ ರವೀಂದ್ರ ಶೆಟ್ಟಿ(39) ತಂದೆ: ಶಿವರಾಮ ಶೆಟ್ಟಿ ವಾಸ:ಭಾಗೀಮನೆ ಹೊಸಂಗಡಿ ಗ್ರಾಮ ಕುಂದಾಪುರ ಇವರ ತಮ್ಮ ಪ್ರಕಾಶ ಶೆಟ್ಟಿ (32)ಎಂಬವರು ವಿಪರೀತ ಶರಾಬು ಕುಡಿಯವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಕುಡಿದು ಶಂಕರನಾರಾಯಣ ಬಸ್ ನಿಲ್ದಾಣದಲ್ಲಿ ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಯುಡಿಆರ್ ನಂ: 12/15 ಕಲಂ:174 ಸಿಆರ್ ಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕಾರ್ಕಳ:ಲೋಕೇಶ (30) ಈತನು ತನ್ನ ಹೆಂಡತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು ಈತನು ಗೌರಿ ಗಣೇಶದ ಹಬ್ಬದ ಪ್ರಯುಕ್ತ ದಿನಾಂಕ: 16/09/2015 ರಂದು ಪಿರ್ಯಾದಿ ಶ್ರೀ ಪ್ರಕಾಶ ಮಡಿವಾಳ (39) ತಂದೆ: ಸೋಮಯ್ಯ ಮಡಿವಾಳ ವಾಸ: ಬೈಲು ಮನೆ, ಸಾಣೂರು ಗ್ರಾಮ ಕಾರ್ಕಳ ತಾಲೂಕುರವರ ತಾಯಿ ಮನೆಯಾದ ಸಾಣೂರು ಗ್ರಾಮದ ಶೇಡಿಗುಡ್ಡೆ ಎಂಬಲ್ಲಿಯ ಸೇಸಿ ನಿವಾಸ ಎಂಬ ಮನೆಗೆ ಬಂದಿರುತ್ತಾನೆ. ಲೋಕೇಶ ಈತನು ತನ್ನ ಹೆಂಡತಿ ಇಂದು, ಆತನ ಚಿಕ್ಕಮ್ಮನ ಮಗಳು ನಿಖಿತಾ ಹಾಗೂ ಪ್ರಜ್ವಲ್‌ರವರೊಂದಿಗೆ ಸ್ನಾನ ಮಾಡುವರೇ ಸಂಜೆ 5:30 ಗಂಟೆಗೆ ಸಾಣೂರಿನ ಶಾಂಭವಿ ಹೊಳೆಗೆ ಹೋಗಿದ್ದು ಶಾಂಭವಿ ಹೊಳೆಯಲ್ಲಿ ಲೋಕೇಶನು ಈಜುವ ಸಮಯ ನೀರಿನ ಸೆಳೆತಕ್ಕೆ ಸಿಕ್ಕಿ ವಾಪಾಸು ಬರಲು ಆಗದೇ ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಯುಡಿಆರ್ ನಂ: 32/15 ಕಲಂ:174 ಸಿಆರ್ ಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment